ಹುಣಸಗಿಯಲ್ಲಿ ಅರವಟಿಗೆ ಸೇವೆ
ಹುಣಸಗಿ: ಹೆಚ್ಚಾಗುತ್ತಿರುವ ಬಿಸಿಲು, ಜೋರಾಗುತ್ತಿರುವ ಸೆಕೆ, ಹೆಚ್ಚಾಗುವ ಬಾಯಾರಿಕೆಗೆ ನೀರಿನ ಮೊರೆ ಹೋಗುವುದು ಸಾಮಾನ್ಯ. ಆದರೆ ಎಲ್ಲಿಯೂ ಶುದ್ಧ ನೀರು ಕುಡಿಯಲು ಸಿಗುವುದಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಪಟ್ಟಣದ ಪಟ್ಟಣದ ಯುವಕರು ಬುಧವಾರ ನೂತನ ಅರವಟಿಗೆ ಆರಂಭಿಸಿದ್ದಾರೆ.
ಸರಕು ಸಾಗಣೆ ವಾಹನಗಳ ಚಾಲಕರ ಸಂಘದ ವತಿಯಿಂದ ಅರವಟಿಗೆ ಆರಂಭಿಸಲಾಯಿತು. ಅರವಟಿಗೆ ಪೂಜೆ ಮಾಡುವುದರೊಂದಿಗೆ ಹಿರಿಯ ಸಾಹಿತಿ ವೀರೇಶ ಹಳ್ಳೂರು ಸೇವೆಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ದಿನೇ ದಿನೇ ಬೆಳೆಯುತ್ತಿರುವ ಹುಣಸಗಿ ಪಟ್ಟಣದಲ್ಲಿ ಯುವಕರು ಪ್ರಶಂಸನೀಯ ಕೆಲಸ ಮಾಡುವುದರೊಂದಿಗೆ ಜನತೆಯ ಮೆಚ್ಚುಗೆಗೆ ಪಾತ್ರವಾಗಿರುವುದು ಸಂತಸ ತಂದಿದೆ. ಹೆಚ್ಚೆಚ್ಚು ಯುವಕರು ಸಮಾಜ ಸೇವೆಯಲ್ಲಿ ಪಾಲ್ಗೊಂಡು ಕೈಲಾದಷ್ಟು ಸಹಾಯ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.
ಈ ವೇಳೆ ಶರಣು ಪಡಶೆಟ್ಟಿ, ಸಂಗಮೇಶ ಸಜ್ಜನ್, ದೇವು ಬೈಚಬಾಳ, ನಂದಲಾಲ ಠವಾಣಿ, ಬಸವರಾಜ ವೈಲಿ, ಹಣಮಂತ ಮೇಲಿನಮನಿ, ಮುಬಾರಕ ಔಂಟಗಿ, ಮೌಲಾಲಿ ಮುಲ್ಲಾ, ಸಂತೋಷ ಹುಬ್ಬಳ್ಳಿ, ದೇವು ಕಲ್ಲದೇವನಹಳ್ಳಿ, ಓಬು ಹುಣಸಗಿ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

