ಗುಲ್ಬರ್ಗಾ

ಮಳೆಗಾಗಿ ಇಂದು ವಿಶೇಷ ಪೂಜೆ

Published On :

ಯಾದಗಿರಿ: ನಗರದ ಗಂಜ್ ಬಳಿಯಿರುವ ಮೌನೇಶ್ವರ ದೇವಸ್ಥಾನದಲ್ಲಿ ಬೆ.11ಕ್ಕೆ ಮಳೆಗಾಗಿ ವಿಶೇಷ ಪೂಜೆ, ಪ್ರಾರ್ಥನೆ ನಡೆಯಲಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ರಾಜು ಹೆಂದೆ ತಿಳಿಸಿದ್ದಾರೆ. ಜಿಲ್ಲಾದ್ಯಂತ ಮಳೆ ಅಭಾವದಿಂದ ಬಿತ್ತನೆ ಕಾರ್ಯಾರಂಭವಾಗಿಲ್ಲ. ಕುಡಿವ ನೀರಿನ ಸಮಸ್ಯೆ ಇನ್ನೂ ಹಾಗೇ ಮುಂದುವರಿದಿದೆ. ಜೂನ್ ಅರ್ಧ ಮುಗಿದರೂ ಇನ್ನೂ ಮಳೆ ಕಾಲಿಟ್ಟಿಲ್ಲ. ಇದರಿಂದ ರೈತರು ಚಿಂತಾಕ್ರಾಂತರಾಗಿದ್ದಾರೆ. ಆದ್ದರಿಂದ ಈಗ ಭಗವಂತನ ಮೊರೆ ಹೋಗುವುದೊಂದೇ ಉಳಿದ ಮಾರ್ಗವಾಗಿದ್ದು, ಮಳೆಗಾಗಿ ಪ್ರಾರ್ಥಿಸಿ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಜಾತಿ, ಆದಾಯ
ಪತ್ರಕ್ಕಾಗಿ ಪರದಾಟ
ಶಹಾಪುರ: ಜಾತಿ, ಆದಾಯ, ಪಹಣಿ ಪ್ರಮಾಣಪತ್ರ ವಿತರಣೆಯಲ್ಲಿ ದಿನನಿತ್ಯ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದು, ಕಂದಾಯ ಇಲಾಖೆ ಸರಿಯಾಗಿ ಸ್ಪಂದಿಸುತ್ತಿಲ್ಲವೆಂದು ಎಬಿವಿಪಿ ಆರೋಪಿಸಿದೆ. ಈ ಕುರಿತು ಪರಿಷತ್ ರಾಜ್ಯ ಕಾರ್ಯಕಾರಿಣಿ ಸದಸ್ಯ ಅರವಿಂದ ಉಪ್ಪಿನ್, ಬೆಳೆದಿರುವ ಪಟ್ಟಣಕ್ಕೆ ಸಂಬಂಧಿಸಿದಂತೆ ಒಂದೇ ಕಡೆ ಪಹಣಿ, ಜಾತಿ, ಆದಾಯ ಪ್ರಮಾಣಪತ್ರ ವಿತರಿಸುವ ಕೇಂದ್ರವಿದ್ದು ಸರತಿ ಸಾಲಿನಿಂದ ಜನತೆ ಕೆಂಗೆಟ್ಟು ಹೋಗಿದ್ದಾರೆ. ತಕ್ಷಣವೇ ಇದನ್ನು ಸರಿಪಡಿಸಿ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ, ರೈತರಿಗೆ ಅನುಕೂಲ ಕಲ್ಪಿಸಬೇಕೆಂದು ತಹಸೀಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ.
ಐಸ್ ಫ್ಯಾಕ್ಟರಿಗೆ ಕುಡಿವ
ನೀರು ಬಳಕೆ; ಆರೋಪ
ಶಹಾಪುರ: ತಾಲೂಕಿನ ಗೋಗಿ ಕೆ. ಗ್ರಾಮದಲ್ಲಿ ಜನರಿಗೆ ಬಳಕೆಯಾಗುವ ಕುಡಿವ ನೀರು ಪ್ರಭಾವಿ ವ್ಯಕ್ತಿಯೊಬ್ಬರ ಐಸ್ ಫ್ಯಾಕ್ಟರಿಗೆ ಸಾವಿರಾರು ಲೀಟರ್ ಬಳಕೆಯಾಗುತ್ತಿದ್ದು, ಇದನ್ನು ಪಿಡಿಒ ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ ಎಂದು ದಸಂಸ ಸಂಚಾಲಕ ಮರೆಪ್ಪ ಕನ್ಯಕೋಳೂರು ಆರೋಪಿಸಿದ್ದಾರೆ. ಈ ಕುರಿತು ಮೇಲಧಿಕಾರಿಗಳಿಗೆ ದೂರು ನೀಡಿರುವ ಶರಣು ಆಕಾರ, ಮಲ್ಲಿಕಾರ್ಜುನ ದೋರನಹಳ್ಳಿ, ಜಯಾರಡ್ಡಿ ಹೊಸ್ಮನಿ, ಚಂದ್ರಶೇಕರ ದೊಡ್ಮನಿ, ಶರಣಪ್ಪ ಹೊಸ್ಮನಿ, ಕುಡಿವ ನೀರಿಗೆ ಪ್ರಸ್ತುತ ದಿನಗಳಲ್ಲಿ ಜನತೆ ಪರಿತಪಿಸುವಂತಾಗಿದೆ. ಗ್ರಾಪಂ ಈ ಕುರಿತು ಕಾಳಜಿ ವಹಿಸುವುದನ್ನು ಬಿಟ್ಟು ಯಾರದ್ದೋ ಒತ್ತಡಕ್ಕೆ ಮಣಿದು ಐಸ್ ಫ್ಯಾಕ್ಟರಿಗೆ ನೀರು ಕೊಡುವುದು ಸರಿಯಲ್ಲ. ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.