ಹಳೆ ವೈಷಮ್ಯ: ಭೀಕರ ಕೊಲೆ
ಗುಲ್ಬರ್ಗ: ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಕೆಲವು ದುಷ್ಕರ್ಮಿಗಳು ಸೇರಿ ವ್ಯಕ್ತಿಯೊಬ್ಬನಿಗೆ ಮಾರಕಾಸ್ತ್ರಗಳಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿದ ಘಟನೆ ಗುಲ್ಬರ್ಗ ತಾಲೂಕಿನ ಉದನೂರ ಗ್ರಾಮದಲ್ಲಿ ಭಾನುವಾರ ಸಂಜೆ ನಡೆದಿದೆ.
ಉದನೂರ ಗ್ರಾಮದ ಸುರೇಶ ತಂದೆ ಜನಕರಾಜ (30) ಎಂಬಾತ ಕೊಲೆಯಾದ ನತದೃಷ್ಟ.
ಗ್ರಾಮದ ಬಸವರಾಜ ಗುರಪ್ಪ ಮೂಲಗೆ ಅವರ ತೋಟದ ಮನೆಯ ಪಕ್ಕದಲ್ಲಿ ನಿಂತಿದ್ದ ಸುರೇಶ ತಂದೆ ಜನಕರಾಜನಿಗೆ ಆಟೋದಲ್ಲಿ ಬಂದ ಅಮೀತ ತಂದೆ ವಿಜಯಕುಮಾರ, ಜೈಭೀಮ, ಶಿವಾ ಬಾದನಳ್ಳಿ, ಸುರೇಶ ಸಂದೆ ಗುರಪ್ಪ ದೊಡ್ಮನಿ, ಪವನ ತಂದೆ ಶಿವಲಿಂಗಪ್ಪ, ಪಂಡಿತ ಬಾದನಳ್ಳಿ, ಶಿವಾ ತಂದೆ ಬಾಬು ಮಿಲಟರಿ, ಶ್ರೀಕಾಂತ ತಂದೆ ಲಕ್ಷ್ಮಣ, ಪ್ರಕಾಶ, ಗುರಪ್ಪ ದೊಡ್ಮನಿ ಇತರರು ಹರಿತವಾದ ಮಚ್ಚು ಮತ್ತು ತಲವಾರಗಳಿಂದ ಹೊಡೆದು ಪರಾರಿಯಾಗಿದ್ದಾರೆ.
ಹಲ್ಲೆಯಿಂದ ತೀವ್ರ ಗಾಯಗೊಂಡ ಸುರೇಶ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಈ ಕುರಿತು ಮೃತನ ದೊಡ್ಡಪ್ಪ ಬಸವರಾಜ ತಂದೆ ಗುರಪ್ಪ ಮೂಲಗೆ ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಸುರೇಶನಿಗೆ ಕೊಲೆ ಮಾಡಲಾಗಿದೆ ಎಂದು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಈ ಕುರಿತು ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

