ಭಗೀರಥ ಸಮಾಜದಿಂದ ಬಸವ ಜಯಂತಿ
ಸುರಪುರ: ಬಸವಣ್ಣನವರು ಕೇವಲ ಒಂದು ಜಾತಿಗೆ ಸೀಮಿತವಾದ ವ್ಯಕ್ತಿ ಅಲ್ಲ. ಎಲ್ಲ ಜಾತಿ ಜನಾಂಗದವರ ಆರಾಧ್ಯ ದೈವವಾಗಿದ್ದಾರೆ ಎಂದು ಭಗೀರಥ ಸಮಾಜದ ಯುವ ಮುಖಂಡ ಮಹೇಶ ರಾವೂರ್ ಹೇಳಿದರು.
ತಾಲೂಕಿನ ಪೇಠ ಅಮ್ಮಾಪುರ ಗ್ರಾಮದಲ್ಲಿ ಭಗೀರಥ ಸಮಾಜ ಏರ್ಪಡಿಸಿದ್ದ ಮಹಾತ್ಮ ಬಸವೇಶ್ವರ ಜಯಂತ್ಯುತ್ಸವದಲ್ಲಿ ಮಾತನಾಡಿ, ಸಮಾಜದಲ್ಲಿನ ಅನಿಷ್ಟತೆಗಳನ್ನು ಬುಡಸಹಿತ ಕಿತ್ತೊಗೆಯಲು ಬಸವಣ್ಣನವರು ಅವಿರತವಾಗಿ ಶ್ರಮಿಸಿದ್ದಾರೆ.
ಮನುಷ್ಯರನ್ನು ಮನುಷ್ಯರಂತೆ ಕಾಣುವ ಪರಿಯನ್ನು ಜಗತ್ತಿಗೆ ಕಲಿಸಿಕೊಟ್ಟ ಅವರು ಮಹಾನ್ ದಾರ್ಶನಿಕರು. ಸರಳ ಬದುಕನ್ನು ಹೇಗೆ ರೂಪಿಸಿಕೊಳ್ಳಬೇಕು ಎಂಬುದರ ಬಗ್ಗೆ ತಮ್ಮ ವಚನಗಳ ಮೂಲಕ ತಿಳಿಸಿದ ಬಸವಣ್ಣನವರು ವಿಶ್ವ ಮಾನವರೆನಿಸಿಕೊಂಡಿದ್ದಾರೆ. ಅವರ ತತ್ವಾದರ್ಶಗಳು ಸರ್ವ ಕಾಲಕ್ಕೂ ಪ್ರಸ್ತುತ. ಅವರು ತಿಳಿಸಿದ ಆದರ್ಶಗಳನ್ನು ಯುವಕರು ಅಳವಡಿಸಿಕೊಂಡಲ್ಲಿ ಪ್ರಗತಿ ಸಾಧ್ಯ. ದಾಸೋಹ ಮತ್ತು ಕಾಯಕಗಳ ಬಗ್ಗೆ ಅವರು ತಿಳಿಸಿದ ವಿವರಗಳು ಸರ್ವ ಕಾಲಕ್ಕೂ ಅನುಕರಣೀಯ. ಇವುಗಳು ಎಲ್ಲ ಕಾಲಕ್ಕೂ ಆದರ್ಶ ಎಂದರು.
ಅಧ್ಯಕ್ಷತೆ ವಹಿಸಿದ್ದ ಹಣಮಂತ ಸಾಹು ಬಸವೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಬಸವರಾಜ ಬಲವಂತನೋರ್, ಮಲ್ಲಿಕಾರ್ಜುನರಡ್ಡಿ ಕೋಳಿಹಾಳ, ಭಿಮನಗೌಡ ಸಾಹು, ಮಲ್ಲು ಯಾಳವಾರ, ವೆಂಕಟೇಶ ಬಡಿಗೇರ, ಮಹೇಶ ಯಾಳವಾರ, ದೇವು ಕೋಳಿಹಾಳ, ಮಹಾದೇವ ಯಾಳವಾರ ಇತರರು ಇದ್ದರು. ದೇವು ಸಾವಿನ್ ಸ್ವಾಗತಿಸಿದರು. ಪ್ರಕಾಶ ನಿರೂಪಿಸಿ, ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

