ಗುಲ್ಬರ್ಗಾ

ಸತತ ಉರಿಯುತ್ತಿರುವ ದೀಪ

Published On :

ಶಹಾಪುರ: ಜಲಕ್ಷಾಮ, ವಿದ್ಯುತ್ ಕ್ಷಾಮದಿಂದ ರಾಜ್ಯದೆಲ್ಲಡೆ ಪರಿತಪಿಸುವಂಥ ಸ್ಥಿತಿಯಿದೆ. ಆದರೆ ಪಟ್ಟಣದಲ್ಲಿ ಮಾತ್ರ ಇಂಥ ಸ್ಥಿತಿಗೆ ತದ್ವಿರುದ್ಧವಾಗಿದೆ ಎಂಬುದಕ್ಕೆ ಕಳೆದ ನಾಲ್ಕು ದಿನದಿಂದ ಕೆಲವು ಬಡಾವಣೆಗಳಲ್ಲಿ ಬೀದಿ ದೀಪಗಳು ಹಗಲು ರಾತ್ರಿಯೆನ್ನದೇ ಉರಿಯುತ್ತಿರುವುದೇ ಸಾಕ್ಷಿಯಾಗಿದೆ.
 ಇಲ್ಲಿನ ಜೆಸ್ಕಾಂ ಇಲಾಖೆಯಾಗಲಿ, ಸಂಬಂಧಿಸಿದ ಪುರಸಭೆಯಾಗಲಿ ಕಣ್ಣೆತ್ತಿ ನೋಡದಿರುವುದಕ್ಕೆ ಸಂಬಂಧಿಸಿದವರ ನಿರ್ಲಕ್ಷ್ಯವನ್ನು ಎತ್ತಿ ತೋರುತ್ತದೆ.
ಈ ಕುರಿತು ಸಂಬಂಧಿಸಿದವರಿಗೆ ಬಡಾವಣೆಯವರು ತಿಳಿಸಿದರೂ, ಅದರ ಬಗ್ಗೆ ಗಂಭೀರವಾಗಿ ತೆಗೆದುಕೊಳ್ಳದೆ ಇರುವುದು ವಿದ್ಯುತ್ ಅಪವ್ಯಯಕ್ಕೆ ದಾರಿಯಾಗಿದೆ. ಇದರಿಂದ ಬೆಲೆ ಬಾಳುವ ಫೋಕಸ್ ಬಲ್ಬಗಳು ಹಾಳಾಗಿ ಹೋಗುತ್ತಿವೆ. ಸಾರ್ವಜನಿಕ ಆಸ್ತಿಗೆ ಸರ್ಕಾರ ವಾರಸುದಾರರಾಗಬೇಕಿತ್ತು. ಆದರೆ ಅದ್ಯಾವುದನ್ನೂ ಗಮನಕ್ಕೆ ತೆಗೆದುಕೊಳ್ಳದಿರುವುದರಿಂದ ಆಡಳಿತದ ನಿರ್ಲಕ್ಷ್ಯ ಎದ್ದುಕಾಣುತ್ತಿದೆ. ಇನ್ನು ಕುಡಿಯುವ ನೀರಿನ ಕೊರತೆಯೂ ಎದ್ದು ಕಾಣುತ್ತಿದೆ.
 ಜೂನ್ ತಿಂಗಳು ನೀರು ಪೂರೈಸಬೇಕಾದ ಅವಶ್ಯಕತೆಯಿದ್ದು ಈಗಿನಿಂದಲೇ ನೀರು ಪೋಲಾಗದಂತೆ ಅತ್ಯಂತ ಎಚ್ಚರಿಕೆ ವಹಿಸಿ ನೀರು ಸರಬರಾಜಾಗುವ ಬಾವಿಗಳತ್ತ ಗಮನ ಹರಿಸಿ ಪಟ್ಟಣದ ಜನತೆಗೆ ಕುಡಿಯುವ ನೀರು ಪೂರೈಸಬೇಕಾದ ಕರ್ತವ್ಯ ಪುರಸಭೆಗಿದೆ. ಈ ಹಿನ್ನೆಲೆಯಲ್ಲಿ ಯಾವುದೇ ನಿರ್ಲಕ್ಷ್ಯ ಭಾವನೆ ಯನ್ನು ಸಂಬಂಧಪಟ್ಟವರು ತಾಳಬಾರದೆಂಬುದು ಸಾರ್ವಜನಿಕರ ಆಗ್ರಹವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.