ಯುವಜನರಿಂದ ಅರ್ಜಿ ಆಹ್ವಾನ
ಗುಲ್ಬರ್ಗ: ಲಾರ್ಡ್ ಬುದ್ಧ ವೇಲ್ಪೇರ್ ಟ್ರಸ್ಟ್ ಗ್ರಾಮೀಣ ಹಾಗೂ ನಗರ ಪ್ರದೇಶದ ಬಡ ಯುವಕ- ಯುವತಿಯರಿಗೆ ಉಚಿತ ಶಿಕ್ಷಣ ನೀಡುವ ಉದ್ದೇಶ ಹೊಂದಿದ್ದು, ಪ್ರಸಕ್ತ ಸಾಲಿನಲ್ಲಿ ಕಂಪ್ಯೂಟರ್ ತರಬೇತಿ ನೀಡುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ನ.15 ರೊಳಗಾಗಿ ಆಸಕ್ತ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಬೆಳಗ್ಗೆ 10.30- 5.30 ರವರೆಗೆ ನೆಹರು ಗಂಜನಲ್ಲಿರುವ ಬಿ.ಜೆ. ಕಂಪ್ಯೂಟರ್ ತರಬೇತಿ ಕೇಂದ್ರಕ್ಕೆ ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬೇಕು. ಮಾಹಿತಿಗೆ 9845069565, 9663963049ಗೆ ಸಂಪರ್ಕಿಸಲು ಅಧ್ಯಕ್ಷ ದೇವಿಂದ್ರ ಕೋರಿದ್ದಾರೆ.
ವರದಕ್ಷಿಣೆ ಕಿರುಕುಳ: ಗೃಹಿಣಿ ದೂರು
ಗುಲ್ಬರ್ಗ: ಮಹಿಳೆಯೊಬ್ಬರಿಗೆ ಆಕೆಯ ಪತಿ, ಅತ್ತೆ, ಮಾವ ಮತ್ತು ನಾದಿನಿ ಸೇರಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ ಘಟನೆ ತಾಲೂಕಿನ ಆಲಗೂಡ ಗ್ರಾಮದಲ್ಲಿ ನಡೆದಿದೆ. ಪ್ರೇಮ ಎಂಬವರೇ ಕಿರುಕುಳಕೊಳಗಾದವರು. ಒಂದೂವರೆ ವರ್ಷದ ಹಿಂದೆ ಆಲಗೂಡ ಗ್ರಾಮದ ಶರಣಬಸಪ್ಪ ಬಿರಾದಾರ ಎಂಬವರೊಂದಿಗೆ ವರದಕ್ಷಿಣೆ, ಚಿನ್ನ ನೀಡಿ ವಿವಾಹ ನೆರವೇರಿಸಲಾಗಿತ್ತು. ಮದುವೆ ಸಂದರ್ಭದಲ್ಲಿ ಕಡಿಮೆ ವರದಕ್ಷಿಣೆ ನೀಡಲಾಗಿದ್ದು, ಇನ್ನೂ ಹಣ, ಬಂಗಾರ ಮತ್ತು ಆಸ್ತಿಯಲ್ಲಿ ಪಾಲು ಪಡೆಯುವಂತೆ ಕಿರುಕುಳ ನೀಡಲಾಗುತ್ತಿತ್ತು ಎಂದು ಪತಿ ಶರಣಬಸಪ್ಪ ಬಿರಾದಾರ, ಮಾವ ಗುರುಬಸಪ್ಪ, ಅತ್ತೆ ಪ್ರಭುಲಿಂಗಮ್ಮ, ನಾದಿನಿ ಶೋಭಾ ಎಂಬವರ ವಿರುದ್ಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅಪರಿಚಿತ ವೃದ್ಧನ ಶವ ಪತ್ತೆ
ಗುಲ್ಬರ್ಗ: ನಗರದ ಹಳೆಯ ಎಸ್ಪಿ ಕಚೇರಿ ರಸ್ತೆಯ ಕುಳಗೇರಿ ಕ್ರಾಸ್ ಬಳಿ 65-70 ವರ್ಷದ ಅಪರಿಚಿತ ವಯೋವೃದ್ಧನ ಶವ ಪತ್ತೆಯಾಗಿದೆ. ಶವದ ಎಡಗಾಲ ಪಾದ ಪೂರ್ತಿಯಾಗಿ ಕೊಳೆತಿದೆ. ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೈಕಲ್ ಸವಾರನಿಗೆ ಬೆದರಿಸಿ ಲೂಟಿ
ಗುಲ್ಬರ್ಗ: ಇಲ್ಲಿನ ಗೋದುತಾಯಿ ಕಾಲೋನಿಯ 3ನೇ ಕ್ರಾಸ್ನಿಂದ ಸೈಕಲ್ ಮೇಲೆ ಹೋಗುತ್ತಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿದ ಮೂರು ಅವರನ್ನು ಬೆದರಿಸಿ 1650 ಮೌಲ್ಯದ ಮೊಬೈಲ್, 100 ನಗದು ಕಸಿದ ಘಟನೆ ನಡೆದಿದೆ. ಶಹಾಪುರ ತಾಲೂಕಿನ ಭೀಮರಾಯನ ಗುಡಿ ಮೂಲದ ಗೋದುತಾಯಿ ಕಾಲೋನಿಯ ಬಸವರಾಜ ತಂದೆ ಚಂದ್ರಶೇಖರ ಬಾಳಿ ಲೂಟಿಗೊಳಗಾದವರು. ಅಶೋಕ ನಗರ ಠಾಣೆಯಲ್ಲಿ ಪ್ರಕರಣವಿದೆ.
ವಿರೂಪಾಕ್ಷಪ್ಪ
ಗುಲ್ಬರ್ಗ: ನಾಲವಾರ ಗ್ರಾಮದ ವಿರೂಪಾಕ್ಷಪ್ಪ ಲಿಂಗಣ್ಣ ಇಂಗಳಗಿ (42) ಮಂಗಳವಾರ ಹೃದಯಾಘಾತದಿಂದ ನಿಧನರಾದರು. ಅವರು ತಂದೆ, ತಾಯಿ, ಪತ್ನಿ, ಪುತ್ರ, ಇಬ್ಬರು ಪುತ್ರಿಯರಿದ್ದಾರೆ. ಅಂತ್ಯಕ್ರಿಯೆ ಬುಧವಾರ ನೆರವೇರಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

