ಹನುಮಾನ ಮೂರ್ತಿ ಮೆರವಣಿಗೆ
ಗುಲ್ಬರ್ಗ: ನಗರದ ಬ್ರಹ್ಮಪುರ ಬಡಾವಣೆಯ ನ್ಯೂ ಮಾಣಿಕೇಶ್ವರಿ ಕಾಲೋನಿಯಲ್ಲಿ ಸಂಕಟ ವಿಮೋಚನ ಜೈ ಹನುಮಾನ ಸಂಘದ ವತಿಯಿಂದ ಸಂಕಟ ವಿಮೋಚನ ಜೈ ಹನುಮಾನ ಮೂರ್ತಿಯ ಭವ್ಯ ಮೆರವಣಿಗೆ ನಡೆಸಲಾಯಿತು. ಗಂಗಾ ನಗರದಿಂದ ನ್ಯೂ ಮಾಣಿಕೇಶ್ವರಿ ಕಾಲೋನಿವರೆಗೆ ಭವ್ಯ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಸಂಘದ ಅಧ್ಯಕ್ಷ ಶಂಕರರಾವ ಬೆಣ್ಣೂರ (ಬಿ), ಉಪಾಧ್ಯಕ್ಷ ಚಂದ್ರಕಾಂತ ತಳವಾರ, ಮನೋಹರರಾವ, ಈರಣ್ಣ ನೆಲೋಗಿ, ಭೀಮರಾವ ರೆಡ್ಡಿ, ಬಸವರಾಜ ಬೆಣ್ಣೂರ, ಅಂಬರೀಶ ದೊರೆ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.
ಮಾಂಸ ಮಾರಾಟ ನಿಷೇಧ
ಗುಲ್ಬರ್ಗ: ಬಸವೇಶ್ವರ ಜಯಂತಿ ಆಚರಣೆ ಪ್ರಯುಕ್ತ ಗುಲ್ಬರ್ಗ ನಗರಾದ್ಯಂತ ಮೇ 13ರಂದು ಯಾವುದೇ ರೀತಿಯ ಪ್ರಾಣಿವಧೆ ಮಾಡುವುದು ಮತ್ತು ಮಾಂಸ ಮಾರಾಟ ಮಾಡುವುದನ್ನು ನಿಷೇಧಿಸಿ ಗುಲ್ಬರ್ಗ ಮಹಾನಗರ ಪಾಲಿಕೆಯ ಆಯುಕ್ತ ಪಿ.ಎನ್.ರವೀಂದ್ರ ಆದೇಶ ಹೊರಡಿಸಿದ್ದಾರೆ. ಈ ಆದೇಶ ಉಲ್ಲಂಘಿಸಿದಲ್ಲಿ ಕೆಎಂಸಿ ಕಾಯ್ದೆ 1976ರ ರೀತ್ಯ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.
'ಬಿಜೆಪಿ 5 ವರ್ಷದಲ್ಲಿ ಅಭಿವೃದ್ಧಿ ಶೂನ್ಯ'
ಚಿಂಚೋಳಿ: ರಾಜ್ಯದಲ್ಲಿ ಬಿಜೆಪಿ ದುರಾಡಳಿತ ಮತ್ತು ಸ್ಥಳಿಯ ಕೆಜೆಪಿ ಅಭ್ಯರ್ಥಿ ಮಾಜಿ ಸಚಿವ ಸುನೀಲ್ ವಲ್ಯಾಪುರೆ ಅವರ ಅಹಂಕಾರ ಹಾಗೂ ಭ್ರಷ್ಟಾಚಾರಕ್ಕೆ ಜನತೆ ಬೇಸತ್ತು ಮತ್ತು ಹಣ ಹೆಂಡಕ್ಕೆ ಮಾರು ಹೋಗದೇ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿ ಕೆಜೆಪಿಗೆ ಗರ್ವಭಂಗವನ್ನುಂಟು ಮಾಡಿದ್ದಾರೆ ಎಂದು ಚಿಂಚೋಳಿ ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಅನೀಲಕುಮಾರ ಜಮಾದಾರ ಮತ್ತು ರಾಜ್ಯ ಆಹಾರ ನಿಗಮದ ಮಾಜಿ ನಿರ್ದೇಶಕ ಬಸವರಾಜ ಪಾಟೀಲ್ ಹದನೂರ ಹೇಳಿದ್ದಾರೆ. ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರು ಸಹ ಚಿಂಚೋಳಿ ಮತಕ್ಷೇತ್ರದಲ್ಲಿ ಕಳೆದ 5 ವರ್ಷಗಳಲ್ಲಿ ಅಭಿವೃದ್ಧಿ ಸಾಧನೆ ಶೂನ್ಯ. ಕಂದಾಯ ಇಲಾಖೆ ಮತ್ತು ಉಪ- ನೋಂದಣಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ಹೆಚ್ಚಾಗಿತ್ತು. ಜನ ಸಾಮಾನ್ಯರ ಯಾವುದೇ ಕೆಲಸ ಕಾರ್ಯಗಳಾಗಬೇಕಾದರೆ ಲಂಚ ನೀಡಬೇಕಾಗಿತ್ತು ಇದರಿಂದ ಜನರು ಬೇಸರಗೊಂಡಿದ್ದರು ಎಂದರು. ಕಾಂಗ್ರೆಸ್ ಪಕ್ಷ ಇಂತಹ ಭ್ರಷ್ಟಾಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಜಿಲ್ಲೆಯ ಅತ್ಯಂತ ಹಿಂದುಳಿದ ಭಾಗದಲ್ಲಿ ಅನೇಕ ಸಮಸ್ಯೆಗಳಿದ್ದು ವಿಶೇಷವಾಗಿ ಶಿಕ್ಷಕರ, ವೈದ್ಯರ ಹುದ್ದೆಗಳ ಭರ್ತಿಗೊಳಿಸುವಂತೆ ಶಾಸಕ ಡಾ. ಉಮೇಶ ಜಾಧವ ಅವರ ಗಮನಕ್ಕೆ ತರಲಾಗುವುದು ಎಂದರು. ಶಾಮರಾವ ರಾಠೋಡ, ಕೆ.ಎಂ.ಬಾರಿ. ಶ್ರೀನಿವಾಸ ಬಂಡಿ, ಮಾಜಿ ಜಿಪಂ ಸದಸ್ಯ ಧೂಳಪ್ಪ ಬೀರನಳ್ಳಿ, ಆರ್. ಗಣಪತರಾವ, ಶರಣರೆಡ್ಡಿ ಚಿಮ್ಮನಚೋಡ, ಪಪಂ ಸದಸ್ಯ ಅಬ್ದುಲ್ ಬಾಸೀತ್, ಮಂಜಲೇ ಪಟೇಲ್, ಅಯ್ಯೂಬಖಾನ್, ಶ್ರೀನಿವಾಸ ಚಿಂಚೋಳಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

