ಯಾದಗಿರಿ; ಶೇ.62.30ರಷ್ಟು ಮತದಾನ
ಕನ್ನಡಪ್ರಭ ವಾರ್ತೆ, ಯಾದಗಿರಿ, ಮಾ.7
ಜಿಲ್ಲೆಯ 4 ನಗರ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಗುರುವಾರ ಜರುಗಿದ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ಜರುಗಿದ್ದು, ಸುಮಾರು ಶೇ. 62.30 ರಷ್ಟು ಮತದಾನವಾಗಿದೆ.
ಯಾದಗಿರಿ ನಗರಸಭೆಯಲ್ಲಿ ಶೇ.58.32, ಶಹಾಪುರ ಪುರಸಭೆಯಲ್ಲಿ ಶೇ.63.26, ಸುರಪುರ ಪುರಸಭೆಯಲ್ಲಿ ಶೇ.64.36 ಹಾಗೂ ಗುರುಮಠಕಲ್ ಪಟ್ಟಣ ಪಂಚಾಯಿತಿಯಲ್ಲಿ ಶೇ.68.97ರಷ್ಟು ಮತದಾನವಾಗಿದೆ.
ಸುರಪುರ: ಸುರಪುರ ಪುರಸಭೆಯ 27 ವಾರ್ಡ್ಗಳಿಗೆ ಗುರುವಾರ ಜರುಗಿದ ಮತದಾನ ಸಂಪೂರ್ಣ ಶಾಂತಿಯುತವಾಗಿ ಶೇ. 64.36ರಷ್ಟು ಮತದಾನವಾಗಿದೆ ಎಂದು ಚುನಾವಣಾ ಮೂಲಗಳು ತಿಳಿಸಿವೆ.
ಎಲ್ಲ ಮತಗಟ್ಟೆಗಳಲ್ಲಿ ಬೆಳಗ್ಗೆಯಿಂದಲೇ ತುರುಸಿನ ಮತದಾನ ಜರುಗುತ್ತಿರುವುದು ಕಂಡು ಬಂತು. ಮಹಿಳೆಯರು ಮತ್ತು ಪುರಷರು ಸಾಲುಗಟ್ಟಿ ನಿಂತು ಮತಚಲಾಯಿಸಿದರು. ಮತದಾರರು ಹುರುಪಿನಿಂದ ಮತಹಾಕಲು ವಾರ್ಡ್ಗಳಿಗೆ ಬರುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಆಯಾ ಪಕ್ಷಗಳ ಕಾರ್ಯಕರ್ತರು, ಅಭ್ಯರ್ಥಿಗಳು ಮತದಾರರನ್ನು ಆಟೋ, ಟಂಟಂ ಜೀಪಗಳಲ್ಲಿ ಮತಗಟ್ಟೆಗಳಿಗೆ ಕರೆದುಕೊಂಡು ಬರುತ್ತಿರುವುದು ಸಾಮಾನ್ಯವಾಗಿತ್ತು.
ಚಕಿತಗೊಳಿಸಿದ ವಿಕಲಚೇತನ ನಾಗಪ್ಪ: ಕೆಲ ಕಡೆ ದುರ್ಬಲರನ್ನು ಅವರ ಮಕ್ಕಳು, ಮೊಮ್ಮಕ್ಕಳು ಹೊತ್ತು ತಂದು ಮತ ಹಾಕಿಸಿದರು. ಕುಂಬಾರಪೇಟೆಯ 2ನೇ ವಾರ್ಡಿನಲ್ಲಿ ಅಂಕವಿಕಲ ನಾಗಪ್ಪ ಉತ್ಸಾಹದಿಂದ ಮತ ಚಲಾಯಿಸಲು ಆಗಮಿಸಿ ಎಲ್ಲರನ್ನು ಚಕಿತಗೊಳಿಸಿದ.
ಮಾತಿನ ಚಕಮಕಿ: ದೋಬಿಗಲ್ಲಿ ವಾರ್ಡಿನಲ್ಲಿ ಬಿಜೆಪಿ ಮತ್ತು ರಾಜುಗೌಡ ಬಣದ ಅಭ್ಯರ್ಥಿಗಳ ಮಧ್ಯೆ ಮೇಲಿಂದ ಮೇಲೆ ಅನೇಕ ಬಾರಿ ಮಾತಿನ ಚಕಮಕಿ ನಡೆಯಿತು. ಕೆಲ ಕ್ಷಣ ಮತಗಟ್ಟೆ ಸುತ್ತಲೂ ಆತಂಕ ಸೃಷ್ಟಿಯಾಗಿತ್ತು. ಮತದಾನ ಸರಗವಾಗಿ ನಡೆಯುತ್ತದೆಯೋ ಇಲ್ಲ ಎಂಬ ಭಯ ಸರದಿ ಸಾಲಿನಲ್ಲಿ ನಿಂತಿದ್ದ ಮತದಾರರನ್ನು ಕಾಡುತ್ತಿತ್ತು.
ವಾರ್ಡ್ 6ರ ದೋಬಿಗಲ್ಲಿ ಮತ್ತು ವಾರ್ಡ್ 7ರ ಝಂಡದಕೇರಾದ ಮತ್ತು ವಾರ್ಡ್ 23ರ ಶರ್ಕಿ ಮೊಹಲ್ಲಾದ ಮತಗಟ್ಟೆಗಳಲ್ಲಿ ಏಜಂಟರ ನೇಮಕಾತಿ ವಿಷಯಕ್ಕೆ ಸಂಬಂಧಿಸಿದಂತೆ ಮತಗಟ್ಟೆ ಅಧಿಕಾರಿಗಳೊಂದಿಗೆ ಅಭ್ಯರ್ಥಿಗಳು ಮಾತಿಗಿಳಿದು ವಾಗ್ವಾದ ನಡೆದವು.
ಕೈಕೊಟ್ಟ ಮತಯಂತ್ರ: ಝಂಡದಾಕೇರಾ ವಾರ್ಡ್ನ ಮತಗಟ್ಟೆಯಲ್ಲಿ ಮತಯಂತ್ರ ಕೈಕೊಟ್ಟ ಹಿನ್ನೆಲೆಯಲ್ಲಿ ಮತದಾನ ಅರ್ಧ ಗಂಟೆ ತಡವಾಗಿ ಆರಂಭವಾಯಿತು. ವಾರ್ಡ್ 17ರ ಹಸನಾಪುರದ ಮತ್ತು 18ರ ಖುರೇಶಿ ಮೊಹಲ್ಲಾದಲ್ಲಿ ರಾಜುಗೌಡ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಮಧ್ಯೆ ತುರುಸಿನ ಹಣಾಹಣೆ ಏರ್ಪಟ್ಟಿರುವ ಹಿನ್ನೆಲೆಯಲ್ಲಿ ಇಲ್ಲಿಯೂ ಮತದಾನ ಜೋರಾಗಿತ್ತು.
ಗುರುಮಠಕಲ್: ಗುರುಮಠಕಲ್ ಪಟ್ಟಣ ಪಂಚಾಯಿತಿಯಲ್ಲಿ ಶೇ. 68.97ರಷ್ಟು ಮತದಾನವಾಗಿದೆ. ಗುರುಮಠಕಲ್ ಪಪಂ 17 ವಾರ್ಡುಗಳಲ್ಲಿ ಬಿರುಸಿನ ಮತದಾನವಾಗಿದ್ದು, ಎಲ್ಲೆಡೆ ಶಾಂತಯುತ ಮತದಾನ ನಡೆಯಿತು.
ಅತೀ ಹೆಚ್ಚು ಮತದಾನ ವಾರ್ಡ್ 4ರಲ್ಲಿ ಶೇ.76 ರಷ್ಟಾಗಿದ್ದು, ಅತೀ ಕಡಿಮೆ ಮತದಾನ ವಾರ್ಡ್ 15ರಲ್ಲಿ ಶೇ. 60.96ರಷ್ಟಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

