ಶಿವಯೋಗಿಗಳ ರಥೋತ್ಸವ
ಕನ್ನಡಪ್ರಭ ವಾರ್ತೆ, ಜೇವರ್ಗಿ, ಮೇ 30
17ನೇ ಶತಮಾನದ ಅದ್ವಿತೀಯ ವಚನಕಾರ ಚರಚಕ್ರವರ್ತಿ ಷಣ್ಮುಖ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ರಾತ್ರಿ 9ಕ್ಕೆ ಅದ್ಧೂರಿಯಾಗಿ ಸಹಸ್ರಾರು ಭಕ್ತರ ಜಯಘೋಷಗಳ ಮಧ್ಯೆ ಭವ್ಯ ರಥೋತ್ಸವ ಜರುಗಿತು.
ರಟಕಲ್ನ ನೀಲಕಂಠ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು. ರಸ್ತೆಯ ಎರಡು ಬದಿಯ ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡ ಜನ ಉತ್ತತಿ, ಕಲ್ಲು ಸಕ್ಕರೆ, ಬಾಳೆ ಹಣ್ಣು ಸೇರಿದಂತೆ ಮುಂತಾದ ಹರಕೆಯ ವಸ್ತುಗಳನ್ನು ರಥದ ಮೇಲೆ ಎಸೆದು ತಮ್ಮ ಹರಕೆ ತೀರಿಸಿಕೊಂಡರು.
ಬುಧವಾರ ಬೆಳಗ್ಗೆ ಷಣ್ಮುಖ ಶಿವಯೋಗಿಗಳ ಕರ್ತೃ ಗದ್ದುಗೆಗೆ ಗುರುಲಿಂಗಯ್ಯ ಸ್ವಾಮಿ ಯನಗುಂಟಿಯವರು ರುದ್ರಾಭೀಷೆಕ, ಮಹಾಪೂಜೆ ನೇರವೆರಿಸಿದರು. ಬೆಳಗ್ಗೆ 10ಕ್ಕೆ ಪಲ್ಲಕ್ಕಿ ಉತ್ಸವ ನಡೆಯಿತು. ಪುರವಂತರರ ಸೇವೆ, ಡೊಳ್ಳು, ಭಾಜಾ ಭಜಂತ್ರಿಗಳು ಪಲ್ಲಕ್ಕಿ ಉತ್ಸವದ ಮೆರಗನ್ನು ಇಮ್ಮಡಿಸಿದ್ದವು.
ತಾಂಬಾಳದ ವಿಜಯಕುಮಾರ ಸ್ವಾಮೀಜಿ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಬಸವರಾಜ ಸಾಹು ಗೋಗಿ, ದೇವಿಂದ್ರಪ್ಪ ಸಾಹು ಸೀರಿ, ಸಿದ್ರಾಮಪ್ಪ ಸಾಹು ಗೋಗಿ, ಸೋಮಣ್ಣ ಕಲ್ಲಾ, ಷಣ್ಮುಖಪ್ಪಗೌಡ ಹಿರೇಗೌಡ, ಶಿವಲಿಂಗಪ್ಪಗೌಡ ಮಾಲಿಪಾಟೀಲ್, ಗುರಣ್ಣ ಸಾಹು ಅವಂಟಿ, ಶರಣಪ್ಪ ನರಿಬೋಳ, ಶರಣಬಸವ ಕಲ್ಲಾ, ಕಾಶಿನಾಥ ಇಮ್ಮಣ್ಣಿ, ಸಂಗಣ್ಣಗೌಡ ಗುಳ್ಯಾಳ, ಸಿದ್ರಾಮಪ್ಪಗೌಡ ಹಳಿಮನಿ, ಯಶವಂತರಾಯ ಕೋಳಕೂರ, ಮಲ್ಲಶೆಟ್ಟೆಪ್ಪಗೌಡ ಹಿರೇಗೌಡ, ಬಸಯ್ಯಸ್ವಾಮಿ ಸ್ಥಾವರ ಮಠ, ಪಂಚಯ್ಯ ಮಠಪತಿ, ಸಾಯಬಣ್ಣ ಬಡಿಗೇರ, ದೇವಿಂದ್ರ ಬಡಿಗೇರ ಸೇರಿದಂತೆ ಸಹಸ್ರಾರು ಜನ ಭಕ್ತಾಧಿಗಳು, ಮಹಿಳೆಯರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
--
ವಾರದೊಳಗೆ ಸಮಸ್ಯೆ ಪರಿಹರಿಸಿ: ಮೈನೋದ್ದೀನ್
ಕನ್ನಡಪ್ರಭ ವಾರ್ತೆ, ಚಿತ್ತಾಪುರ, ಮೇ 30
ತಾಲೂಕಿನ ಇಟಗಾ ಬಳಿ ಓರಿಯಂಟಲ್ ಸಿಮೆಂಟ್ ಕಾರ್ಖಾನೆ ನಿರ್ಮಾಣಕ್ಕೆ ಪಡೆಯುತ್ತಿರುವ ರೈತರ ಜಮೀನುಗಳಿಗೆ ಯೋಗ್ಯ ಬೆಲೆ ಹಾಗೂ ಕಾರ್ಮಿಕರಿಗೆ ಉದ್ಯೋಗವಕಾಶ ನೀಡಬೇಕು. ಇಲ್ಲವೇ ರೈತರ ಹೋರಾಟ ಎದುರಿಸಬೇಕೆಂದು ಜೆಡಿ(ಎಸ್) ಕಾರ್ಮಿಕರ ಸಮಿತಿ ಸೇಡಂ ಹಿರಿಯ ಉಪಾಧ್ಯಕ್ಷ ಹೇಳಿದ್ದಾರೆ.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತರ ಜಿಲ್ಲೆಗಳಲ್ಲಿ ಹೆಚ್ಚು ದರ ನೀಡಿ ಜಮೀನು ಖರೀದಿ ಮಾಡಲಾಗುತ್ತಿದೆ. ಇಲ್ಲಿ ಕಡಿಮೆ ದರದಲ್ಲಿ ಜಮೀನು ಖರೀದಿ ಮಾಡಿರುವುದರಿಂದ ರೈತರಿಗೆ ನಷ್ಟ ಅನುಭವಿಸಿ ಅನ್ಯಾಯವಾಗುತ್ತಿದೆ ಎಂದರು.
ಕಾರ್ಖಾನೆಯವರು 2009ರಲ್ಲಿ ಯೋಜನೆಯನ್ನು ಪ್ರಾರಂಭಿಸಿ 2 ವರ್ಷಗಳಲ್ಲಿ ಪೂರ್ಣಗೊಳಿಸಲು ಒಪ್ಪಂದವಾಗಿ 2011ರಲ್ಲಿ ಅವಧಿ ಮುಗಿದ್ದಿದ್ದರೂ ಕೆಲಸ ಪ್ರಾರಂಭಿಸದೆ, ರೈತರ ಜಮೀನು ಕೃಷಿ ಜಮೀನು ಕೃಷಿಯೇತರ ಜಮೀನಿಗಾಗಿ (ಎನ್.ಎ) ಪರಿವರ್ತಿಸದೇ ಹಾಗೂ ಪರವಾನಗಿ ಪಡೆಯದೆ ಓರಿಯಂಟಲ್ ಕಂಪನಿಯವರು ಕಟ್ಟಡ ಹಾಗೂ ಸುತ್ತು ಗೋಡೆ ನಿರ್ಮಿಸುತ್ತಿದ್ದಾರೆ ಎಂದು ಆರೋಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

