ಲಾರಿ ಡಿಕ್ಕಿ: ಮೂವರ ದುರ್ಮರಣ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಮಾ.5
ವೇಗದಲ್ಲಿದ್ದ ಲಾರಿ ಹಾಗೂ ಬೈಕ್ ಮುಖಾಮುಖಿಯಾಗಿ ಸಂಭವಿಸಿರುವ ರಸ್ತೆ ದುರಂತದಲ್ಲಿ ಬೈಕ್ ಸವಾರಿಯಲ್ಲಿದ್ದ ಮೂವರು ಸ್ಥಳದಲ್ಲೇ ದುರಂತದ ಸಾವನ್ನಪ್ಪಿರುವ ಘಟನೆ ಮಳಖೇಡ ಹತ್ತಿರದ ಪೆಟ್ರೋಲ್ ಪಂಪ್ ಬಳಿ ಮಾ.4ರ ರಾತ್ರಿ ಸಂಭವಿಸಿದೆ. ದುರಂತದಲ್ಲಿ ಸತ್ತವರನ್ನು ಸನ್ನಪ್ಪ ಮಂಗಾ, ಚಿನ್ನಪ್ಪ ಹಾಗೂ ಪೀರಪ್ಪ ಹರಸೂರ ಹಂಗನಳ್ಳಿ ಎಂದು ಗುರುತಿಸಲಾಗಿದೆ. ಇವರು ಮೂವರು ಸೇಡಂನಿಂದ ಮಳಖೇಡದತ್ತ ಬೈಕ್ ಮೇಲೆ ಹೊರಟಿದ್ದರು. ಎದುರಿನಿಂದ ಬಂದ ಲಾರಿ ವೇಗದಲ್ಲಿತ್ತು. ಬೈಕ್ ಹಾಗೂ ಲಾರಿ ಡಿಕ್ಕಿಯಾಗಿ ಸವಾರರು ಕೆಳಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದೂರು ನೀಡಿರುವ ಕಲ್ಯಾಣಿ ಮಂಗಾ ಲಾರಿ ಚಾಲಕನ ಮೇಲೆ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.
ಮಂಗಳಸೂತ್ರ ಕಳ್ಳನ ಸೆರೆ
ಗುಲ್ಬರ್ಗ: ನಗರದ ವಿರೇಂದ್ರ ಪಾಟೀಲ್ ನಗರ ಬಡಾವಣೆಯ ನಿವಾಸಿ ನಿರ್ಮಲಾ ಜಗದೀಶ ಇವರ ಕೊರಳಲ್ಲಿದ್ದ ಮಂಗಳಸೂತ್ರ ಅಪಹರಿಸಿದ್ದ ಖದೀಮನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಅಜಯಕುಮಾರ್ ವಿಜಯಕುಮಾರ್ ಕಾಂಬಳೆ(19) ಎಂದು ಗುರುತಿಸಲಾಗಿದೆ. ಈತ ಸ್ಥಳೀಯವಾಗಿ ಮಾಂಗರವಾಡಿ ಬಡಾವಣೆಯ ನಿವಾಸಿ. ಈತನನ್ನು ದಸ್ತಗಿರಿ ಮಾಡಲಾಗಿದ್ದು ದೋಚಿದ್ದ 3 ತೊಲೆಯ ಮಂಗಳಸೂತ್ರ ಜಪ್ತಿ ಮಾಡಲಾಗಿದೆ.
ಕಳೆದ ಫೆ.16ರಂದು ನಿರ್ಮಲಾ ಇವರು ಮಂಗಳಸೂತ್ರ ಅಪಹರಣದ ದೂರು ನೀಡಿದ್ದರು. ಪತ್ತೆ ಕುರಿತು ತನಿಖೆ ಕೈಗೊಂಡ ಚೌಕ್ ಪೊಲೀಸ್ ಠಾಣೆ ಪಿಐ ಬಿ.ಬಿ. ಭಜಂತ್ರಿ, ಪಿಎಸ್ಐ ನಟರಾಜ, ಚಿತ್ತರಂಜನ್, ಡಿ. ಹೇಮಂತಕುಮಾರ, ಹಾಗೂ ಸಿಬ್ಬಂದಿ ಶಿವಾನಂದ, ಬಂದೆನವಾಜ, ಮಹಾಂತೇಶ ಕೂಡಿಕೊಂಡು ಯಶಸ್ವಿ ಕಾರ್ಯಾಚರಣೆ ನಡೆಸಿ ಖದೀಮನನ್ನು ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

