ಬಸವಣ್ಣ ಸಮಾನತೆ ಹರಿಕಾರ
ಕ.ಪ್ರ. ವಾರ್ತೆ ಸುರಪುರ ಮೇ 14
ಜಗತ್ತು ಕಂಡ ಅತ್ಯಂತ ನಿಷ್ಠುರ ವಿಚಾರವಾದಿಗಳಲ್ಲಿ ಬಸವಣ್ಣ ಒಬ್ಬರು. ಜಾತಿ, ಧರ್ಮವನ್ನು ಬದಿಗಿಟ್ಟು ಸರ್ವರಲ್ಲಿಯೂ ಸಮಾನತೆ ಸಾರಿದರು. ಸಮಾಜ ಸುಧಾರಣೆಯಲ್ಲಿ ನಿರತರಾಗಿದ್ದ ಅವರು ಧರ್ಮ ಜಾಗೃತಿಯಡಿಯಲ್ಲೇ ಕಾಯಕ ಮಾಡಿ ಸಕಲರಿಗೂ ಒಳ್ಳೆಯದನ್ನೇ ಬಯಸಿದ ಮಹಾನ್ ಸುಧಾರಕ ಎಂದು ಚಿಗರಿಹಳ್ಳಿಯ ಮರುಳು ಶಂಕರದೇವರ ಗುರುಪೀಠದ ಸಿದ್ದಬಸವ ಕಬೀರಾನಂದ ಸ್ವಾಮೀಜಿ ಹೇಳಿದರು.
ಇಲ್ಲಿಯ ಮಿನಿ ವಿಧಾನಸೌಧದ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 882ನೇ ಬಸವ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, 12ನೇ ಶತಮಾನದಲ್ಲಿದ್ದ ದುರಾಡಳಿತ, ಅಸಮಾನತೆ ಹಾಗೂ ಶೋಷಣೆಯಿಂದ ಕೂಡಿದ್ದ ಸಮಾಜವನ್ನು ಕ್ರಾಂತಿಯ ಮೂಲಕ ತೊಡೆದು ಹಾಕಿದರು. ಆದರ್ಶ ರಾಜಕಾರಣಿಯಾಗಿ, ಭಕ್ತಿ ಭಂಡಾರಿಯಾಗಿ, ಧಾರ್ಮಿಕ ಪುರಷನಾಗಿ, ಸಮಾಜೋದ್ಧಾರಕನಾಗಿ ಜನಮಾನಸದಲ್ಲಿ ಸಹಸ್ರಾರು ವರ್ಷಗಳಿಂದ ಭಕ್ತಿಯ ಹೆಸರಿನಲ್ಲಿದ್ದ ಮೂಢನಂಬಿಕೆಗಳನ್ನು ತಮ್ಮ ವೈಚಾರಿಕ ವಚನಗಳ ಮೂಲಕ ತೊಳೆಯಲು ಪ್ರಯತ್ನಿಸಿದರು. ಕೇವಲ ಡಾಂಭಿಕತೆಯಿಂದ ಭಕ್ತಿಯ ನೆಲೆ ಸಿಗದು ಎಂದು ಪ್ರತಿಪಾದಿಸಿದ್ದಾರೆ ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷ ರಾಜಾ ಮೌನೇಶ್ವರನಾಯಕ ಕಾರ್ಯಕ್ರಮ ಉದ್ಘಾಟಿಸಿದರು. ತಹಸೀಲ್ದಾರ್ ಮೊಹ್ಮದ್ ಗೌಸುದ್ದೀನ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೀರಶೈವ ಸಮಾಜ ತಾಲೂಕು ಅಧ್ಯಕ್ಷ ಸುರೇಶ ಸಜ್ಜನ್ ಮಾತನಾಡಿದರು. ತಾಪಂ ಅಧ್ಯಕ್ಷೆ ಸಾಬಮ್ಮ ದೇಸಾಯಿ, ಇಒ ಪ್ಯಾರೆ ಮೊಹ್ಮದ್ ಕುತುಬುದ್ದೀನ್, ಪಿಐ ರಾಜಕುಮಾರ ವಾಜಂತ್ರಿ ವೇದಿಕೆಯಲ್ಲಿದ್ದರು.
ಪ್ರಮುಖರಾದ ಮುದ್ದಣ ಸರಪಟ್ಟಣಶೆಟ್ಟಿ, ದೇವಿಂದ್ರ ಕಳ್ಳಿಮನಿ, ಗುರುಸಂಗಪ್ಪಗೌಡ, ಜಿ.ಎಸ್.ಪಾಟೀಲ್, ವೀರಪ್ಪ ಅವಂಟಿ, ಶಾಂತಪ್ಪ ಬೂದಿಹಾಳ, ಬಸವರಾಜ ಜಮದ್ರಖಾನಿ, ಸೋಮಶೇಖರ ಶಾಬಾದಿ, ಮಲ್ಲಿಕಾರ್ಜುನ ಸತ್ಯಂಪೇಟೆ, ನಿಂಗಣ್ಣ ದೇಸಾಯಿ, ಮನೋಹರ ಕುಂಟೋಜಿ, ಆದಪ್ಪ ಹೊಸ್ಮನಿ, ಯಲ್ಲಪ್ಪ ಹುಲಿಕಲ್, ಶರಣಪ್ಪ ಯಾಳಗಿ, ದೊಡ್ಡ ದೇಸಾಯಿ, ಸೂಗುರೇಶ ವಾರದ, ಬಸವರಾಜ ಶೀಲವಂತ, ಶಿವಶರಣ್ಪಪ ಹೆಡಗಿನಾಳ, ಸಿದ್ದಲಿಂಗ ಕಡ್ಲಪ್ಪಮಠ, ಸುರೇಶ ಶೆಟ್ಟಿ, ರಾಜಶೇಖರ ಪಾಟೀಲ್, ಸಿದ್ದಣ್ಣ ಬ್ಯಾಳಿ, ಮಂಜು ಗುಳಗಿ ಇತರರಿದ್ದರು. ಬಿ.ಆರ್.ಪಾಟೀಲ್ ನಿರೂಪಿಸಿದರು. ಅಶೋಕ ಸುರಪುರಕರ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

