ಗುಲ್ಬರ್ಗಾ

ನರಿಬೋಳ ಶಾಲೆಗೆ ಕಳ್ಳರ ಹಾವಳಿ

Published On :

ಗುಲ್ಬರ್ಗ: ಜೇವರ್ಗಿ ತಾಲೂಕಿನ ನರಿಬೋಳ ಗ್ರಾಮದಲ್ಲಿರುವ ಪ್ರೌಢಶಾಲೆಗೆ ಕಳ್ಳರ ಹಾವಳಿ ಅಮರಿಕೊಂಡಿದೆ. ಕಳೆದ 6 ತಿಂಗಳಲ್ಲಿ ಈ ಶಾಲೆಯಲ್ಲಿ 7 ಬಾರಿ ಕಳ್ಳತನ. ಕಂಪ್ಯೂಟರ್, ಬಿಸಿಯೂಟ ಸಾಮಗ್ರಿ, ಅಕ್ಕಿ- ಗೋಧಿ, ಎಣ್ಣೆ, ತಟ್ಟೆಗಳು ಹೀಗೆ ಕಳ್ಳರು ದಾಳಿ ಮಾಡಿದಾಗೊಮ್ಮೆ ತರಹೇವಾರಿ ವಸ್ತುಗಳನ್ನು ದೋಚಿದ್ದಾರೆ. ಇದರಿಂದಾಗಿ ಈ ಶಾಲೆಯ ಮುಖ್ಯಗುರು ಹೇಮಲತಾ ಪತ್ತಾರ್ ಸೇರಿದಂತೆ ಇಲ್ಲಿನ ಶಿಕ್ಷಕರು, ವಿದ್ಯಾರ್ಥಿಗಲೆಲ್ಲರೂ ಕಳ್ಳರ ಹಾವಳಿಗೆ ತತ್ತರಿಸಿಹೋಗಿದ್ದಾರೆ.
2 ತಿಂಗಳ ಹಿಂದೆ ಇಲ್ಲಿನ 2 ಕಂಪ್ಯೂಟರ್, ವೈರಿಂಗ್, ಇತ್ಯಾದಿ ವಸ್ತುಗಳು ಕಳವಾದವು. ಫೆ.21 ರಂದು ಈ ಶಾಲೆಯ 7 ಚೀಲ ಅಕ್ಕಿ, ಎಣ್ಣೆ ಇತರೆ ಬಿಸಿಯೂಟದ ಪದಾರ್ಥಗಳು ಮಂಗಮಾಯ. ಇದಕ್ಕೂ ಮುಂಚೆ 6 ತಿಂಗಳಿಂದ ಇಲ್ಲಿ 7 ಬಾರಿ ಕಳವಾಗಿದೆ. ಹೀಗಾಗಿ ಶಾಲೆಯ ಮಕ್ಕಳು ಎಲ್ಲಿ ತಮ್ಮ ಪಾಠೋಪಕರಣಗಳು ಸಹ ಕಳವಾಗುತ್ತವೆಯೋ ಎಂದು ಹೌಹಾರಿದ್ದಾರೆ. ಕಳವು ಶಾಲೆಯನ್ನೇ ಬೆಂಬತ್ತಿದ್ದರಿಂದ ಮಕ್ಕಳು ಸಹ ಈಚೆಗೆ ಮುಷ್ಕರ ನಡೆಸಿ ಕಳ್ಳರ ಹಾವಳಿಯಿಂದ ಶಾಲೆಗೆ ರಕ್ಷಣೆ ಕೊಡುವಂತೆ ಆಗ್ರಹಿಸಿರು.
ಜೇವರ್ಗಿ ಶಾಸಕ ದೊಡ್ಡಪ್ಪಗೌಡ ಪಾಟೀಲರ ತವರೂರು ನರಿಬೋಳ ಶಾಸಕರ ತವರೂರಿನ ಶಾಲೆಯಲ್ಲಿಯೇ ನಿರಂತರ ಕಳವಿನ ಹಾವಳಿ ಕಾಡುತ್ತಿದ್ದರೆ ಹೇಗೆ ಎಂಬ ಚರ್ಚೆಗಳು ಇದೀಗ ಶುರುವಾಗಿವೆ. ಪಂಚ ಜಿಲ್ಲೆಗಳ ಜನಪರ ಹೋರಾಟ ಸಮಿತಿ ಇದೇ ವಿಷಯವನ್ನು ಮುಂದಿಟ್ಟುಕೊಂಡು ಹೋರಾಟ ಆರಂಭಿಸಿದ್ದು ನರಿಬೋಳ ಶಾಲೆಯನ್ನು ಕಳ್ಳರ ಹಾವಳಿಯಿಂದ ರಕ್ಷಿಸಿ ಎಂದು ಜಿಲ್ಲಾಡಳಿತಕ್ಕೆ ಕೋರಿಕೊಂಡಿದೆ.
ಸಮಿತಿಯ ಅಧ್ಯಕ್ಷ ಎಂ.ಎಸ್. ಪಾಟೀಲ್ ಹಾಗೂ ಕಾರ್ಯಕರ್ತರು ಈ ಸಂಬಂಧ ಮನವಿ ಪತ್ರ ನೀಡಿದ್ದು, ತಕ್ಷಣ ಸ್ಥಳೀಯ ಪೊಲೀಸರು ಇಲ್ಲಿ ನಿರಂತರ ನಡೆಯುತ್ತಿರುವ ಕಳವಿನ ಹಾವಳಿಯ ಹಿಂದಿನ ಕಾರಣ, ಕಳ್ಳರ ಪತ್ತೆಗೆ ತಕ್ಷಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ. ಜಿಲ್ಲಾಧಿಕಾರಿ ಮುಖಾಂತರ ಗೃಹ ಸಚಿವರಿಗೂ ಮನವಿ ಪತ್ರ ಸಲ್ಲಿಸಲಾಗಿದೆ ಎಂದು ಪಾಟೀಲ್ ಹೇಳಿದ್ದಾರೆ.
ಫೆ. 21 ರಂದು ಅಕ್ಕಿ, ಎಣ್ಣೆ ಕಳವಾದ ಸಂಗತಿ ದೂರಲು ಶಿಕ್ಷಕರು ಜೇವರ್ಗಿ ಟಾಣೆಗೆ ಹೋದರೆ ಅಲ್ಲಿನ ಪೊಲೀಸರು ಈ ಪ್ರಕರಣದ ದೂರು ದಾಖಲಿಸಿಕೊಂಡಿಲ್ಲ ಎಂದಿರುವ ಪಾಟೀಲ್ ಇಂತಹ ವರ್ತನೆಯನ್ನು ಖಂಡಿಸುತ್ತೇವೆ ಎಂದು ಸ್ಥಳೀಯ ಪೊಲೀಸ್ ವರ್ತನೆ ಉಗ್ರವಾಗಿ ಖಂಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.