ಗುಲ್ಬರ್ಗಾ

ಸುದ್ದಿ ಸಂಕ್ಷೇಪ

Published On :

ಕಾಂಗ್ರೆಸ್ ಸೂಕ್ತ ಕ್ರಮ ಅನುಸರಿಸಿಲ್ಲ: ಆರೋಪ
ಗುಲ್ಬರ್ಗ:
ಅಖಿಲ ಭಾರತ ಕಾಂಗ್ರೆಸ್ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವಲ್ಲಿ ಸರಿಯಾದ ಕ್ರಮ ಅನುಸರಿಸದೇ ಪಕ್ಷದಲ್ಲಿ ಜಾತಿಯತೆ ಭುಗಿಲೇಳುವಂತೆ ಮಾಡಿರುವ ಕೆಲವು ಹಿರಿಯ ಕಾಂಗ್ರೆಸ್ ಧುರೀಣರ ಕ್ರಮ ಖಂಡನೀಯವಾಗಿದೆ ಎಂದು ಗುಲ್ಬರ್ಗ ನಗರದ ನ್ಯಾಯವಾದಿಗಳಾದ ಗುರುರಾಜ ವಿ. ತಿಳಗೂಳ, ಸುಧೀರ ಜಿ. ತೆಲಂಗಿ ಮತ್ತು ಪ್ರಕಾಶ ಎಂ. ಸಿಂಗೆ ತಿಳಿಸಿದ್ದಾರೆ.
ಹೆಮ್ಮೆಯ ಸಂಗತಿ: ಸಿದ್ದರಾಮಯ್ಯನವರು ಹಿಂದುಳಿದ ಜನಾಂಗದವರಾಗಿದ್ದಾರೆ. ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಕುರುಬ ಜನಾಂಗದ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ದೊರಕಿಸಿಕೊಟ್ಟಿರುವುದು ಹೆಮ್ಮೆಯ ಸಂಗತಿ. ಆದರೆ, ಕಳೆದ 40 ವರ್ಷದಿಂದ ಕಾಂಗ್ರೆಸ್ ಬಗ್ಗೆ ಹಗಲಿರುಳು ಶ್ರಮವಹಿಸಿ ಕಾರ್ಯ ನಿರ್ವಹಿಸಿದ ಮಲ್ಲಿರ್ಕಾರ್ಜುನ ಖರ್ಗೆ ಅವರನ್ನು ಧುರೀಣರು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏಕಪಕ್ಷಿಯ ಮುಖ್ಯಮಂತ್ರಿ ಆಯ್ಕೆ ಮಾಡಿರುವ ಕ್ರಮ ಖಂಡಿಸಿದ್ದಾರೆ.
ತೃಪ್ತಿದಾಯಕ: ಮಲ್ಲಿಕಾರ್ಜುನ ಖರ್ಗೆ ಅವರು ಇಂದಿನವರೆಗೂ ಜಾತಿ ರಾಜಕಾರಣ ಮಾಡದೇ ತಾವೊಬ್ಬ ದಲಿತ ಜನಾಂಗಕ್ಕೆ ಸೇರಿದವನು ಎಂಬ ಕಾರಣಕ್ಕಾಗಿ ಮುಖ್ಯಮಂತ್ರಿ ಸ್ಥಾನ ಎಂದೂ ಕೇಳಿರುವುದಿಲ್ಲ, ಪಕ್ಷದ ಬಗ್ಗೆ ದುಡಿದಿದ್ದು, ತಮ್ಮ ಕೆಲಸ ತೃಪ್ತಿದಾಯಕವಾಗಿದೆ ಎಂದು ಹೈಕಮಾಂಡ್ ಪರಿಗಣಿಸಿದರೆ ಮಾತ್ರ ಮುಖ್ಯಮಂತ್ರಿಯಾಗಲು ಬದ್ಧ ಎಂದಿದ್ದರು ಎಂದು ವಕೀಲರು ತಿಳಿಸಿದ್ದಾರೆ.

ಬಸವ ಜಯಂತ್ಯುತ್ಸವ
ಶಹಾಪುರ:
ಕಾಯಕ ತತ್ವ ಪರಿಚಯಿಸಿದ ಕಾಯಕಯೋಗಿ ಬಸವಣ್ಣನವರ  ಜಯಂತಿಯನ್ನು ತಾಲೂಕಿನ ಕೊಳ್ಳೂರು (ಎಂ) ಗ್ರಾಮದಲ್ಲಿ ಶಿವ ಬಸವೇಶ್ವರ ಸಮಿತಿಯಿಂದ ಈಚೆಗೆ ಆಚರಿಸಲಾಯಿತು. ಶಿವರಡ್ಡಿ ಪಾಟೀಲ ಅವರು ಬಸವಣ್ಣನವರ ತತ್ವ ವಿಚಾರಗಳು ಕಾಯಕ ನಿಷ್ಠೆಯ ಕುರಿತು ಮಾತನಾಡಿದರು. ವಚನ ಸಂದೇಶದ ಮೂಲಕ ಜಗತ್ತನ್ನು ಕತ್ತಲಿನಿಂದ ಬೆಳಕು ಮೂಡಿಸಿ ಕ್ರಾಂತಿಕಾರಿ ವಚನಗಳ ಮೂಲಕ ಸಮಾಜವನ್ನು ಸರಿದಾರಿಗೆ ತರುವಲ್ಲಿ ಬಸವಣ್ಣನವರು 12ನೇ ಶತಮಾನದಲ್ಲಿ ಅವಿರತ ಶ್ರಮಿಸಿದರು. ಅವರು ಹಾಕಿಕೊಟ್ಟ ದಾರಿಯಲ್ಲಿ ವಚನಗಳ ಸಾರವನ್ನು ಅರ್ಥಮಾಡಿಕೊಂಡು ನಡೆಯುವುದು ಅಗತ್ಯವಾಗಿದೆ ಎಂದರು. ಮಲ್ಲರಡ್ಡಿ, ಅಯ್ಯಣಗೌಡ, ಚಂದ್ರಕಾಂತ, ಗಂಗಾಧರ ಇತರರಿದ್ದರು.

ಇಂದು ಸಾಲ ವಿತರಣೆ
ಗುಲ್ಬರ್ಗ
: ನಗರದ ಕೆನರಾ ಬ್ಯಾಂಕ್ ವತಿಯಿಂದ ಮೇ 17ರಂದು ಸಂಜೆ 4ಕ್ಕೆ  ಕೆನರಾ ಬ್ಯಾಂಕ್ ವೃತ್ತ ಕಚೇರಿ ಆವರಣದಲ್ಲಿ ಡಾ. ಅಂಬೇಡ್ಕರ್ 123ನೇ ಜನ್ಮದಿನಾಚರಣೆ ಮತ್ತು ಎಸ್ಸಿ, ಎಸ್ಟಿ ಫಲಾನುಭವಿಗಳಿಗೆ ಸಾಲಪತ್ರ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗುಲ್ಬರ್ಗ ಜಿಪಂ ಸಿಇಒ ಪಲ್ಲವಿ ಆಕುರಾತಿ, ಬೆಂಗಳೂರಿನ ಕೆನರಾ ಬ್ಯಾಂಕಿನ ಎಸ್ಸಿ, ಎಸ್ಟಿ ನೌಕರರ ಸಂಘದ ಅಧ್ಯಕ್ಷ ಪುರುಷೋತ್ತಮ ದಾಸ, ಗುರುಸ್ವಾಮಿ ಮುಖ್ಯ ಅತಿಥಿಳಾಗಿ ಆಗಮಿಸಲಿದ್ದಾರೆ.  ಗುಲ್ಬರ್ಗ ವೃತ್ತ ಬ್ಯಾಂಕಿನ ಉಪ ಮಹಾಪ್ರಬಂಧಕ ಎನ್. ನಾಗಾನಂದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಬಿ.ಎಂ. ರಾವ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.