ಪುರಾಣ ಶ್ರವಣ ಅಪರೂಪ; ಕಳವಳ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜೂ.18
ಪುರಾಣ- ಪುಣ್ಯಕಥೆಗಳ ಶ್ರವಣ ಇಂದಿನ ದಿನಮಾನಗಳಲ್ಲಿ ಅಪರೂಪವಾಗುತ್ತಿದೆ. ಇದು ಕಳವಳಕಾರಿ ಬೆಳವಣಿಗೆ. ಇಂದಿನ ಎಲ್ಲ ಅಪಸವ್ಯಗಳಿಗೆ ಈ ಬೆಳವಣಿಗೆಯೂ ಕಾರಣ ಎಂದು ಉತ್ತರಾದಿ ಮಠಾಧೀಶ ಸತ್ಯಾತ್ಮ ತೀರ್ಥ ಶೀಪಾದರು ಕಳವಳ ವ್ಯಕ್ತಪಡಿಸಿದರು.
ರಾಯರ ಮಠದಲ್ಲಿ ಕಳೆದ ಒಂದು ವಾರದಿಂದ ಸಾಗಿರುವ ಪಂಡಿತ ರಘುತ್ತಮಾಚಾರ್ಯ ನಾಗಸಂಪಿಗೆ ಅವರ ಭಾಗವತ ಪುರಾಣ ಮಂಗಲ ಮಹೋತ್ಸವವನ್ನು ನೆರವೇರಿಸಿದ ಅವರು, ಪುರಾಣ- ಭಾಗವತ ಸಂದೇಶದಂತಹ ಪ್ರಾಚೀನ ಗ್ರಂಥಗಳ ಶ್ರವಣ, ಮನನ ಬದುಕಿಗೆ ಗಟ್ಟಿ ನೆಲೆ ಒದಗಿಸುವ ಶಕ್ತಿ ಹೊಂದಿದ್ದು ಇನ್ನಾದರೂ ಜನತೆ ಇಂತಹ ಸತ್ಕಾಲಕ್ಷೇಪದತ್ತ ಹೆಚ್ಚಿನ ಒಲವು ತೋರಬೇಕೆಂದು ಕರೆ ನೀಡಿದರು.
ಪುರಾಣ ಶ್ರವಣದಿಂದ ಪುಣ್ಯ ಸಂಚಯ: ಪುರಾಣಗಳನ್ನು ಕೇಳಬೇಕು, ಅಲ್ಲಿನ ನೀತಿಗಳನ್ನು ಮೈಗೂಡಿಸಿಕೊಳ್ಳಬೇಕು, ಬದುಕಿನಲ್ಲಿ ಅಲ್ಲಿನ ಸಾರ- ಸಂದೇಶಗಳನ್ನು ಅನ್ವಯಿಸಿಕೊಳ್ಳಬೇಕು. ಪುರಾಣ ಶ್ರವಣದಿಂದ ಪುಣ್ಯ ಸಂಚಯವಾಗುವುದರಲ್ಲಿ ಸಂದೇಹವಿಲ್ಲ ಎಂದರು.
ವೃದ್ಧಾಶ್ರಮಕ್ಕೆ ಭೇಟಿ: ಬಹಳ ದಿನಗಳ ನಂತರ ಗುಲ್ಬರ್ಗ ಮಹಾನಗರಕ್ಕೆ ದಿಗ್ವಿಜಯ ಮಾಡಿರುವ ಶ್ರೀಗಳು ಮಠದ ಆಸರೆಯಲ್ಲಿ ಆರಂಭವಾಗಿರುವ ವೃದ್ಧಾಶ್ರಮಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಇದಲ್ಲದೆ ಬ್ರಹ್ಮಪುರ ರಾಯರಮಠದಲ್ಲಿ ಸಂಜೆ ನಡೆದ ಶ್ರೀಮದ್ಭಾಗವತ ಸಂವತ್ಸರ ಜ್ಞಾನ ಸತ್ರದ ದ್ವಿತೀಯ ಸ್ಕಂದದ ಮಂಗಳ ಮಹೋತ್ಸವದಲ್ಲೂ ಭಾಗವಹಿಸಿ ಆಶಿರ್ವಚನ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

