ಬಗೆಹರಿಯದ ಟ್ರಾಫಿಕ್ ಸಮಸ್ಯೆ
ಶಹಾಪುರ: ದಿನ ಕಳೆದಂತೆ ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ಜಟಿಲಗೊಳ್ಳುತ್ತಿದ್ದು, ಪೊಲೀಸ್ ಇಲಾಖೆ ಏನೂ ಮಾಡಲಾಗದೇ ಕೈಚೆಲ್ಲಿ ಕುಳಿತಿದೆ. ಎಲ್ಲಿ ಬೇಕೆಂದರಲ್ಲಿ ವಾಹನಗಳನ್ನು ನಿಲುಗಡೆ ಮಾಡಲಾಗುತ್ತಿದ್ದು, ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತಿದೆ.
ಪಟ್ಟಣದ ಹೃದಯ ಭಾಗದಿಂದ ಬೀದರ್ ಬೆಂಗಳೂರು ರಾಜ್ಯ ಹೆದ್ದಾರಿ ಸಾಗಿದ್ದು, ವಾಹನದಟ್ಟಣೆ ಹೆಚ್ಚಾಗಿದೆ. ಅಲ್ಲದೇ ಪಟ್ಟಣದಲ್ಲೂ ಜನ ಹಾಗೂ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಆದರೆ ಇದಕ್ಕೆ ಸರಿಯಾಗಿ ಸಂಚಾರಿ ವ್ಯವಸ್ಥೆ ಮಾತ್ರ ಸರಿಯಾಗಿ ಕಾರ್ಯರೂಪಕ್ಕೆ ಬಾರದ್ದರಿಂದ ಎಲ್ಲರೂ ಸಮಸ್ಯೆ ಎದುರಿಸುವಂತಾಗಿದೆ. ಕಾನೂನಿನ ಭಯವಿಲ್ಲದಂತಹ ವ್ಯವಸ್ಥೆಯಾಗಿದ್ದು, ಎಲ್ಲೆಂದರಲ್ಲೇ ನಿಲ್ಲುವ ವಾಹನಗಳು ಇಡೀ ರಸ್ತೆಯನ್ನು ಆಕ್ರಮಿಸಿವೆ. ಯಾರು ಯಾರನ್ನೂ ಪ್ರಶ್ನಿಸದಂತಹ ವಾತಾವರಣ ನಿರ್ಮಾಣವಾಗಿದೆ.
ಅಶಿಸ್ತು: ಪಟ್ಟಣದ ಬಸವೇಶ್ವರ ವೃತ್ತದಿಂದ ಸಿಬಿ ಕಮಾನವರೆಗೆ ಪಾದಚಾರಿಗಳು ವಾಹನಗಳ ಕಿರಿಕಿರಿಯಿಂದ ಬೇಸತ್ತು ಹೋಗಿದ್ದಾರೆ. ಖಾಸಗಿ ಬಸ್ಸುಗಳು, ದ್ವಿಚಕ್ರ ವಾಹನಗಳು ಇತರೆ ವಾಹನಗಳು ರಸ್ತೆ ಆಕ್ರಮಿಸಿಕೊಂಡು ಸಂಚಾರಿ ವ್ಯವಸ್ಥೆಯನ್ನು ಸಂಪೂರ್ಣ ಹದಗೆಡಿಸಿ ನಿಯಮ ಪಾಲನೆಯನ್ನು ಮರೆತುಬಿಟ್ಟಿದ್ದಾರೆ. ಇನ್ನು ಇತ್ತೀಚಿಗೆ ಅಳವಡಿಸಿದ ಸಿಗ್ನಲ್ ಬಗ್ಗೆ ಜಾಗೃತಿ ಮೂಡುತ್ತಿಲ್ಲ. ಕೆಲವರು ಸಿಗ್ನಲ್ಗಳನ್ನು ಅನುಸರಿಸದೇ ಪೊಲೀಸ್ ಇಲಾಖೆಗೆ ತಲೆ ನೋವಾಗಿದೆ. ದ್ವಿಚಕ್ರ ವಾಹನದ ಮೇಲೆ ಮೂವರು, ಲೈಸನ್ಸ್ ಇಲ್ಲದೆ ಚಾಲನೆ ಇವೆಲ್ಲವೂ ಮಾಮೂಲಿ ಎಂಬಂತಾಗಿದೆ.
ಪಟ್ಟಣದ ಪದವಿಪೂರ್ವ ಮಹಾವಿದ್ಯಾಲಯ, ಪುರಸಭೆ ಮುಖ್ಯರಸ್ತೆ, ಆಮಂತ್ರಣ ಹೊಟೇಲ್ ಇನ್ನಿತರ ಕಡೆ ರಸ್ತೆಯ ಇಕ್ಕೆಲಗಳಲ್ಲಿ ವಾಹನಗಳು ನಿಲುಗಡೆ ವಿಪರೀತವಾಗಿದ್ದು ಯಾರು ಕೇಳದಂಥಹ ಸ್ಥಿತಿಯಾಗಿದೆ. ಸದ್ಯ ಪೊಲೀಸ್ ಇಲಾಖೆ ಸಂಚಾರಿ ನಿಯಮ ಪಾಲನೆ ಬಗ್ಗೆ ಸಭೆ, ಜಾಗೃತಿ ಚಟುವಟಿಕೆ ಹಮ್ಮಿಕೊಂಡಿದ್ದರೂ ವ್ಯವಸ್ಥೆಯಲ್ಲಿ ಮಾತ್ರ ಸುಧಾರಣೆ ಕಂಡುಬರುತ್ತಿಲ್ಲ. ಆದ್ದರಿಂದ ವ್ಯವಸ್ಥೆ ಸುಧಾರಣೆಗೆ, ಸಮಸ್ಯೆ ಪರಿಹಾರಕ್ಕೆ ಪೊಲೀಸ್ ಇಲಾಖೆ ಕಠಿಣ ನಿಲುವು ತಾಳಬೇಕೆಂದು ನಿಸರ್ಗ ಸಂಸ್ಥೆಯ ಮಲ್ಲಯ್ಯ ಪೋಲಂಪಲ್ಲಿ ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

