6 ವರ್ಷವಾದರೂ 'ಆಸರೆ'ಯಾಗದ ಸರ್ಕಾರ
ಕ.ಪ್ರ. ವಾರ್ತೆ , ಬಾಗಲಕೋಟೆ , ಮೇ 11
ಹಗಲು ಉರಿ ಬಿಸಿಲಿಗೆ ಕಾದು ಕೆಂಡವಾಗುವ ತಗಡುಗಳಿಂದ ಮೈಯಲ್ಲಿನ ನೀರು ಬಸಿದು ಹೋಗುವಷ್ಟು ಸೆಕೆ. ರಾತ್ರಿಯಾದರೆ ಬಿರುಗಾಳಿಗೆ ಆ ತಗಡುಗಳು ಹಾರಿ ಬಿದ್ದು ಗಾಯವಾಗುವ ಚಿಂತೆ. ಬಸುರಿ, ಬಾಣಂತಿ, ವೃದ್ಧರು, ರೋಗಿಗಳ ಬದುಕು ಇಲ್ಲಿ ನಿಜಕ್ಕೂ ನರಕ.
2007ರ ಸೆಪ್ಟೆಂಬರ್ನಲ್ಲಿ ಮಲಪ್ರಭೆ ಉಕ್ಕೇರಿ ಇಡಿ ಊರಿಗೆ ಊರನ್ನೇ ಬೀದಿಗೆಸೆದಿರುವ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಇಂಗಳಗಿ ನೆರಸಂತ್ರಸ್ತರ ದಯನೀಯ ಸ್ಥಿತಿ ಇದು.
ಕಮತಗಿ ಪಟ್ಟಣದಿಂದ 3 ಕಿ.ಮೀ ಅಂತರದಲ್ಲಿ ಇಂಗಳಗಿ ಗ್ರಾಮವಿದೆ. ಮಲಪ್ರಭೆಯ ಅಬ್ಬರಕ್ಕೆ ರಾತ್ರೋ ರಾತ್ರಿ ಊರು ಬಿಟ್ಟು ಗುಡ್ಡ ಏರಿ ಕುಳಿತವರಿಗೆ ಅದೇ ಗುಡ್ಡ ಈಗ ಕಾಯಂ ಆಗಿದೆ. ಊರೆಲ್ಲ ಮುಳುಗಿದ್ದರಿಂದ ಅದೊಂದೇ ಅಂದು ಸುರಕ್ಷಿತ ಸ್ಥಳವಾಗಿತ್ತು. ಹಾಗಾಗಿ ಸರ್ಕಾರ ಅಲ್ಲಿಯೇ ಸಾಲು ಸಾಲು 150 ಶೆಡ್ಗಳನ್ನು ನಿರ್ಮಿಸಿ ಅವರಿಗೆಲ್ಲ ತಾತ್ಕಾಲಿಕ ಆಸರೆ ಕಲ್ಪಿಸಿದೆ.
ಹೀಗೆ ಇವರು ಬೀದಿಗೆ ಬಿದ್ದು ಬರುವ ಸೆಪ್ಟೆಂಬರ್ಗೆ ಸರಿಯಾಗಿ ಆರು ವರ್ಷಗಳಾಗುತ್ತವೆ. ಆದರೂ ರಾಜ್ಯ ಸರ್ಕಾರ ಇನ್ನೂ “AÑÚÁæ’¾ÚáÛWÄÇ. ದಾನಿಗಳ ಉದಾರ ನೆರವು, ಕೇಂದ್ರ ಸರ್ಕಾರದ ಅಪಾರ ಅನುದಾನ ಮತ್ತು ತಮ್ಮ ಬಿಜೆಪಿ ಸರ್ಕಾರದ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಿ ಈ ಸಂತ್ರಸ್ತರ ಕಂಬನಿ ಒರೆಸಲು ಮುಂದಾದ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೆರೆ ಪೀಡಿತ ಪ್ರದೇಶದಲ್ಲೇ ಮೊಟ್ಟ ಮೊದಲು ಅಡಿಗಲ್ಲು ಹಾಕಿದ್ದು ಇಲ್ಲಿಯೇ ಆಗಿದ್ದರೂ ಇವರಿಗೆ ತಗಡಿನ ಶೆಡ್ಗಳ ವಾಸಗಳ ವಾಸದಿಂದ ಮುಕ್ತಿ ಸಿಕ್ಕಿಲ್ಲ.
ಗಿಡದ ನೆರಳೇ AÑÚÁæ: ಈಗ ಸತತ ಎರಡು ವರ್ಷಗಳಿಂದ ಈ ಭಾಗದಲ್ಲಿ ಆವರಿಸಿರುವ ಬರಗಾಲದಿಂದ ಬಿಸಿಲು ಇನ್ನಷ್ಟೂ ಕ್ರೂರವಾಗಿದೆ. ಈ ತಾಪಕ್ಕೆ ಹೆದರಿ ಬಾಣಂತಿಯರು ಹೊಲಗಳ ಬದುವಿನ ಗಿಡಗಳ ನೆರಳಿನ ಆಸರೆ ಪಡೆಯುತ್ತಾರೆ. ವೃದ್ಧರು, ರೋಗಿಗಳ ಕಥೆಯೂ ಅಷ್ಟೆ.
ಇಳಿ ಸಂಜೆವರೆಗೆ ಅವರು ಅಲ್ಲಿಯೇ ಇದ್ದು ಬಳಿಕ ಶೆಡ್ಗೆ ಮರಳುತ್ತಾರೆ. ಇನ್ನೇನು ರಾತ್ರಿಯಾಯಿತು ಎನ್ನುತ್ತಿದ್ದಂತೆ ಮತ್ತೊಂದು ಆತಂಕ ಅವರನ್ನು ಆವರಿಸುತ್ತದೆ. ತುಸು ಗಾಳಿ ಬೀಸಿದರೂ ಶೆಡ್ಗಾಗಿ ಬಳಸಿದ ಕಟ್ಟಿಗೆಗಳು ಹಳತಾಗಿರುವುದರಿಂದ ತಗಡುಗಳು ಹಾರುತ್ತವೆ.
ನಾಯಕರ ಮೊಸಳೆ ಕಣ್ಣೀರು: ಕೇವಲ ಆರು ತಿಂಗಳಲ್ಲಿ ಹೊಸ ಗ್ರಾಮ ನಿರ್ಮಿಸಿ ಕೊಡುತ್ತೇವೆ ಎನ್ನುತ್ತಿದ್ದ ಯಡಿಯೂರಪ್ಪ ಅವರ ಮಾತು ನಂಬಿದ ಸಂತ್ರಸ್ತರು ತಗಡಿನ ಶೆಡ್ನಲ್ಲಿ ಬದುಕು ಮುಂದುವರಿಸುವ ಜತೆಗೆ ಗ್ರಾಮಕ್ಕೆ ಸೇರಿದ 24 ಎಕರೆ ಭೂಮಿಯನ್ನು ಆಸರೆ ಮನೆಗಳ ನಿರ್ಮಾಣಕ್ಕೆ ಉಚಿತವಾಗಿ ನೀಡಿದ್ದಾರೆ. ರಾಜ್ಯ ಸರ್ಕಾರಿ ಸ್ವಾಮ್ಯದ ಎಂಎಸ್ಐಎಲ್ ಈ ಆಸರೆಗಳನ್ನು ನಿರ್ಮಿಸುವ ವಾಗ್ದಾನ ಮಾಡಿದೆ. ಭೂ ಸೇನಾ ನಿಗಮ ಕಾಮಗಾರಿಯ ಉಸ್ತುವಾರಿ ವಹಿಸಿದ್ದರೂ ಮನೆಗಳು ಮಾತ್ರ ಪೂರ್ಣಗೊಂಡಿಲ್ಲ.
ಶಾಸಕರು, ಸಚಿವರು, ಸ್ವತಃ ಮುಖ್ಯಮಂತ್ರಿಗಳೇ ಇಲ್ಲಿಗೆ ಬಂದು ಸಾಂತ್ವನ ಹೇಳಿದ್ದಕೂ ಈ ಸಂತ್ರಸ್ತರ ಬದುಕಿಗೊಂದು ಸರಿಯಾದ ಆಸರೆ ಸಿಕ್ಕಿಲ್ಲ. ಇಂದಿಲ್ಲ ನಾಳೆ ಆಸರೆ ಸಿಕ್ಕೇ ಸಿಗುತ್ತದೆ ಎನ್ನುವ ನಿರೀಕ್ಷೆಯಲ್ಲೇ ಐದೂವರೆ ವರ್ಷಗಳನ್ನು ನೂಕಿರುವ ಈ ಸಂತ್ರಸ್ತರ ಕಣ್ಣಲ್ಲೀಗ ಕನಸುಗಳೇ ಇಂಗಿ ಹೋಗಿವೆ.
-ಮಲ್ಲಿಕಾರ್ಜುನ ಸಿದ್ದಣ್ಣವರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

