ಗುಲ್ಬರ್ಗಾ

ಬಂಡಾಯಗಾರರಿಂದ ಹಿನ್ನಡೆ

Published On :

ಸುರಪುರ: ಪುರಸಭೆ ಚುನಾವಣೆಯಲ್ಲಿ ಹಿನ್ನಡೆಯಾಗಿರುವುದರಿಂದ ನಾನು ವಿಚಲಿತನಾಗಿಲ್ಲ. ಕೆಲ ವಾರ್ಡುಗಳಲ್ಲಿ ನನ್ನ ಬೆಂಬಲಿಗರೇ ಟಿಕೆಟ್ ಆಕಾಂಕ್ಷಿಗಳಾಗಿ ಅನೇಕರಿದ್ದರು. ಟಿಕೆಟ್ ನಿರಾಕರಣೆಯಿಂದ ಬಂಡಾಯವಾಗಿ ಕಣಕ್ಕಿಳಿದಿದ್ದರು. ಬಂಡಾಯ ಅಭ್ಯರ್ಥಿಗಳ ಸ್ಪರ್ಧೆಯೇ ನಮ್ಮ ಗೆಲುವಿಗೆ ಹಿನ್ನಡೆಯಾಯಿತು ಎಂದು ಮಾಜಿ ಸಚಿವ ರಾಜುಗೌಡ ಹೇಳಿದರು.
ತಮ್ಮ ನಿವಾಸದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇನ್ನು ಕೆಲವು ವಾರ್ಡ್‌ಗಳಲ್ಲಿ ಜಯ ನಿರೀಕ್ಷಿಸಲಾಗಿತ್ತು. ಆದರೆ ಅದು ಕೆಲವೇ ಮತಗಳ ಅಂತರದಿಂದ ಕೈ ತಪ್ಪಿ ಹೋಗಿದೆ. ಮತದಾರರ ತೀರ್ಪನ್ನು ನಾನು ಸ್ವಾಗತಿಸುತ್ತೇನೆ ಎಂದರು.
ನನ್ನ ಅಭ್ಯರ್ಥಿಗಳು ಪಕ್ಷೇತರರಾಗಿ ಸ್ಪರ್ಧಿಸಿ 12 ಸ್ಥಾನಗಳಲ್ಲಿ ಗೆಲುವು ಸಾಧಿಸಿರುವುದು ಹೆಮ್ಮೆಯ ವಿಷಯ. ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭ್ಯರ್ಥಿಗಳು ಯಾವುದೆ ಕಾರಣಕ್ಕೂ ಈ ಫಲಿತಾಂಶದಿಂದ ಆತಂಕಕ್ಕೆ ಒಳಗಾಗಬಾರದು. ಸೋಲನ್ನು ಸವಾಲಾಗಿ ಸ್ವೀಕರಿಸೋಣ ಎಂದು ತಮ್ಮ ಬೆಂಬಲಿಗರಿಗೆ ಕರೆ ನೀಡಿದರು.
ಸುರಪುರ ಪಟ್ಟಣದ ಅಭಿವೃದ್ಧಿಗೆ ಇದುವರೆಗೂ ಕೋಟ್ಯಂತರ ರು. ಅನುದಾನ ದೊರಕಿಸಿಕೊಟ್ಟಿದ್ದು, ಅನೇಕ ಕಾಮಗಾರಿಗಳು ಪ್ರಗತಿಯಲ್ಲಿವೆ. ಮುಂದೆಯೂ ಅಭಿವೃದ್ಧಿ ಕೆಲಸಗಳನ್ನು ಮುಂದುವರೆಸಲಾಗುವುದು. ನೀರು ಸರಬರಾಜು ಯೋಜನೆ, ಕೊಳಚೆ ನಿರ್ಮೂಲನಾ ಪ್ರದೇಶಗಳನ್ನು ಅಭಿವೃದ್ಧಿಗೊಳಿಸಲಾಗುವುದು. ಪಟ್ಟಣದ ವ್ಯಾಪ್ತಿಯಲ್ಲಿ ಬರುವ ಬಾವಿಗಳ ಸ್ವಚ್ಛತೆ ಮತ್ತು ಉದ್ಯಾನವನ, ವಿಹಾರ ತಾಣವಾಗಿ ಮಾರ್ಪಡಿಸುವ ಗುರಿ ಹೊಂದಲಾಗಿದೆ ಎಂದರು. ಮುಖಂಡರಾದ ಚಂದ್ರಶೇಖರಗೌಡ ಮಾಗನೂರು, ಯಲ್ಲಪ್ಪ  ಕುರುಕುಂದಿ, ಎಚ್.ಸಿ.ಪಾಟೀಲ್, ಕಿಶೋರ ಚಂದ ಜೈನ್, ಮಹ್ಮದ ಸಲೀಂ ವರ್ತಿ, ರಾಜಾ ಪಾಮನಾಯಕ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.