'ಶರಣರ ಅನುಭಾವ ಮಡಿವಾಳನ ಕಾಯಕದಂತೆ'
ಕ.ಪ್ರ. ವಾರ್ತೆ ಯಾದಗಿರಿ ಜೂ.21
ಗುರು ಉಪದೇಶ ಮಂತ್ರ ವೈದ್ಯ ಜಂಗಮ ಉಪದೇಶ ಶಸ್ತ್ರ ವೈದ್ಯ ಭವ ರೋಗವ ಕಳೆವ ಪರಿಯ ನೋಡಾ ಕೂಡಲಸಂಗನ ಶರಣ ಅನುಭಾವ ಮಡಿವಾಳನ ಕಾಯಕದಂತೆ ಎನ್ನುವ ಅಣ್ಣ ಬಸವಣ್ಣನವರ ವಚನದಂತೆ ಶರಣರ ಅನುಭಾವದಿಂದ, ಸತ್ಸಂಗದಿಂದ ಮನದ ಮೈಲಿಗೆ ಕಳೆದು ಶುದ್ಧರಾಗುತ್ತೇವೆ ಎಂದು ಗುರುಮಠಕಲ್ ಖಾಸಾಮಠದ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ನುಡಿದರು.
ನಗರದ ಸೋಮಶೇಖರ್ ಮಣ್ಣೂರು ಅವರ ಹೊಲದಲ್ಲಿ ಲಿಂ. ಚನ್ನಬಸವ ಮಣ್ಣೂರುರವರ 5ನೇ ಪುಣ್ಯಸ್ಮರಣೆ ನಿಮಿತ್ತ ಹಮ್ಮಿಕೊಂಡಿದ್ದ ಶರಣ ಸಂಗಮ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಮನೆಯಲ್ಲಿ ಕುಟುಂಬದ ಸದಸ್ಯರು ಸೇರಿ ಮಾಡುವ ಖಾಸಗಿ ಕಾರ್ಯಕ್ರಮವನ್ನು ಮಣ್ಣೂರು ಕುಟುಂಬದವರು ಸಾರ್ವಜನಿಕವಾಗಿ ಬಸವ ಸಂಪ್ರದಾಯದಂತೆ ಶರಣ ಸಂಗಮ ಕಾರ್ಯಕ್ರಮವನ್ನು ಏರ್ಪಡಿಸಿ ಲಿಂಗೈಕ್ಯರ ಸ್ಮರಣೆಯೊಂದಿಗೆ ಬಸವಾದಿ ಶರಣರ ವಿಚಾರಧಾರೆಗಳನ್ನು ಬಿತ್ತರಿಸುವ ಕಾರ್ಯಕ್ರಮ ಮಾಡುತ್ತಿರುವುದು ಅರ್ಥಪೂರ್ಣವಾಗಿದೆ ಎಂದು ಶ್ರೀಗಳು ಅಭಿಪ್ರಾಯಪಟ್ಟರು.
ಪುಸ್ತಕ ಬಿಡುಗಡೆ: ಇದೇ ಸಂದರ್ಭದಲ್ಲಿ ಲಿಂ.ಬಸವರಾಜ ತಂಬಾಕೆಯವರ ಕಲ್ಯಾಣದ ಅಂಗಳದಲ್ಲಿ ಪುಸ್ತಕ ಬಿಡಿಗಡೆ ಮಾಡಿದರು. ಚಂದ್ರಶೇಖರ ಜಮಖಂಡಿ, ಡಾ. ಗಾಳೆಪ್ಪ ಪೂಜಾರಿ, ವೆಂಕಪ್ಪ ಆಲೆಮನಿ ಅನುಭಾವದ ನುಡಿಗಳನ್ನಾಡಿದರು. ವಿಶ್ವಗುರು ಬಸವಣ್ಣ, ಲಿಂ.ಚನ್ನಬಸವ ಮಣ್ಣೂರ, ಬಸವರಾಜ ತಂಬಾಕೆಯವರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಲಾಯಿತು.
ಸಿದ್ದಣ್ಣ ಬಾಡಾದ ಸ್ವಾಗತಿಸಿದರು. ಸೋಮಶೇಖರ ಮಣ್ಣೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ತನಾರತಿ ಸಂಸ್ಥೆ ಅಧ್ಯಕ್ಷ ಸಿದ್ಧರಾಜರೆಡ್ಡಿ ನಿರೂಪಿಸಿ, ವಂದಿಸಿದರು. ಜ್ಯೋತಿ ಮಣ್ಣೂರು, ಡಾ. ಸುಭಾಶ್ಚಂದ್ರ ಕೌಲಗಿ, ಡಾ. ಭೀಮರಾಯ ಲಿಂಗೇರಿ, ಡಾ. ವೀರೇಶ್ ಜಾಕಾ, ಮಲ್ಲೇಶ ಕುರುಕುಂದಿ, ಶಂಕ್ರಪ್ಪ ಅರುಣಿ, ಸಿ.ಎಂ.ಪಟ್ಟೇದಾರ, ಬಸವರಾಜಶಾಸ್ತ್ರಿ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

