ಆಳಂದ, ಗುಲ್ಬರ್ಗ(ದ)ದಲ್ಲಿ ಅಯೋವುಯ
ಗುಲ್ಬರ್ಗ: ಇಡೀ ಜಿಲ್ಲೆಯ ತುಂಬಾ ಕಾಂಗ್ರೆಸ್ ಬಾವುಟ ಹಾರಿದರೆ ಆಳಂದ ಹಾಗೂ ಗುಲ್ಬರ್ಗ ದಕ್ಷಿಣ ಅಸಂಬ್ಲಿ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಪಕ್ಷ ನೆಲ ಕಚ್ಚಿದೆ. ಇಲ್ಲಿನ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಆರಂಭದಿಂದಲೂ ಅಪಸ್ವರ ಕೇಳಿ ಬರುತ್ತಿತ್ತು. ಅದು ಕೊನೆಯವರೆಗೂ ಮುಂದುವರಿದುಕೊಂಡು ಬಂದಿದ್ದಲ್ಲದೆ ಈ ಎರಡೂ ಕ್ಷೇತ್ರಗಳಲ್ಲಿ ಪಕ್ಷ ಹೀನಾಯ ಸೋಲುಂಡಿದ್ದು ಮಾತ್ರ ಈ ಮತ ಸಮರದ ಗಮನಾರ್ಹ ಬೆಳವಣಿಗೆ.
ಆಳಂದದಲ್ಲಿ ಸಿದ್ದಣ್ಣ ಮಾಸ್ಟರ್ ಶೇಗಜಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಆದರೆ ಇಲ್ಲಿ ಪ್ರಚಾರ ಕಾಯಂ ನಿರೀಕ್ಷೆಯಂತೆ ನಡೆಯಲೇ ಇಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು. ಈಗಿನ ಫಲಿತಾಂಶದ ಹಿನ್ನೆಲೆಯಲ್ಲಿ ಅದು ನಿಜವಾದಂತಾಗಿದೆ.
ಇನ್ನು ಗುಲ್ಬರ್ಗ ದಕ್ಷಿಣದಲ್ಲಂತೂ ದಿ. ವೀರೇಂದ್ರದರ ಪುತ್ರ ಕೈಲಾಸ ಪಾಟೀಲ್ ಸ್ಪರ್ಧೆಯಲ್ಲಿದ್ದರು. ಇಲ್ಲಿಯೂ ಏನಕೇನ ಪ್ರಕಾರೇಣ ಕೊರತೆ ಕಾಡಿ ಕಾಂಗ್ರೆಸ್ ಪಕ್ಷ 3ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದು ವಿಶೇಷ.
ಚರ್ಚೆಗೆ ಗ್ರಾಸ: ಈ ಎರಡೂ ಕ್ಷೇತ್ರಗಳ ಪೈಕಿ ಗುಲ್ಬರ್ಗ ದಕ್ಷಿಣದಲ್ಲಂತೂ ಎಐಸಿಸಿ ಅಧಿನಾಯಕಿ ಸೋನಿಯಾ ಗಾಂಧಿ ಖುದ್ದು ಪ್ರಚಾರ ನಡೆಸಿದರೆ, ಘಟಾನುಘಟಿ ನಾಯಕರಾದಂತಹ ಧರಂ, ಖರ್ಗೆಯವರೂ ಗುಲ್ಬರ್ಗ ದಕ್ಷಿಣ, ಜೊತೆಗೇ ಆಳಂದದಲ್ಲಿಯೂ ಪ್ರಚಾರ ನಡೆಸಿ ಮತ ಕೇಳಿದ್ದರು. ಗಣ್ಯರ ಮತ ಯಾಚನೆ ನಡುವೆಯೂ ಆಳಂದ ಹಾಗೂ ಹಾಗೂ ಗುಲ್ಬರ್ಗ ದಕ್ಷಿಣದಲ್ಲಿ ಕಾಂಗ್ರೆಸ್ ಕಳಪೆ ಸಾಧನೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಆಳಂದದಲ್ಲಿ ಕಣದಲ್ಲಿರುವ ಅಭ್ಯರ್ಥಿಗಳ ಪೈಕಿ ಸಿದ್ದಣ್ಣ ಮಾಸ್ಟರ್ ಶೇಗಜಿ 3, 912 ಹಾಗೂ ಗುಲ್ಬರ್ಗ ದಕ್ಷಿಣದಲ್ಲಿ ಕೈಲಾಸ ಪಾಟೀಲ್ ಇವರು 22, 074 ಮತಗಳನ್ನು ಮಾತ್ರ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕಾಂಗ್ರೆಸ್ ಕಳಪೆ ಸಾಧನೆ ಪಕ್ಷದ ಪರ ಕೆಲಸ ಮಾಡುತ್ತಿರುವ ಹಿರಿಯ, ಕಿರಿಯ ಕಾರ್ಯಕರ್ತರಿಗೆ, ಪ್ರಮುಖರಿಗೆ ನುಂಗಲಾರದ ತುತ್ತಾದಂತಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

