ನಾಳೆಯಿಂದ ವಾರ್ಷಿಕ ಶಿಬಿರ
ಗುಲ್ಬರ್ಗ: ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಕಮಲಾಪುರ (ಡಯಟ್) ಆಶ್ರಯದಲ್ಲಿ ತಾಲೂಕಿನ ಕಿಣ್ಣಿ ರೋಡ್ ಗ್ರಾಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಮೇ 24 ರಿಂದ 30ರವರೆಗೆ ನಡೆಯಲಿದೆ ಎಂದು ಡಯಟ್ ಪ್ರಾಚಾರ್ಯ ಮಹಿರುನ್ನಿಸಾ ಬೇಗಂ ತಿಳಿಸಿದ್ದಾರೆ. ಜಿಪಂ ಸದಸ್ಯ ಬಸವರಾಜ ಮಾಲಿಪಾಟೀಲ್ ಶಿಬಿರ ಉದ್ಘಾಟಿಸಲಿದ್ದು, ತಾಪಂ ಸದಸ್ಯೆ ಮಲ್ಲಮ್ಮ ಬಾಬುರಾವ ಪಾಟೀಲ್, ಗ್ರಾಪಂ ಅಧ್ಯಕ್ಷೆ ಮಲ್ಲಮ್ಮ ಕೊರವಿ, ಉಪಾಧ್ಯಕ್ಷ ಬಲಭೀಮ ಕದಂ, ಗ್ರಾಪಂ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ಮೇಲನಕೇರಿ, ಗ್ರಾಪಂ ಸದಸ್ಯರಾದ ಭಾರತಿಬಾಯಿ ಪಂಚಾಳ, ದತ್ತಾತ್ರೇಯ ಹೊಸಮನಿ, ಲಕ್ಷ್ಮೀಬಾಯಿ ಮೋಘಾ, ಎಸ್ಡಿಎಂಸಿ ಅಧ್ಯಕ್ಷ ವೆಂಕಟೇಶ ಪಾಟೀಲ್, ಉಪಾಧ್ಯಕ್ಷೆ ಲಕ್ಷ್ಮೀಬಾಯಿ ಇಂಗನಕಲ್, ಎನ್ಎಸ್ಎಸ್ ಅಧಿಕಾರಿ ಹಾಜಿಮಲಿಂಗ ಕಕ್ಕಳಮೇಲಿ, ಶಿಬಿರದ ಮಾರ್ಗದರ್ಶಿ ಪಿ. ಗೋಪಾಲಕೃಷ್ಣ, ಚಂದ್ರಕಾಂತ ದೋಶೆಟ್ಟಿ, ದಾಸಿಮಯ್ಯ ಗಣಮುಖಿ ಪಾಲ್ಗೊಳ್ಳಲಿದ್ದಾರೆ. ಡಯಟ್ ಪ್ರಾಚಾರ್ಯ ಮಹಿರುನ್ನಿಸಾ ಬೇಗಂ ಅಧ್ಯಕ್ಷತೆ ವಹಿಸಲಿದ್ದಾರೆ. ಯೋಗಾಭ್ಯಾಸ, ಉಪನ್ಯಾಸ, ಕಾನೂನಿನ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳು ನಡೆಯಲಿವೆ.
ವಿದ್ಯಾಮಾನ್ಯ ತೀರ್ಥರ ಆರಾಧನೆ
ಗುಲ್ಬರ್ಗ: ನಗರದ ವಿದ್ಯಾನಗರದಲ್ಲಿರುವ ಶ್ರೀಕೃಷ್ಣ ಮಂದಿರದ ವಿದ್ಯಾರ್ಥಿ ನಿಲಯದಲ್ಲಿ ಉಡುಪಿಯ ವಿದ್ಯಾಮಾನ್ಯ ತೀರ್ಥರ ಆರಾಧನೆ ನಡೆಯಿತು. ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಂದ ಅಷ್ಟೋತ್ತರ, ಪಾರಾಯಣ, ಸಾಮೂಹಿಕ ಭಜನೆ ನಡೆಯಿತು. ವಿದ್ಯಾಮಾನ್ಯ ತೀರ್ಥರ ಬಗ್ಗೆ ನವಲಿ ಕೃಷ್ಣಾಚಾರ್ಯ ಉಪನ್ಯಾಸ ನೀಡಿದರು. ನಿಲಯದ ಗೋವಿಂದರಾವ್ ಸಾತಖೇಡ, ಶಾಮರಾವ ಸಿಂದಗೇರಿ ಇದ್ದರು.
25ರಂದು ಬುದ್ಧ ಪೂರ್ಣಿಮಾ
ಗುಲ್ಬರ್ಗ: ನಗರದ ಬುದ್ಧ ವಿಹಾರದಲ್ಲಿ ಇದೇ 25 ರಂದು ಬೆಳಗ್ಗೆ 10 ಗಂಟೆಗೆ ಸಿದ್ದಾರ್ಥ ವಿಹಾರ ಟ್ರಸ್ಟ್ ವತಿಯಿಂದ ಬುದ್ಧ ಪೂರ್ಣಿಮಾ ಕಾರ್ಯಕ್ರಮವನ್ನು ಬುದ್ಧ ವಿಹಾರದ ಪೂಜ್ಯ ಭಂತೆ ಅವರ ಸಾನ್ನಿಧ್ಯದಲ್ಲಿ ಹಮ್ಮಿಕೊಳ್ಳಲಾಗಿದೆ. ತುಮಕೂರಿನ ಸಾಹಿತಿ ಡಾ. ನಟರಾಜ್ ಬೂದಾಳು ಅವರು ಮುಖ್ಯ ಭಾಷಣಕಾರರಾಗಿ ಆಗಮಿಸಲಿದ್ದಾರೆ. ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಬೌದ್ಧ ಉಪಾಸಕರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಟ್ರಸ್ಟ್ ಅಧ್ಯಕ್ಷರು, ವಿಶ್ವಸ್ಥ ಮಂಡಳಿಯವರು ಪ್ರಕಟಣೆ ಮೂಲಕ ಕೋರಿದ್ದಾರೆ.
ಉತ್ತಮ ಫಲಿತಾಂಶ
ಗುಲ್ಬರ್ಗ: ನಗರದ ಕೋಟನೂರ (ಡಿ)ದಲ್ಲಿರುವ ಬಾಲಭಾರತಿ-ವಿದ್ಯಾಕೇಂದ್ರ ನಿಲಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಹಿಂದಿ ವಿದ್ವಾನ್ ಪರೀಕ್ಷೆಗೆ 430 ವಿದ್ಯಾರ್ಥಿಗಳು ಹಾಜರಾಗಿದ್ದರು. 120 ವಿದ್ಯಾರ್ಥಿಗಳು ಪ್ರಥಮ, ಇನ್ನುಳಿದ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

