ಗುಲ್ಬರ್ಗಾ

ಮಹಾಮಹಿಮರಲ್ಲಿ ತಾತಾ ಒಬ್ಬರು..

Published On :

ಕೆಂಭಾವಿ: ರಾಜ್ಯದಲ್ಲಿ ಅನೇಕ ಸಂತರು, ಶರಣರು, ಮೇಧಾವಿಗಳು, ಸತ್ಪುರುಷರು ಆಗಿ ಹೋಗಿದ್ದಾರೆ. ಅಂಥ ವರಲ್ಲಿ ವೇದವ್ಯಾಸಾಚಾರ್ಯ ತಾತಾ ಒಬ್ಬರು. ನೋಡಲು ಅಜಾನುಬಾಹು, ಮೃದು ಮನಸ್ಸಿನ ಸ್ವಭಾವ, ಬಂದ ಭಕ್ತರಿಗೆ ಮಾತಿನ ಔಷಧದಿಂದಲೇ ಸಾಂತ್ವನ ಇವಿಷ್ಟು ಅವರಲ್ಲಿರುವ ಗುಣಗಳು.
 ಮಹಾರಾಷ್ಟ್ರ ಪ್ರಾಂತದ ಹಳ್ಳಿಯಲ್ಲಿ ಜನಿಸಿದ ಇವರು ಹುಟ್ಟಿ ಬೆಳೆದದ್ದು  ಆಂಧ್ರದಲ್ಲಿ. ಕೃಷ್ಣಾ ತೀರದ ರಮಣೀಯ ಪ್ರದೇಶ ಆಂಧ್ರ ಪ್ರದೇಶದ ಪೆದ್ದ ಚಿಂತರವೇಲಿ ಎಂಬಲ್ಲಿ ಪುರಾಣ ಪ್ರಸಿದ್ಧ ಆಂಜನೇಯನ ದೇವಸ್ಥಾನವಿದ್ದು, ಅಲ್ಲಿ ಇವರು ಅನೇಕ ವರ್ಷ ನಿರಂತರ ಸೇವೆ ಮಾಡಿ ದೇವರ ಆಶೀರ್ವಾದದಿಂದ ಅನೇಕ ಪವಾಡ ಮಾಡಿದರು.
  ಕೌಟುಂಬಿಕ ಕಲಹ, ಬಂಜೆತನ, ಮಾನಸಿಕ ಅಸ್ವಸ್ಥತೆ, ಹೀಗೆ ಅನೇಕ ರೋಗಗಳಿಗೆ ಇವರು ಸಂಜೀವಿನಿಯಂತೆ ಇದ್ದರು. ಬಡವರನ್ನು ಕಂಡರೆ ವಿಶೇಷ ಕಾಳಜಿ ತೋರಿಸುವ ಇವರು ಅವರ ಪ್ರತಿಯೊಂದು ಸಮಸ್ಯೆಗಳನ್ನು ಹೋಗಲಾಡಿಸಿ 'ದುಡಿಯಿರಿ ಪಡೆಯಿರಿ' ಎಂಬ ಧ್ಯೇಯ ವಾಕ್ಯದಿಂದ ಇವರು ತಾತಾ ಎಂದು ಪ್ರಸಿದ್ಧಿ ಪಡೆದರು.
 ಕಾಕತಾಳಿಯ ಎಂಬಂತೆ ಕೆಂಭಾವಿ ಪಟ್ಟಣಕ್ಕೆ ಬಂದರು. ಪಟ್ಟಣವೂ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ಭಕ್ತರ ಅನೇಕ ಕಷ್ಟ ಕಾರ್ಪಣ್ಯಗಳನ್ನು ಹೋಗಲಾಡಿಸಿ ಬಡವರ ತಾತಾ ಎಂದೆ ಪ್ರಸಿದ್ಧಿಯಾಗಿದ್ದರು. ಅನೇಕ ವರ್ಷ ಕೆಂಭಾವಿಯ ಭಕ್ತರ ಮನೆಯಲ್ಲಿ ಕಳೆದು ವೈಶಾಖ ಶುದ್ಧ ಏಕಾದಶಿ(1997)ಯಂದು ಪರಮಾತ್ಮನ ಪಾದದಲ್ಲಿ ಲೀನವಾದರು. ಅಂದಿನಿಂದ ಇಂದಿನವರೆಗೆ ಪಟ್ಟಣದಲ್ಲಿ ಅವರ ಆರಾಧನೆಯನ್ನು ಆಚರಿಸಿಕೊಂಡು ಬರುತ್ತಿದ್ದು, ಮೇ 22ರಂದು ಇವರ ಆರಾಧನೆಯು ಉತ್ತರಾದಿ ಮಠದಲ್ಲಿ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.