ಪ್ರತಿ ಜನಾಂಗಕ್ಕೂ ಸಮುದಾಯ ಭವನ
ಸುರಪುರ: ನನ್ನ ಮೇಲೆ ಪ್ರೀತಿ ವಿಶ್ವಾಸವಿಟ್ಟು ಮೂರನೆ ಬಾರಿಗೆ ಶಾಸಕನಾಗಿ ಆಯ್ಕೆ ಮಾಡಿದ ಕ್ಷೇತ್ರದ ಜನತೆಗೆ ನಾನು ಮೋಸ ಮಾಡುವುದಿಲ್ಲ. ಮತ್ತೊಮ್ಮೆ ಅಧಿಕಾರ ನೀಡಿದ ಕ್ಷೇತ್ರದ ಪ್ರತಿ ಜಾತಿ ಜನಾಂಗಕ್ಕೆ ಸಮುದಾಯ ಭವನ, ಶಾದಿ ಮಹಲ್ ನಿರ್ಮಿಸಿಕೊಟ್ಟು ಋಣಮುಕ್ತನಾಗುವ ಸಂಕಲ್ಪ ಹೊಂದಿರುವುದಾಗಿ ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು.
ನಗರೋತ್ಥಾನ ಯೋಜನೆ ಅಡಿಯಲ್ಲಿ ತಿಮ್ಮಾಪುರದ ಶ್ರೀಕೃಷ್ಣ ದೇವಸ್ಥಾನದ ಹತ್ತಿರದಲ್ಲಿ ರು. 25 ಲಕ್ಷ ವೆಚ್ಚದ ಯಾದವ ಸಮುದಾಯ ಭವನಕ್ಕೆ ಶನಿವಾರ ಅಡಿಗಲ್ಲು ನೆರವೇರಿಸಿ ಮಾತನಾಡಿದರು. ಜಿಪಂ, ತಾಪಂ. ಗ್ರಾಪಂ, ಪುರಸಭೆ ಮತ್ತು ವಿಧಾನ ಸಭೆ ಸೇರಿದಂತೆ ಪ್ರತಿ ಚುನಾವಣೆಯಲ್ಲಿ ಯಾದವ ಸಮುದಾಯದವರು ನನನ್ನು ಬೆಂಬಲಿಸುತ್ತಾ ಬಂದಿದ್ದಾರೆ.
ಮಹತ್ವಾಕಾಂಕ್ಷೆ: ಈ ಸಮುದಾಯದ ಋಣ ತೀರಿಸುವ ಮಹತ್ವಾಕಾಂಕ್ಷೆಯಿಂದ ಸಮುದಾಯ ಭವನಕ್ಕೆ ಅನುಧಾನ ಒದಗಿಸಿರುವುದಾಗಿ ಹೇಳಿದರು. ಶೀಘ್ರದಲ್ಲಿಯೇ ಕಾಮಗಾರಿ ಆರಂಬಿಸಿ ಗುಣಮಟ್ಟದ ಕಾಮಗಾರಿಯೊಂದಿಗೆ ಸುಂದರ ಭವನ ನಿರ್ಮಿಸಬೇಕು. ಅನುದಾನ ಸರಿ ಹೋಗದಿದ್ದರೆ ತಮ್ಮ ಶಾಸಕರ ಅನುದಾನದಲ್ಲಿ ಬರಿಸಿಕೊಡುತ್ತೇನೆ. ಯಾವುದೇ ಕಾರಣಕ್ಕೆ ಕಾಮಗಾರಿ ನಿಲ್ಲಿಸಬಾರದು ಎಂದು ಸ್ಥಳದಲ್ಲಿದ್ದ ಭೂಸೇನಾ ಇಲಾಖೆಯ ಸಹಾಯಕ ನಿರ್ದೇಶಕರಿಗೆ ತಾಕೀತು ಮಾಡಿದರು.
ಪುರಸಭೆ ಅಧ್ಯಕ್ಷ ದೇವಿಂದ್ರಪ್ಪ ಕಳ್ಳಿಮನಿ, ಪ್ರಮುಖರಾದ ಶಿವಣ್ಣ ಮಂಗ್ಯಾಳ, ಸೂಲಪ್ಪ ಕಮತಗಿ, ವಿಠ್ಠಲಲ್ಯಾದವ, ವೆಂಕೋಬ ಮಂಗಳೂರು, ಅಪ್ಸರ್ ಹುಸೇನ್ ದಲಾಲ್, ಅಬ್ದುಲ್ ಗಫಾರ ನಗನೂರಿ, ಶಿವು ಎಲಿಗಾರ, ಸೂಗೂರೇಶ ವಾರದ, ಮಹಾದೇವಪ್ಪ ಡೊಳ್ಳಿ, ನಾಸೀರ್ ಚಿದ್ರಿ, ಖಾಲಿದ್ ಅಹ್ಮದ ತಾಳಿಕೋಟಿ ಇತರರಿದ್ದರು. ಪರಮಣ್ಣ ಯಾದವ ಸ್ವಾಗತಿಸಿದರು. ರಾಜೇಂದ್ರ ಡೊಳ್ಳೆ ನಿರೂಪಿಸಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

