ಮನೆಗಳಿಗೆ ಬೆಂಕಿ: ಅಪಾರ ಹಾನಿ
ಗುಲ್ಬರ್ಗ: ಮನೆಗಳಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು, ಸುಮಾರು 50 ಸಾವಿರಕ್ಕೂ ಅಧಿಕ ಹಾನಿಯಾಗಿರುವ ಘಟನೆ ಆಳಂದ ತಾಲೂಕಿನ ಹಡಗಿಲ ಗ್ರಾಮದಲ್ಲಿ ನಡೆದಿದೆ.ಹಡಗಿಲ ಗ್ರಾಮದ ಮಲ್ಲಪ್ಪ ತಂದೆ ಶರಣಪ್ಪ ವಗ್ಗಾವಿ ಹಾಗೂ ಬಾಬುರಾವ ತಂದೆ ಭೀಮಶಾ ಸರಸಂಬಿ ಎಂಬ ಪಕ್ಕದ ಮನೆಯವರ ಎರಡೂ ಮನೆಗಳಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಈ ಅನಾಹುತ ಸಂಭವಿಸಿದೆ. ಮಲ್ಲಪ್ಪ ಅವರ ಮನೆಯಲ್ಲಿ ಕಟ್ಟಿದ್ದ ಎಮ್ಮೆ, ಕರು ಮತ್ತು ಮನೆಯಲ್ಲಿನ ವಸ್ತಗಳೆಲ್ಲ ಸುಟ್ಟು ಭಸ್ಮವಾಗಿದ್ದು, ಬಾಬುರಾವ ಮನೆಯಲ್ಲಿನ ಆರು ಚೀಲ ಮೆಕ್ಕೆ ಜೋಳ, ಕೃಷಿ ಉಪಕರಣ, ಹಣ ಸೇರಿ ಮನೆ ಮೇಲಿನ ತಗಡುಗಳೂ ಸುಟ್ಟು ಮುದುಡಿಕೊಂಡಿದ್ದು, ಎರಡೂ ಮನೆಗಳಿಂದ ಸುಮಾರು ತಲಾ 20 ಸಾವಿರಕ್ಕೂ ಅಧಿಕ ಹಾನಿಯಾಗಿವೆ. ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕಸ್ಮಿಕ ಬೆಂಕಿ: 15 ಲಕ್ಷ ಹಾನಿ
ಚಿಂಚೋಳಿ: ತಾಲೂಕಿನ ಗಡಿಕೇಶ್ವರ ಗ್ರಾಮದಲ್ಲಿ ಮನೆಯೊಂದಕ್ಕೆ ಆಕಸ್ಮಿಕ ಬೆಂಕಿ ತಗಲಿ ಮನೆ ಸಂಪೂರ್ಣ ಸುಟ್ಟು, ಮನೆಯಲ್ಲಿಟ್ಟಿದ್ದ ನಗದು 3 ಲಕ್ಷ, ಬಂಗಾರ ಮತ್ತು ಬೆಳ್ಳಿ, ದವಸ ಧಾನ್ಯ ಸೇರಿದಂತೆ ಒಟ್ಟು 15 ಲಕ್ಷ ಹಾನಿಯಾಗಿದೆ. ಗಡಿಕೇಶ್ವರ ಗ್ರಾಮದ ಸಿದ್ದಪ್ಪ ತಂದೆ ಶರಣಪ್ಪ ಬೆಮಳಗಿ ಮನೆಯವರೆಲ್ಲರೂ ಹೊಲದ ಕೆಲಸಕ್ಕಾಗಿ ಹೋದ ಸಂದರ್ಭದಲ್ಲಿ ಭಾನುವಾರ ಬೆಳಗ್ಗೆ 10ಕ್ಕೆ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡು ನೋಡ ನೋಡುತ್ತಲೇ ಮನೆಯೂ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಮನೆಯಲ್ಲಿಟ್ಟಿದ್ದ 10 ಕ್ವಿಂಟಲ್ ತೊಗರಿ, 4 ಕ್ವಿಂಟಲ್ ಕಡಲೇ, 10 ಕ್ವಿಂಟಲ್ ಜೋಳ, 10 ಕ್ವಿಂಟಲ್ ಕುಸುಬೆ ಮತ್ತು ತೊಗರಿ ಮತ್ತು ಉದ್ದು ಹೆಸರು ಮಾರಾಟ ಮಾಡಿದ ಹಣ ಮತ್ತು ಮನೆ ಖರೀದಿಗೆ ಕೂಡಿಟ್ಟಿದ್ದ ಹಣ ನಗದು 3 ಲಕ್ಷ, 3 ತೊಲೆ ಬಂಗಾರ, 35 ತೊಲೆ ಬೆಳ್ಳಿ ಬೆಂಕಿಯಲ್ಲಿ ಬೆಂದು ಹೋಗಿವೆ. ಒಟ್ಟು 15 ಲಕ್ಷ ಹಾನಿ ಎಂದು ರೇವಣಸಿದ್ದಪ್ಪ ಅಣಕಲ್ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಸುಲೇಪೇಟ್ ಸಿಪಿಐ ಎಂ.ವರದರಾಜು, ಪಿಎಸ್ಐ ಸೋಮಶೇಖರರೆಡ್ಡಿ, ಕಂದಾಯ ನಿರೀಕ್ಷಕರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹಾನಿಗೊಳಗಾದ ಸಂತ್ರಸ್ತರ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದಾರೆ.
ಸಾಲ ಬಾಧೆ: ರೈತ ಆತ್ಮಹತ್ಯೆ
ಚಿಂಚೋಳಿ: ಸಾಲದ ಬಾಧೆ ತಾಳದೆ ಮೈಮೇಲೆ ಸೀಮೆಎಣ್ಣೆ ಸುರಿದು ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಚಿಂತಕುಂಟಾ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಶರಣಯ್ಯ ತಂದೆ ಷಣ್ಮಿಖಯ್ಯ(55) ಅಸುನೀಗಿದ ರೈತ. ಮೃತನು ಸಾಲದ ಬಾಧೆಯಿಂದಾಗಿ ಕುಡಿದ ಅಮಲಿನಲ್ಲಿಯೇ ಶನಿವಾರ ಮಧ್ಯಾಹ್ನ ತನ್ನ ಮನೆಯಲ್ಲಿ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದ. ಹೆಚ್ಚಿನ ಚಿಕಿತ್ಸೆಗಾಗಿ ಗುಲ್ಬರ್ಗ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಆತ ಶನಿವಾರ ರಾತ್ರಿ ಮೃತಪಟ್ಟಿದ್ದಾನೆ ಎಂದು ಸಿಪಿಐ ಎಂ.ವರದರಾಜು ತಿಳಿಸಿದ್ದಾರೆ. ಮೃತನ ಮಗ ಮಹಾಂತಯ್ಯ ಶರಣಯ್ಯ ಚಿಂತಕುಂಟಾ ನೀಡಿದ ದೂರಿನ ಮೇರೆಗೆ ರಟಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

