ನಿರಂತರ ವಿದ್ಯುತ್ಗೆ ಒತ್ತಾಯ
ಕನ್ನಡಪ್ರಭ ವಾರ್ತೆ ಆಳಂದ ಮಾ.21
ತಾಲೂಕಿನ ಮಾಡಿಯಾಳ ವಲಯದಲ್ಲಿ ಸಮರ್ಪಕವಾಗಿ ವಿದ್ಯುತ್ ಪೂರೈಸಬೇಕೆಂದು ಹೈ-ಕ ರಕ್ಷಣಾ ಸಮಿತಿ ಕಾರ್ಯಕರ್ತರು ಆಗ್ರಹಿಸಿದರು.
ಗ್ರಾಮದ ಜೆಸ್ಕಾಂ ಉಪ ಕಚೇರಿ ಅಧಿಕಾರಿಗಳಿಗೆ ಒತ್ತಾಯಿಸಿ ಮನವಿ ಸಲ್ಲಿಸಿದ ಕಾರ್ಯಕರ್ತರು, ವಿದ್ಯುತ್ ಸಮಸ್ಯೆಯಿಂದಾಗಿ ರೈತರ ಪಂಪಸೆಟ್ ನಿಂತು ಹೋಗಿ ತೋಟದ ಬೆಳೆ ಹಾಗೂ ಅಲ್ಪ ಸ್ವಲ್ಪ ಬೇಸಿಗೆ ಬೆಳೆಗಳು ಬಿಸಿಲಿನ ತಾಪಕ್ಕೆ ಹಾನಿಯಾಗುತ್ತಿವೆ. ವಿದ್ಯುತ್ ಅಭಾವದಿಂದಾಗಿ ಸಾರ್ವಜನಿಕರಿಗೆ ಮತ್ತು ದನಕರುಗಳಿಗೆ ದಿನೇ ದಿನೇ ಕುಡಿವ ನೀರಿನ ತೊಂದರೆ ಹೆಚ್ಚುತ್ತಿದೆ. ಹೀಗಾಗಿ ಗ್ರಾಮದಲ್ಲಿ 11/33/110 ವಿದ್ಯುತ್ ವಿತರಣಾ ಕೇಂದ್ರವಿದ್ದರೂ ಇಲ್ಲಿನ ಗ್ರಾಮಸ್ಥರಿಗೆ ಫಲವಿಲ್ಲದಂತಾಗಿದೆ ಎಂದು ಸಮಿತಿಯ ಅಧ್ಯಕ್ಷ ಮಡಿವಾಳಪ್ಪ ಮಡ್ಡಿತೋಟ, ಮುಖಂಡ ವಿಜಯಕುಮಾರ, ಗುಂಡೇರಾವ ಅಸಮಾಧಾನ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳಿಗೆ ತೊಂದರೆ: ವಿಜಯಕುಮಾರ ಕಂಬಾರ ಮಾತನಾಡಿ, ಸದ್ಯ ಪಿಯುಸಿ ಪರೀಕ್ಷೆಗಳು ನಡೆಯುತ್ತಿವೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ಏ.1ರಿಂದ ಆರಂಭವಾಗಲಿವೆ. ಆದರೆ, ಜೆಸ್ಕಾಂ ಅಧಿಕಾರಿಗಳು ಮಧ್ಯಾಹ್ನ ಅಲ್ಲದೆ, ಆಗಾಗ ಅನಾವಶ್ಯಕವಾಗಿ ವಿದ್ಯುತ್ ಕಡಿತ ಮಾಡಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆ ನೀಡುತ್ತಿದ್ದು, ತಕ್ಷಣ ವಿದ್ಯುತ್ ಕಡಿತ ನಿಲ್ಲಿಸಿ ವಿದ್ಯಾರ್ಥಿಗಳ ಅನುಕೂಲ ಒದಗಿಸಬೇಕು ಎಂದು ಒತ್ತಾಯಿಸಿದರು. ನಿರಂತರ 6 ಗಂಟೆಗಳ ಕಾಲ 3 ಪೇಸ್, ಉಳಿದ ಸಮಯದಲ್ಲಿ 2 ಫೇಸ್ ವಿದ್ಯುತ್ ವಿತರಣೆಯನ್ನು ಕೈಗೊಳ್ಳಬೇಕೆಂಬ ಬೇಡಿಕೆಯನ್ನು ವಾರದಲ್ಲಿ ಈಡೇರಿಸದಿದ್ದರೆ ವಿದ್ಯುತ್ ವಿತರಣಾ ಕೇಂದ್ರದ ಮುಂದೆ ಉಗ್ರ ಹೋರಾಟ ಮಾಡಲಾಗುವುದು ಎಂಬ ಎಚ್ಚರಿಕೆಯ ಮನವಿ ಪತ್ರವನ್ನು ಜೆಸ್ಕಾಂ ಎಇಇ ಶಿವಶರಣಪ್ಪ ಮೇತ್ರೆ ಅವರಿಗೆ ಸಲ್ಲಿಸಲಾಯಿತು.
ಜೆಸ್ಕಾಂ ಶಾಖಾಧಿಕಾರಿ ಶಿವಶಶರಣಪ್ಪ ವಾಲಿ ಇದ್ದರು. ಸೋಮಯ್ಯ ಸ್ವಾಮಿ, ದತ್ತಾತ್ರೇಯ ನಾಶಿ, ಶ್ರೀಮಂತ ಕೋನೆಕಿ, ರವಿಕುಮಾರ ಮಡ್ಡಿತೋಟ, ಮಲ್ಲಿನಾಥ ಮಾಶಾಳ, ಪ್ರಭಾಕರ್ ಬಿರಾದಾರ, ಮಲ್ಲಿನಾಥ ಸವಳಿ, ಶೆಶಿಕಾಂತ ಶ್ರೀಗಣಿ, ಗುರುಶಾಂತ ದೊತ್ರೆ, ಹಣಮಂತ, ಮಲ್ಲಿನಾಥ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

