ಗುಲ್ಬರ್ಗಾ

ಕಬ್ಬು 'ಬೆಂ'ಬೆಲೆಗೆ ಆಗ್ರಹ

Published On :

ಗುಲ್ಬರ್ಗ: ರಾಜ್ಯದ ಕಬ್ಬು ಬೆಳೆಗೆ ಕೂಡಲೇ ವೈಜ್ಞಾನಿಕವಾಗಿ ದರ ನಿಗದಿ ಮಾಡಬೇಕೆಂದು ರೈತ- ಕೃಷಿ ಕಾರ್ಮಿಕ ಸಂಘಟನೆಯ ರಾಜ್ಯ ಸಮಿತಿ ಸರ್ಕಾರಕ್ಕೆ ಆಗ್ರಹಿಸಿದೆ.
ಹಲವಾರು ವರ್ಷಗಳಿಂದ ಕಬ್ಬು ಬೆಳೆಗಾರರು ಕಬ್ಬಿಗೆ ಸೂಕ್ತ ದರ ನಿಗದಿ ಮಾಡಿ ಎಂಬ ಬೇಡಿಕೆಯನ್ನು ಪ್ರತಿ ಕಟಾವಿನ ಸಂದರ್ಭದಲ್ಲೂ ಸರ್ಕಾರದ ಮುಂದೆ ಇಟ್ಟು ಅಂಗಲಾಚುವ ಪರಿಸ್ಥಿತಿ ನಿಜಕ್ಕೂ ಅತ್ಯಂತ ಶೋಚನಿಯ ಎಂದು ರಾಜ್ಯಾಧ್ಯಕ್ಷ ಡಾ. ಸುನೀತಕುಮಾರ್ ಮತ್ತು ಕಾರ್ಯದರ್ಶಿ ದಿವಾಕರ್ ಅಭಿಪ್ರಾಯಪಟ್ಟಿದ್ದಾರೆ.
ಹೊರ ರಾಜ್ಯಗಳಿಗೆ ಸಾಗಿಸುವಂತಹ ಪರಿಸ್ಥಿತಿ: ರೈತರ ಒತ್ತಡ ಬಂದಾಗ ಸರ್ಕಾರವು ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾಧಿಕಾರಿ, ಕಂಪನಿಯ ಮಾಲೀಕರು, ರೈತರ ಸಭೆ ಕರೆದು ಅಲ್ಪ ಸ್ವಲ್ಪ ಬೆಲೆ ಏರಿಸುತ್ತಾರೆ. ಸಾಮಾನ್ಯವಾಗಿ ಕಂಪನಿಯ ಷರತ್ತುಗಳಿಗೆ ಮಣಿಯುವ ಸರ್ಕಾರ ರೈತರಿಗೆ ಯಾವುದೇ ರೀತಿ ನ್ಯಾಯ ಒದಗಿಸುತ್ತಿಲ್ಲ. ಎಷ್ಟೋ ಸಂದರ್ಭದಲ್ಲಿ ಹೊರ ರಾಜ್ಯಗಳಿಗೆ ಸಾಗಿಸುವಂತಹ ಪರಿಸ್ಥಿತಿ ಬಂದಿದೆ ಎಂದು ಆರೋಪಿಸಿದ್ದಾರೆ.
ದರ ನಿಗದಿ ಮಾಡುವಾಗ ಕಾಕಂಬಿ ಇನ್ನಿತರ ಉತ್ಪನ್ನಗಳಿಂದ ಬರುವ ಲಾಭವನ್ನು ಮಾನದಂಡವಾಗಿ ಪರಿಗಣಿಸದೇ ಕೇವಲ ಸಕ್ಕರೆ ಉತ್ಪನ್ನವನ್ನು ಮಾತ್ರ ತೋರಿಸುವುದು ರೈತರಿಗೆ, ಮಾಲೀಕರುಗಳು ಮಾಡುವ ನಯವಂಚನೆಯಾಗಿದೆ. ಆದರೆ, ರೈತರು ಕಬ್ಬು ಬೆಳೆಯಲು ಮಾಡಿರುವ ಖರ್ಚನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.
ಟನ್ಗೆ 2225 ಖರ್ಚು: ಒಂದು ಅಂದಾಜಿನ ಪ್ರಕಾರ ಒಂದು ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆಯಲು ರೈತರು ಸುಮಾರು 89050  ಖರ್ಚನ್ನು ಮಾಡುತ್ತಾರೆ ಹಾಗೂ ಒಂದು ಎಕರೆ ಗದ್ದೆಯಲ್ಲಿ ಸರಾಸರಿ 40 ಟನ್ ಬೆಳೆಯುತ್ತಾರೆ. ಇದರಿಂದ ಒಂದು ಟನ್ಗೆ 2225 ಖರ್ಚು ಬರುತ್ತದೆ. ಅವರ ಸಾಲದ ಮೇಲಿನ ಬಡ್ಡಿ, ಸಾಗಾಣಿಕೆ, ಕಂದಾಯ ಮತ್ತಿತರ ವೆಚ್ಚಗಳು ಸೇರಿಲ್ಲ. ಇದನ್ನೆಲ್ಲ ಸೇರಿಸಿದರೆ ಒಬ್ಬ ರೈತನಿಗೆ ಒಂದು ಟನ್ ಕಬ್ಬು ಬೆಳೆಯಲು 3 ಸಾವಿರಗಿಂತ ಹೆಚ್ಚು ಖರ್ಚು ಬರುತ್ತದೆ. ಸರ್ಕಾರ ಒಂದು ಟನ್ ಕಬ್ಬಿಗೆ 2500 ನಿಗದಿ ಮಾಡಿರುವುದು ಯಾತಕ್ಕೂ ಸಾಲದು.   
  ರೈತರು ಸರ್ಕಾರ ನಿಗದಿ ಮಾಡಿರುವುದನ್ನು ತಿರಸ್ಕರಿಸಿದ್ದಾರೆ. ಚಳುವಳಿಯನ್ನು ಮುಂದುವರಿಸುವುದಾಗಿ ಹೇಳಿದ್ದಾರೆ. ಸರ್ಕಾರ ಈ ಅಂಶವನ್ನು ಗಂಭೀರವಾಗಿ ಪರಿಗಣಿಸಿ ಮಾಲೀಕರ ಪರ ನಿಲುವನ್ನು ಕೈಬಿಟ್ಟು ಕಬ್ಬಿಗೆ ಸೂಕ್ತ ಬೆಲೆಯನ್ನು ನಿಗದಿಪಡಿಸಬೇಕೆಂದು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.