11 ಲಕ್ಷ ಮೌಲ್ಯದ ಹಸಿ ಗಾಂಜಾ ವಶ
ಶಹಾಪುರ: ತಾಲೂಕಿನ ಶಿರವಾಳ ಸೀಮಾಂತರದಲ್ಲಿ ಬರುವ ಶಿರವಾಳ ಇಂಗಳಿಗಿ ಮಾರ್ಗದ ಹೊಲವೊಂದರಲ್ಲಿ
ಆಳೆತ್ತರದ ಹಸಿ ಗಾಂಜಾ ಗಿಡಗಳನ್ನು ಬಿ.ಗುಡಿ ಪೊಲೀಸರು ವಶಪಡಿಸಿಕೊಂಡ ಘಟನೆ ನಡೆದಿದೆ.
ಸರ್ವೇ ನಂ. 517-4 ಹನುಮಂತ ಭೀಮರಾಯ ಏವೂರ ಈತನಿಗೆ ಸಂಬಂಧಿಸಿದ 5 ಎಕರೆ 15 ಗುಂಟೆ ಹತ್ತಿ ಮೆಣಸಿನಕಾಯಿ ಗಿಡದ ಸಾಲುಗಳಲ್ಲಿ ಗಾಂಜಾ ಬೆಳೆದಿದ್ದನ್ನು ಖಚಿತ ಮಾಹಿತಿ ಮೇರೆಗೆ ಎಸ್ಪಿ ವಂಶಿಕೃಷ್ಣ, ಡಿವೈಎಸ್ಪಿ ಎಸ್.ಬಿ ಕಟ್ಟಿಮನಿ ಯವರ ಮಾರ್ಗದರ್ಶನದಲ್ಲಿ ಸಿಪಿಐ ಸಂತೋಷ ಬನ್ನಟ್ಟಿ ಪಿಎಸ್ಐ ಸುನೀಲಕುಮಾರ ಭೀ.ಗುಡಿ ಮತ್ತು ಸಿಬ್ಬಂದಿ ನೇತೃತ್ವದಲ್ಲಿ ದಾಳಿ ನಡೆಸಿದರು. ಒಟ್ಟು 5 ಕ್ವಿಂಟಲ್ 30 ಕೆಜಿ ಅಂದಾಜು 11 ಲಕ್ಷ ಮೌಲ್ಯದ ಹಸಿ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಆರೋಪಿ ಹಣಮಂತ ತೆಲೆ ಮರೆಸಿಕೊಂಡಿದ್ದು, ತನಿಖೆ ನಡೆದಿದೆ. ಈ ಸಂದರ್ಭದಲ್ಲಿ ಪತ್ರಾಂಕಿತ ಅಧಿಕಾರಿ ಡಾ. ಮಸೂದ ಅಲಿ, ಎಎಸ್ಐ ಚಂದ್ರನಾಥ, ಶರಣಪ್ಪ, ನರಸಿಂಗಪ್ಪ, ನಾಗಪ್ಪ, ಬಾಬು, ಪ್ರಕಾಶ ಮಕ್ಬುಲ್, ಪೆದ್ದಪ್ಪಗೌಡ, ಸತಿಶ, ಬಸವರಾಜ, ಮತ್ತು ಗೋಗಿಯ ಶ್ರೀಶೈಲ ಸಂಗಣ್ಣಾ ದಾಳಿಯ ಸಂದರ್ಭದಲ್ಲಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

