ಧಂಗಾಪುರ; 65 ಲಕ್ಷ ಯೋಜನೆಗೆ ಅಸ್ತು
ಕನ್ನಡಪ್ರಭ ವಾರ್ತೆ, ಆಳಂದ, ಜೂ.22
ತಾಲೂಕಿನ ಧಂಗಾಪುರ ಗ್ರಾಪಂ ವ್ಯಾಪ್ತಿಯಲ್ಲಿ ಕೈಗೊಳ್ಳಲಿರುವ ಅಂದಾಜು 65 ಲಕ್ಷ ವೆಚ್ಚದ ವಿವಿಧ ಕಾಮಗಾರಿಯ ಕ್ರಿಯಾ ಯೋಜನೆಗೆ ಅನುಮೋದನೆ ದೊರೆಯಿತು.
ಗ್ರಾಪಂ ಅಧ್ಯಕ್ಷ ಚಂದ್ರಕಾಂತ ಫುಲಾರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ 2013-14ನೇ ಸಾಲಿನ ಕ್ರಿಯಾ ಯೋಜನೆಗೆ ಸರ್ವ ಸದಸ್ಯರು ಅಂಗೀಕರಿಸಿದರು.
ಗ್ರಾಮಸಭೆಯಲ್ಲಿ ಆಯ್ಕೆ: ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮರಗಯ್ಯ ಕಲಾಲ್ ಅವರು ಕಾಮಗಾರಿಗಳ ಮಾಹಿತಿ ನೀಡಿ, ಉದ್ಯೋಗ ಖಾತ್ರಿ ಯೋಜನೆಗೆ 43 ಲಕ್ಷ, ಗ್ರಾಮ ಸ್ವರಾಜ ಯೋಜನೆಗೆ 4 ಲಕ್ಷ, ಬಿಆರ್ಜಿಎಫ್ ಯೋಜನೆಯ ಕಾಮಗಾರಿಗಳಿಗೆ 8 ಲಕ್ಷ ಹಾಗೂ 13ನೇ ಹಣಕಾಸು ಯೋಜನೆಯಡಿ 10 ಲಕ್ಷ ವೆಚ್ಚದ ಕಾಮಗಾರಿಗಳನ್ನು ಕೈಗೊಳ್ಳಲು ಪಟ್ಟಿ ಸಿದ್ಧಪಡಿಸಲಾಗಿದೆ. ಈ ಕಾಮಗಾರಿಗಳನ್ನು ಬರುವ ದಿನಗಳಲ್ಲಿ ಗ್ರಾಮಸಭೆ ನಡೆಸುವ ಮೂಲಕ ಆಯ್ಕೆ ಮಾಡಬೇಕಾಗಿದೆ ಎಂದು ತಿಳಿಸಿದರು.
ಧಂಗಾಪುರ ಗ್ರಾಪಂ ವ್ಯಾಪ್ತಿಯಲ್ಲಿ ಬಟ್ಟರ್ಗಾ, ಹಿತ್ತಲಶಿರೂರ ಮತ್ತು ಕುಡಕಿ ಗ್ರಾಮಗಳಲ್ಲಿ ಕ್ರಿಯಾ ಯೋಜನೆ ಅನುಸಾರ ರಸ್ತೆ ನಿರ್ಮಾಣ, ಚರಂಡಿ, ಕುಡಿಯುವ ನೀರು, ಶೌಚಾಲಯ ನಿರ್ಮಾಣ ಕೈಗೊಳ್ಳಲಾಗುವುದು ಎಂದರು.
ಕೆಲ ಸದಸ್ಯರು ಪಡಿತರ ಚೀಟಿ ನೋಂದಣಿ ಆಗುತ್ತಿಲ್ಲ ಹಾಗೂ ಕರ ವಸೂಲಿಗಾರರು ಸಮರ್ಪಕ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ವಸೂಲಿ ಮಾಡಿದ ಹಣವನ್ನು ನಿಗದಿತ ಸಮಯಕ್ಕೆ ಬ್ಯಾಂಕಿಗೆ ಜಮಾ ಮಾಡುತ್ತಿಲ್ಲ ಎಂದು ಆರೋಪಿಸಿದರು.
ಸಮಿತಿಗಳ ರಚನೆ: ಪಿಡಿಒ ಅವರು ಸಿಬ್ಬಂದಿಗೆ ಸರಿಯಾಗಿ ಕೆಲಸ ಮಾಡುವಂತೆ ತಾಕೀತು ಮಾಡಿದರು. ಇಲ್ಲದಿದ್ದರೆ ಮೇಲಧಿಕಾರಿಗಳಿಗೆ ದೂರು ನೀಡಲಾಗುವುದು ಎಂದರು. ಇದೇ ಸಂದರ್ಭದಲ್ಲಿ ನ್ಯಾಯ ಸಮಿತಿಗಳನ್ನು ರಚಿಸಲಾಯಿತು.
ಉತ್ಪಾದನಾ ನ್ಯಾಯ ಸಮಿತಿಯ ಸದಸ್ಯರಾಗಿ ಸೀತಾಬಾಯಿ ಶೇಗಜಿ, ಡಾ. ಹಣಮಂತರಾವ ಕುಡಕಿ, ಸಿದ್ದಲಿಂಗಯ್ಯ ಹಿರೇಮಠ, ಭಾಗಣ್ಣ ಕೊರಬಾ ಹಾಗೂ ಮೂಲ ಸೌಕರ್ಯ ಸಮಿತಿಯ ಸದಸ್ಯರಾಗಿ ವಿಶಾಲಾ ತೇಲ್ಕರ್, ದತ್ತಪ್ಪ ಸಿಂಗೆ, ಆಲುಗೌಡ ಪಾಟೀಲ್, ಭೂಮಾಬಿ ಪಟೇಲ್ ಆಯ್ಕೆಯಾದರೆ ಎರಡು ಸಮಿತಿಗೆ ಗ್ರಾಪಂ ಅಧ್ಯಕ್ಷ ಚಂದ್ರಕಾಂತ ಫುಲಾರ ಅಧ್ಯಕ್ಷರಾಗಿರುತ್ತಾರೆ.
ಸಾಮಾಜಿಕ ನ್ಯಾಯ ಸಮಿತಿಯ ಸದಸ್ಯರಾಗಿ ಹಣಮಂತರಾವ ಜಿರೋಳಿ, ನಾಗರಾಜ ಉಡಚಣ, ಲಕ್ಷ್ಮೀ ದೊಡ್ಮನಿ, ಗುರುಬಾಯಿ ಸನಗುಂದಿ, ಶ್ರೀದೇವಿ ಅಂಗಡಿ, ಶಿವಕಾಂತವ್ವ ದೊಂಡಿ ಇವರುಗಳನ್ನು ಆಯ್ಕೆ ಮಾಡಲಾಗಿದ್ದು, ಈ ಸಮಿತಿಗೆ ಗ್ರಾಪಂ ಉಪಾಧ್ಯಕ್ಷ ಬಾಳಪ್ಪ ಕುಡಕಿ ಅವರು ಅಧ್ಯಕ್ಷರಾಗಿರುತ್ತಾರೆ ಎಂದು ಪಿಡಿಒ ಸಭೆಯಲ್ಲಿ ಪ್ರಕಟಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

