ಕಾಮಗಾರಿಯ ಲೋಪಕ್ಕೆ ಸೂಕ್ತ ಕ್ರಮ
ಕ.ಪ್ರ. ವಾರ್ತೆ,ಜೇವರ್ಗಿ, ಜೂ.21
ಅಭಿವೃದ್ಧಿ ಕಾಮಗಾರಿಯಲ್ಲಿ ಲೋಪ ಕಂಡುಬಂದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಶಾಸಕ ಡಾ. ಅಜಯಸಿಂಗ್ ಅಧಿಕಾರಿಗಳಿಗೆ ಎಚ್ಚರಿಸಿದರು.
ಪಟ್ಟಣದ ತಾಲೂಕು ಪಂಚಾಯ್ತಿ ಸಭಾಗಂಣದಲ್ಲಿ ಜಿಲ್ಲಾ ಪಂಚಾಯ್ತಿ ಅಧಿಕಾರಿಗಳ ವರ್ಗ ಹಾಗೂ ನೌಕರರ ಸಭೆ ನಡೆಸಿದ ಅವರು, ತಾಲೂಕಿಗೆ ಬಿಡುಗಡೆಯಾದ ಅನುದಾನದ ಕಾಮಗಾರಿಗಳು ಯಾವುದೇ ಹಂತದಲ್ಲಿ ವಿಳಂಬವಾಗಬಾರದು, ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆ ತರಲು ಬಳಕೆಯಾಗಬೇಕು ಹಾಗೂ ಕಾಮಗಾರಿಯಲ್ಲಿ ಪಾರದರ್ಶಕತೆ ಇರಬೇಕು ಎಂದರು. ಕಾಮಗಾರಿಗಳನ್ನು ಯಾರೇ ನಿರ್ವಹಿಸಲಿ ಅವರ ಪ್ರಭಾವಕ್ಕೆ ಒಳಗಾಗಿ ಕಳಪೆ ಮಟ್ಟದ ಕಾಮಗಾರಿ ನಡೆಯಬಾರದು. ಗುಣಮಟ್ಟದ ಕಾಮಗಾರಿಗಳು ನಡೆಯಬೇಕು. ತಾವು ಪ್ರತಿ ಹಂತದಲ್ಲಿಯು ಕಾಮಗಾರಿಗಳನ್ನು ಖುದ್ದಾಗಿ ವಿಕ್ಷಿಸುವುದಾಗಿ ಹೇಳಿದರು. ಯಾವುದೇ ವರದಿ ಸಲ್ಲಿಸಿದರು ಪ್ರತಿ ಹಂತ ಎಂದಾದರೆ ಪ್ರಗತಿ ಹಂತದಲ್ಲಿ ಇರಬೇಕು. ನಿಮ್ಮ ವರದಿಯಲ್ಲಿ ಮುಗಿದಿದೆ ಎಂದು ತೋರಿಸಿ ಕಾಮಗಾರಿ ಯಾಗದಿದ್ದರೆ ತಾವು ಯಾವುದೇ ಕಾರಣಕ್ಕೆ ಸುಮ್ಮನಿರುವುದಿಲ್ಲ ಎಂದರು. ತಾಲೂಕಿನ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಈಗಾಗಲೇ ರಾಜ್ಯ ಸರ್ಕಾರ 30 ಲಕ್ಷ, ಪಟ್ಟಣದ ನೀರಿನ ಸಮಸ್ಯಗೆ 15 ಲಕ್ಷ ಬಿಡುಗಡೆಗೊಳಿಸಿದೆ. ಯಾವುದೇ ಕಾರಣಕ್ಕಾಗಿ ಕುಡಿಯುವ ನೀರಿನ ಸಮಸ್ಯೆ ಉಲ್ಭಣಿಸಬಾರದು ಎಂದು ಅಧಿಕಾರಿ ವರ್ಗಕ್ಕೆ ಎಚ್ಚರಿಸಿದರು. ಸಭೆಯಲ್ಲಿ ತಹಸೀಲ್ದಾರ್ ಎಂ.ಎನ್. ಗೋಠೆ, ತಾಪಂ ಅಧಿಕಾರಿ ಪಲ್ಲಾನರಸಿಂಹ ರೆಡ್ಡಿ, ಜಿಪಂ ಎಇಇ ಬಿರಾದಾರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

