ವಿಟಿಎನ್ ಸ್ಟುಡಿಯೋ: ಬಸವ ಜಯಂತಿ
ಗುಲ್ಬರ್ಗ: ನಗರದ ಬಂಬೂ ಬಜಾರ್ನಲ್ಲಿರುವ ಬೆಳಗಾವಿ ಸುವರ್ಣ ಸೌಧ ರಾಷ್ಟ್ರೀಯ ಲಾಂಛನ ಅಶೋಕ ಸ್ತಂಭ ನಿರ್ಮಿಸಿರುವ ಲೋಹ ಶಿಲ್ಪಕಲಾವಿದ ವಿಶ್ವೇಶ್ವರಯ್ಯ ಟಿ.ಎನ್. ಅವರ ವಿಟಿಎನ್ ಸ್ಟುಡಿಯೋದಲ್ಲಿ ಸೋಮವಾರ ಶೃದ್ಧಾ, ಭಕ್ತಿಯಿಂದ ಬಸವ ಜಯಂತ್ಯುತ್ಸವವನ್ನು ಆಚರಿಸಲಾಯಿತು. ತಮ್ಮ ಗ್ರಾಮದಲ್ಲಿ ನೂತನವಾಗಿ ಸ್ಥಾಪಿಸಲ್ಪಡುವ ಬಸವೇಶ್ವರ ಪುತ್ಥಳಿಯನ್ನು ಅತ್ಯಾಕರ್ಷಕವಾಗಿ ನಿರ್ಮಿಸಿದ ಕಲಾವಿದ ವಿಶ್ವೇಶ್ವರಯ್ಯ ಟಿ.ಎನ್. ಅವರಿಗೆ ನೆರೆಯ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಅಣಬಿ ಗ್ರಾಮದ ಗಣ್ಯರಾದ ಷಣ್ಮುಖಪ್ಪ ಚೆನ್ನಶೆಟ್ಟಿ ಹಾಗೂ ಸಂಗಣ್ಣ ಸಾಹು ಶಿನ್ನೂರ್ ಅವರು ಸಿಹಿ ತಿನ್ನಿಸಿ, ಹೂಮಾಲೆ ಹಾಕಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಛಾಯಾಗ್ರಾಹಕ ನಾರಾಯಣ ಎಂ. ಜೋಶಿ, ಚಂದ್ರಕಲಾ, ಅನಿತಾ, ರತ್ನಮಾಲಾ, ಶಾಂತಮ್ಮ, ರಮೇಶ, ಫಾಯೂರ್, ವಿರಾಟ್ ರಾಜ್, ತನುಶ್ರೀ ಮುಂತಾದವರು ಬಸವ ಜಯಂತ್ಯುತ್ಸವದಲ್ಲಿ ಪಾಲ್ಗೊಂಡಿದ್ದರು.ಪುಸ್ತಕಗಳ ಮಾರಾಟ ರಿಯಾಯತಿ ಗುಲ್ಬರ್ಗ: ಬೇಸಿಗೆ ಪುಸ್ತಕ ಮೇಳದ ಅಂಗವಾಗಿ ನವ ಕರ್ನಾಟಕ ಪ್ರಕಾಶನ ಸಂಸ್ಥೆಯು ವಿಶೇಷ ರಿಯಾಯತಿ ದರದಲ್ಲಿ ಪುಸ್ತಕಗಳ ಮಾರಾಟ ಮಾಡುತ್ತಿದೆ. ಪ್ರಕಾಶನದ ಎಲ್ಲ ಪುಸ್ತಕಗಳನ್ನು ಶೇ. 20ರಷ್ಟು ಮತ್ತು ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಕನ್ನಡ ಮತ್ತು ಇಂಗ್ಲೀಷ ಪುಸ್ತಕಗಳು, ಎಲ್ಲ ರಂಗದವರಿಗೂ ಎಲ್ಲ ವಯೋವಾನದವರಿಗೂ ಬೇಕಾದ ಸುಲಭ ಬೆಲೆಯ ಪುಸ್ತಕಗಳು, ಹೆಸರಾಂತ ಪ್ರಕಾಶಕರ ಹಾಗೂ ಖ್ಯಾತ ಲೇಖಕರ ಅತ್ಯುತ್ತಮ ಕೃತಿಗಳು, ಮಕ್ಕಳಿಗಾಗಿ ಆಕರ್ಷಕ ವರ್ಣರಂಜಿತ ಸಚಿತ್ರ ಪುಸ್ತಕಗಳು ಹಾಗೂ ಚಿತ್ರಪಟಗಳನ್ನು ಶೇ. 15ರಷ್ಟು ರಿಯಾಯತಿ ದರದಲ್ಲಿ ಮಾರಾಟ ಮಾಡುತ್ತಿದೆ. ಈ ರಿಯಾಯತಿ ಸೌಲಭ್ಯವನ್ನು ಮೇ. 31ರವರೆಗೆ ಒದುಗರಿಗೆ ಒದಗಿಸಲಾಗಿದೆ. ಹೆಚ್ಚು ಹೆಚ್ಚು ಪುಸ್ತಕ ಪ್ರೇಮಿಗಳು ಇದರ ಲಾಭ ಪಡೆಯಬೇಕು ಎಂದು ಪ್ರಕಾಶನ ಸಂಸ್ಥೆಯ ಶಾಖಾ ವ್ಯವಸ್ಥಾಪಕ ಸಂಜಯ ಪಾಟೀಲ್ ಮನವಿ ಮಾಡಿದ್ದಾರೆ.ನಾಳೆ ಸಂದರ್ಶನಗುಲ್ಬರ್ಗ: ತಾತ್ಕಾಲಿಕವಾಗಿ ವೈದ್ಯಾಧಿಕಾರಿಗಳು ಮತ್ತು ಶುಶ್ರೂಷಕಿಯರ ಒಂದು ವರ್ಷದ ಗುತ್ತಿಗೆ ಆಧಾರದ ಮೇಲೆ ನೇಮಕಾತಿಗಾಗಿ ಇದೇ 16 ರಂದು ಸಂದರ್ಶನ ನಡೆಯಲಿದೆ.ಎನ್.ಆರ್.ಎಚ್.ಎಂ.ನ ಸುವರ್ಣ ಆರೋಗ್ಯ ಚೈತನ್ಯ ಶಾಲಾ ಆರೋಗ್ಯ ಕಾರ್ಯಕ್ರಮದಡಿ 2012-13ನೇ ಸಾಲಿನ ಗುಲ್ಬರ್ಗ ಜಿಲ್ಲೆಯ 7ತಾಲೂಕಿಗೆ ತಾತ್ಕಾಲಿಕವಾಗಿ ವೈದ್ಯಾಧಿಕಾರಿಗಳು ಮತ್ತು ಶುಶ್ರೂಷಕಿಯರ(ಮಹಿಳಾ) ಹುದ್ದೆಗಳನ್ನು ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸಲು ಮೆರಿಟ್ ಆಧಾರದ ಮೇಲೆ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿತ್ತು. ಅಭ್ಯರ್ಥಿಗಳು ಎಲ್ಲ ಮೂಲ ದಾಖಲಾತಿಗಳೊಂದಿಗೆ ಮೇ 16 ರಂದು ಬೆಳಗ್ಗೆ 10 ಗಂಟೆಗೆ ಗುಲ್ಬರ್ಗ ಜಿಲ್ಲಾ ಕಿರಿಯ ಆರೋಗ್ಯ ಸಹಾಯಕರ ತರಬೇತಿ ಕೇಂದ್ರದಲ್ಲಿ ನಡೆಸುವ ಸಂದರ್ಶನಕ್ಕೆ ಹಾಜರಾಗಲುಸೂಚಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

