ಗುಲ್ಬರ್ಗಾ

ಕ್ರಿಯಾ ಯೋಜನೆ ಒಪ್ಪಿಗೆಗೆ ನಕಾರ

Published On :

ಕ.ಪ್ರ. ವಾರ್ತೆ, ಯಾದಗಿರಿ, ಜೂ.20
ಜಿಲ್ಲೆಯ ಅಭಿವೃದ್ಧಿಗಾಗಿ ಹಿಂದುಳಿದ ಪ್ರದೇಶಗಳ ಅಭಿವೃದ್ಧಿ ನಿಧಿ ಅಡಿಯಲ್ಲಿ 2013-14ನೇ ಸಾಲಿಗೆ ಬಿಡುಗಡೆಯಾದ ರು. 21.11 ಕೋಟಿ ಕ್ರಿಯಾ ಯೋಜನೆಗೆ ಜಿಲ್ಲಾ ಯೋಜನಾ ಸಮಿತಿ ಒಪ್ಪಿಗೆ ನೀಡದ ಕಾರಣ  ಸಭೆಯನ್ನು ಮುಂದೂಡಲಾಯಿತು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಜಿಪಂ ಆಧ್ಯಕ್ಷೆ ಮರೆಮ್ಮ ಶ್ಯಾಣೆನೋರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಕ್ರಿಯಾ ಯೋಜನೆಯ ಮೇಲೆ ನಡೆದ ಚರ್ಚೆಯಲ್ಲಿ ಕೆಲ ಸದಸ್ಯರು ಆಕ್ಷೇಪ ಎತ್ತಿದ ಕಾರಣ ಕ್ರಿಯಾ ಯೋಜನೆಗೆ ಮಂಜೂರಾತಿ ದೊರಕಲಿಲ್ಲ.  2012-13ನೇ ಸಾಲಿನಲ್ಲಿ ರು. 17.21 ಕೋಟಿ ಬಿಡುಗಡೆಯಾಗಿತ್ತು. ಪ್ರಸಕ್ತ ಸಾಲಿನಲ್ಲಿ ಈ ಯೋಜನೆಯಲ್ಲಿ ರು. 21.11 ಕೋಟಿ ಬಿಡುಗಡೆ ಮಾಡಲಾಗಿದ್ದು, ಅದನ್ನು ಜಿಲ್ಲೆಯ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಶೇ.80 ಮತ್ತು ನಗರ ಸ್ಥಳಿಯ ಸಂಸ್ಥೆಗಳಿಗೆ ಶೇ.20 ರಷ್ಟು ಅನುದಾನವನ್ನು ಹಂಚಿಕೆ ಮಾಡಲಾಗಿದೆ. ಇದಕ್ಕೆ ಒಪ್ಪಿಗೆ ನೀಡಿ ಜು.13ರೊಳಗಾಗಿ ಅನುಮೊದನೆಗೆ ಕಳುಹಿಸಬೇಕಿದೆ ಎಂದು ಜಿಪಂ ಮುಖ್ಯ ಯೋಜನಾಧಿಕಾರಿ ಬಸವರಾಜ ಸಭೆಗೆ ತಿಳಿಸಿದರು.
ಹಂಚಿಕೆ: ಗ್ರಾಮ ಪಂಚಾಯಿತಿಗಳಿಗೆ ರು. 11.70 ಕೋಟಿ(ಶೇ.70) ಕೋಟಿ, ತಾಲೂಕು ಪಂಚಾಯಿತಿಗೆ ರು. 3.36(ಶೇ.20) ಕೋಟಿ ಮತ್ತು ಜಿಲ್ಲಾ ಪಂಚಾಯಿತಿಗೆ ರು. 1.84(ಶೇ.10) ಕೋಟಿ ಹಂಚಿಕೆ ಮಾಡಲಾಗಿದೆ. ಆ ಅನುದಾನದಲ್ಲಿ ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ಶಿಕ್ಷಣ, ಆರೋಗ್ಯ ಮತ್ತು ಅಂಗನವಾಡಿ ಕ್ಷೇತ್ರಗಳಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದು ಸಭೆಯ ಗಮನಕ್ಕೆ ತಂದರು.
ಕಾನೂನು ಪ್ರಕಾರ ಹಣ ಹಂಚಿಕೆಯಾದರೆ ಜಿಲ್ಲೆಯಲ್ಲಿ ಅಭಿವೃದ್ಧಿಗೆ ಪೂರಕವಾಗುವುದಿಲ್ಲ. ಅದಕ್ಕಾಗಿ ಅಭಿವೃದ್ಧಿ ದೃಷ್ಟಿಯಿಂದ ಅಗತ್ಯ ಕ್ಷೇತ್ರಗಳಿಗೆ ಅನುದಾನವನ್ನು ಹಂಚಿಕೆ ಮಾಡಬೇಕು ಎಂದು ಸದಸ್ಯ ಸಿದ್ದನಗೌಡ ಪೊಲೀಸ್‌ಪಾಟೀಲ ಸಲಹೆ ನೀಡಿದರು.
ಬೇಡಿಕೆಯ ಪಟ್ಟಿ: ಅನುದಾನ ಮೂರು ಪ್ರಮುಖ ವಲಯಗಳಿಗೆ ಸೀಮಿತವಾಗಿದ್ದರಿಂದ ಆ ಇಲಾಖೆಗಳಿಗೆ ಬೇಡಿಕೆಯ ಪಟ್ಟಿಯನ್ನು ತರಿಸಿದ ನಂತರ ಒಪ್ಪಿಗೆ ಕೊಡಬೇಕು ಎಂದು ಜಿಪಂ ಸದಸ್ಯರಾದ ದೇವರಾಜ ನಾಯಕ, ಎಚ್.ಸಿ.ಪಾಟೀಲ್ ಮತ್ತು ಹನುಮೆಗೌಡ ಮರಕಲ್ ಒತ್ತಾಯಿಸಿದರು.
ಅಧಿಕಾರಿಗಳು ಚುನಾಯಿತ ಪ್ರತಿನಿದಿಗಳ ಗಮನಕ್ಕೆ ತರದೆ ಕ್ರಿಯಾ ಯೋಜನೆ ಸಿದ್ದಪಡಿಸುತ್ತಾರೆ. ಅದಕ್ಕೆ ನಾವು ಒಪ್ಪಿಗೆ ಕೊಡಬೇಕು. ಅದಕ್ಕಾಗಿ ಮೊದಲು ಇಲಖೆಯವರು ಕ್ರಿಯಾ ಯೋಜನೆ ಸಲ್ಲಿಸಲಿ. ನಂತರ ಒಪ್ಪಿಗೆ ಕೊಡುತ್ತೇವೆ ಎಂದು ಸದಸ್ಯರು ಪಟ್ಟು ಹಿಡಿದಾಗ, ಅಧ್ಯಕ್ಷರು ಸಭೆಯನ್ನು ಜು. 2ಕ್ಕೆ ಮುಂದೂಡಿದರು.
ಜಿಪಂ ಉಪಾಧ್ಯಕ್ಷ ಶರಣಿಕಕುಮಾರ ದೋಖಾ, ಜಿಪಂ ಸಿಇಒ ಸಿ.ಎ. ಜಿಲಾನಿ, ಶಹಾಪುರ ಶಾಸಕ ಗುರುಪಾಟೀಲ್ ಶಿರವಾರ ಇತರರು ಇದ್ದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.