'ಲೋಕಾ' ಬಲೆಗೆ ಕಂದಾಯ ನಿರೀಕ್ಷಕ
ಗುಲ್ಬರ್ಗ: ನಗರದ ಐವಾನ್- ಇ- ಶಾಹಿ ರಸ್ತೆಯಲ್ಲಿರುವ ಮಹಾನಗರ ಪಾಲಿಕೆಯ ವಲಯ ಕಚೇರಿಯಲ್ಲಿ ಮಂಗಳವಾರ ದಾಳಿ ಮಾಡಿದ ಲೋಕಾಯುಕ್ತ ಪೊಲೀಸರು ಇಲ್ಲಿನ ಕಂದಾಯ ನಿರೀಕ್ಷಕ (ಆರ್‌ಐ) ವಿದ್ಯಾಸಾಗರ ಅವರನ್ನು ಲಂಚ ಪಡೆಯುತ್ತಿದ್ದಾಗ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮ್ಯುಟೇಷನ್ ಮಾಡಿಕೊಡಲೆಂದು ವಸಂತಕುಮಾರ ಅವರಿಂದ ರು. 500 ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಎಸ್ಪಿ ಎಫ್.ಎಸ್. ಕಂಬಾರ, ಡಿಎಸ್ಪಿ ರವಿ ಪಾಟೀಲ್, ಪಿಐ ಜೇಮ್ಸ್ ಮೆನೆಜಸ್, ತಮ್ಮರಾಯ ಪಾಟೀಲ್ ಹಾಗೂ ಸಿಬ್ಬಂದಿ ದಾಳಿ ಮಾಡಿ ಲಂಚ ಪಡೆಯುತ್ತಿದ್ದ ಆರ್‌ಐ ವಿದ್ಯಾಸಾಗರ ಅವರನ್ನು ವಶಕ್ಕೆ ತೆಗೆದುಕೊಂಡು ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇಂಗಿನಶೆಟ್ಟಿ ಶಾಲೆ ಪ್ರಾರಂಭೋತ್ಸವ ನಾಳೆ
ಗುಲ್ಬರ್ಗ/ಶಹಾಬಾದ್: ಚವ್ಹಾಣ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ನೂತನ ಆಡಳಿತದೊಂದಿಗೆ ಆರಂಭವಾಗಲಿರುವ ಇಲ್ಲಿನ ನಾಗಮ್ಮ ಚೆನ್ನಪ್ಪ ಇಂಗಿನಶೆಟ್ಟಿ ಕನ್ನಡ ಪ್ರಾಥಮಿಕ ಶಾಲೆಯ ಪ್ರಾರಂಭೋತ್ಸವ ಮೇ 30ರಂದು ಬೆಳಗ್ಗೆ 10ಕ್ಕೆ ನಡೆಯಲಿದೆ. ಶರಣನಗರ ಬಡಾವಣೆಯಲ್ಲಿ ನಡೆವ ಸಮಾರಂಭದಲ್ಲಿ ಮುಗುಳನಾಗಾವಿ ಸಂಸ್ಥಾನ ಕಟ್ಟಿಮನಿ ಹಿರೇಮಠದ ಅಭಿನವ ಸಿದ್ಧಲಿಂಗ ಶಿವಾಚಾರ್ಯರು ಸಾನ್ನಿಧ್ಯ ವಹಿಸಲಿದ್ದಾರೆ. ಪರಿಷತ್ತಿನ ಶಹಾಬಾದ್ ಘಟಕದ ಅಧ್ಯಕ್ಷ ಸಂತೋಷಕುಮಾರ ಇಂಗಿನಶೆಟ್ಟಿ, ನಗರಸಭೆ ಸದಸ್ಯ ಅಹ್ಮದ್ ಪಟೇಲ್, ಬಿಆರ್‌ಸಿ ಹೊನ್ನಪ್ಪ ಅತಿಥಿಗಳಾಗಿದ್ದು, ಅರವಿಂದ ಚವ್ಹಾಣ ಅಧ್ಯಕ್ಷತೆ ವಹಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

