ನಗರದಲ್ಲೀಗ ಗಿರಿನಗರ ಸಂಚಾರ
ಕನ್ನಡಪ್ರಭ ವಾರ್ತೆ ಯಾದಗಿರಿ ಮೇ 10
ಕ್ಷಿಪ್ರಗತಿಯಲ್ಲಿ ಬೆಳವಣಿಗೆಯಾಗುತ್ತಿರುವ ನೂತನ ಜಿಲ್ಲಾ ಕೇಂದ್ರದ ಪ್ರಯಾಣಿಕರ ಅನುಕೂಲಕ್ಕೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು 'ಗಿರಿನಗರ' ಎಂಬ ಹೆಸರಿನಲ್ಲಿ ನಗರ ಸಾರಿಗೆ ಸೇವೆಯನ್ನು ಆರಂಭಿಸಿದೆ. ಇದಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಚುನಾವಣೆ ಘೋಷಣೆಗೂ ಮುನ್ನವೇ ನಗರ ಸಾರಿಗೆ ಸೇವೆ ಆರಂಭಿಸಲು ಬಸ್ಸುಗಳು ಬಂದಿದ್ದವು. ಆದರೆ ಅಧಿಸೂಚನೆ ಪ್ರಕಟವಾದ್ದರಿಂದ ಬಂದಿದ್ದ ಹೊಸ ಬಸ್ಸುಗಳು ಘಟಕದಲ್ಲೇ ನಿಂತಿದ್ದವು. ಆದರೆ ಚುನಾವಣೆ ಸಂದರ್ಭದಲ್ಲಿ ಮತದಾನ ಮಾಡುವವರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ವೋಟರ್ ಎಕ್ಸ್‌ಪ್ರೆಸ್ ಹೆಸರಿನಲ್ಲಿ ಸೇವೆ ಆರಂಭಿಸಿದ ಸಂಸ್ಥೆಯು ಈಗ ಅದನ್ನೇ ಮುಂದುವರಿಸಿದೆ. ಅದಕ್ಕೆ ಗಿರಿನಗರ ಎಂಬ ಹೆಸರನ್ನಿಟ್ಟು, ಜಿಲ್ಲಾ ಕೇಂದ್ರದಲ್ಲಿ ಸಂಚಾರ ಆರಂಭಿಸಿದೆ.
8 ಬಸ್ಸುಗಳು: ಯಾದಗಿರಿ ನಗರವು ನೂತನ ಜಿಲ್ಲಾ ಕೇಂದ್ರವಾಗಿದ್ದು, ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಆಗುತ್ತಿರುವ ನಗರವಾಗಿದೆ. ನಗರದಲ್ಲಿ ಈ ಹಿಂದೆ ಕಾರ್ಯಾಚರಣೆ ಮಾಡುತ್ತಿರುವ ನಗರ ಸಾರಿಗೆ ಸೇವೆಗಳನ್ನು ಮೇಲ್ದರ್ಜೆಗೇರಿಸಿ, ಪ್ರಯಾಣಿಕರಿಗೆ ಇನ್ನೂ ಉತ್ತಮ ಸಾರಿಗೆ ಸೇವೆ ಒದಗಿಸುವ ದೃಷ್ಟಿಯಿಂದ ಗಿರಿನಗರ ಎಂಬ 8 ನೂತನ ಮಾದರಿಯ ವಾಹನಗಳನ್ನು ಕಡಿಮೆ ದರದಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಸೇವೆ ಆರಂಭಿಸಲಾಗಿದೆ.
2 ಕೋಟಿ ವೆಚ್ಚದಲ್ಲಿ ಆರಂಭ: ಈ ಯೋಜನೆಯನ್ನು ಕಾರ್ಯಗತಗೊಳಿಸುವ ಸಲುವಾಗಿ ಕಂದುಗೆಂಪು ಬಣ್ಣದ ಗಿರಿನಗರ ನಗರ ಸಾರಿಗೆಗಳನ್ನು 2 ಕೋಟಿ ವೆಚ್ಚದಲ್ಲಿ ಪ್ರಾರಂಭಿಸಲಾಗಿದೆ. ಬೀದರ್, ಬಳ್ಳಾರಿ ಮತ್ತು ಹೊಸಪೇಟೆ ನಗರಗಳಲ್ಲಿ ಏಕಕಾಲಕ್ಕೆ ಈ ನಗರ ಸಾರಿಗೆ ಯೋಜನೆಯನ್ನು ಸಂಸ್ತೆಯು ಪ್ರಾರಂಭಿಸಿದೆ. ಈ ಹೊಸ ನಗರ ಸಾರಿಗೆ ವಾಹನಗಳನ್ನು ಪ್ರತಿ ಮಾರ್ಗದಲ್ಲಿ ಪ್ರತಿ 10 ನಿಮಿಷಕ್ಕೆ ಒಂದರಂತೆ ಕಾರ್ಯಾಚರಣೆ ಮಾಡಲಾಗುತ್ತಿದೆ.
ಅಲ್ಲದೇ ಪ್ರಯಾಣಿಕರ ಹಿತದೃಷ್ಟಿಯಿಂದ ಪ್ರಾರಂಭದಲ್ಲಿ ಈ ವಾಹನಗಳಿಗೆ ಕನಿಷ್ಠ 3ರ ಪ್ರಯಾಣ ದರ ನಿಗದಿಪಡಿಸಲಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಸದ್ಯದಲ್ಲಿಯೇ 20 ರಿಯಾಯತಿ ದರದಲ್ಲಿ ಒಂದು ದಿನದ ಬಸ್ ಪಾಸ್ ಹಾಗೂ 500 ದರದಲ್ಲಿ ಮಾಸಿಕ ಬಸ್ ಪಾಸ್ ವಿತರಿಸಲು ಕ್ರಮ ಕೈಗೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

