ಉತ್ತಮ ಸಂಸ್ಕಾರದಿಂದ ಮುಕ್ತಿ
ಕನ್ನಡಪ್ರಭ ವಾರ್ತೆ, ಕೆಂಭಾವಿ, ಜೂ.25
ಮನುಷ್ಯನ ಅನೇಕ ಕಾರ್ಯಗಳಿಗೆ ಪರಿಮಿತಿ ಇದ್ದ ಹಾಗೆ ಭಗವಂತನ ಚಿಂತನೆಗೆ ಪರಿಮಿತಿ ಇದೆ. ನಾವು ಒಂದು ಪರಿಮಿತಿಯಲ್ಲಿ ಭಗವಂತನನ್ನು ಆರಾಧಿಸಿದರೆ ಫಲ ಸಿಗಲು ಸಾಧ್ಯ. ಅಂತ್ಯ ಕಾಲದಲ್ಲಿ ಭಗವಂತನ ನಾಮಸ್ಮರಣೆ ಬರಬೇಕಾದರೆ ಬಾಲ್ಯದಿಂದಲೇ ಸಂಸ್ಕಾರ ಇದ್ದಾಗ ಮಾತ್ರ ಸಾಧ್ಯ ಎಂದು ಉಡುಪಿ ಕಾಣಿಯೂರು ಮಠಾಧೀಶ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಹೇಳಿದರು.
ಇಲ್ಲಿಯ ಉತ್ತರಾದಿ ಮಠದ ಯತಿಚತುಷ್ಠಯರ ವೃಂದಾವನದ ಸನ್ನಿಧಾನದಲ್ಲಿ ಅನುಗ್ರಹ ಸಂದೇಶ ನೀಡಿ, ಭಗವಂತನ ಧ್ಯಾನ ಯಾವಾಗ ಮಾಡಬೇಕು, ಹೇಗೆ ಮಾಡಬೇಕು ಎಂಬುದರ ಬಗ್ಗೆ ತಿಳಿಸಿ, ಸತತವಾಗಿ ಭಗವಂತನ ಸ್ಮರಣೆಯಲ್ಲಿ ತೊಡಗಿದರೆ ಕೊನೆಯ ಕ್ಷಣದಲ್ಲಿಯೂ ಕೂಡಾ ಭಗವಂತನ ಸ್ಮರಣೆ ಸಹಜವಾಗಿ ಬರುತ್ತದೆ. ಪ್ರತಿನಿತ್ಯ ಸಂಸಾರದ ಜಂಜಾಟದಲ್ಲಿ ದೇವರ ಸ್ಮರಣೆ ಮರೆತರೆ ಅಂತ್ಯ ಕಾಲದಲ್ಲಿ ದೇವರ ಸ್ಮರಣೆ ಬರಲು ಸಾಧ್ಯವಾಗದು. ಆದ್ದರಿಂದ ಬಾಲ್ಯದಿಂದಲೇ ಉತ್ತಮ ಸಂಸ್ಕಾರ ಹೊಂದಿ ಯಾವತ್ತೂ ಭಗವಂತನ ಸ್ಮರಣೆ ಮಾಡಿದಾಗ ಜೀವನ ಪರ್ಯಂತ ಸುಖ ಹೊಂದಿ ಕೊನೆಯ ಕಾಲದಲ್ಲಿ ಮೋಕ್ಷ ಹೊಂದುವುದರಲ್ಲಿ ಸಂದೇಹವೇ ಇಲ್ಲ ಎಂದು ಹೇಳಿದರು.
ಗೀತೆ ಸಮರ್ಪಣೆ: ಇದೇ ವೇಳೆ ಸುರೇಂದ್ರರಾವ ಕುಲಕರ್ಣಿ ರಚಿಸಿದ ಶ್ರೀಗಳ ಕುರಿತ ಗೀತೆಯನ್ನು ಅವರಿಗೆ ಸಮರ್ಪಿಸಲಾಯಿತು. ಮಂಗಳವಾರ ಕೂಡಲಿ ಆರ್ಯ ಅಕ್ಷೋಭ್ಯಭ್ಯತೀರ್ಥ ಮಠಾಧೀಶ ರಘುವಿಜಯತೀರ್ಥ ಸ್ವಾಮೀಜಿ ಮತ್ತು ವಿದ್ಯಾವಲ್ಲಭ ತೀರ್ಥರು ತಮ್ಮ ಸಂಸ್ಥಾನ ಪೂಜೆಯನ್ನು ಪಟ್ಟಣದಲ್ಲಿ ನೆರವೇರಿಸಿ ನೆರೆದಿದ್ದ ಭಕ್ತಾದಿಗಳಗೆ ಫಲ ಮಂತ್ರಾಕ್ಷತೆಯನ್ನು ನೀಡಿ ಅನುಗ್ರಹಿಸಿದರು.
ಪಂಡಿತ ಗಿರಿಶಾಚಾರ್ಯ ಕೊಪ್ಪರ, ಪ್ರಲ್ಹಾದಾಚಾರ್ಯ ಜೋಶಿ, ತಿರುಮಲಾಚಾರ್ಯ ಜೋಶಿ, ಜಯಾಚಾರ್ಯ ಪುರೋಹಿತ, ಜಯ ಸತ್ಯಪ್ರಮೋದ ಸೇವಾ ಸಂಘದ ಅಧ್ಯಕ್ಷ ಸುರೇಂದ್ರರಾವ ಕುಲಕರ್ಣಿ, ವಾಮನರಾವ ದೇಶಪಾಂಡೆ, ಬಾಳಕೃಷ್ಣರಾವ ಕುಲಕರ್ಣಿ, ಮೋಹನರಾವ ಕುಲಕರ್ಣಿ, ಹಣಮಂತರಾವ ಕುಲಕರ್ಣಿ, ವಸಂತರಾವ ತಿಳಗೂಳ, ನರಸಿಂಹರಾವ ಕುಲಕರ್ಣಿ, ವೆಂಕಟೇಶ ನಾಡಿಗೇರ, ಗುರುರಾಜ ಕುಲಕರ್ಣಿ, ಕೃಷ್ಣರಾವ ಕುಲಕರ್ಣಿ ಅನೇಕರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

