ಯೋಗ ಶಿಬಿರ ಇಂದಿನಿಂದ ಆರಂಭ
ಗುಲ್ಬರ್ಗ: ಸ್ವಾಮಿ ರಾಮದೇವಜಿ ಮಹಾರಾಜ ಇವರ ತತ್ವಕ್ಕನುಗುನವಾಗಿ ಪತಂಜಲಿ ಯೋಗ ಸಮಿತಿ ಮತ್ತು ವಿವೇಕಾನಂದ ಪ್ರತಿಷ್ಠಾನ ಅಕ್ಕಲಕೋಟ ಸಂಯುಕ್ತಾಶ್ರಯದಲ್ಲಿ ಯೋಗ ಮತ್ತು ಪ್ರಾಣಾಯಮ ಶಿಬಿರವು ನ.13 ರಿಂದ 18 ಬೆಳಗ್ಗೆ 5.15 ರಿಂದ 7.30ರವರೆಗೆ ಅಕ್ಕಲಕೋಟದ ಫತ್ತೆಸಿಂಹ ಕೀಡಾಂಗಣದಲ್ಲಿ ಜರುಗಲಿದೆ.ಪತಂಜಲಿಯ ಯೋಗ ಪೀಠದ ಪ್ರಶಿಕ್ಷಿತ ಯೋಗ ಶಿಕ್ಷಕ ಮತ್ತು ದಕ್ಷಿಣ ಭಾರತದ ಪ್ರಭಾರಿಯಾದ ಸುಧಾತಾಯಿ ಅಳ್ಳಿಮೋರೆ ಈ ಶಿಬಿರದಲ್ಲಿ ಮಾರ್ಗದರ್ಶನ ನೀಡಲಿದ್ದಾರೆ.ನ.16 ಮತ್ತು 17ರಂದು ಪತಂಜಲಿಯ ಯೋಗಪೀಠ ಪ್ರಶಿಕ್ಷಿತ ವೈದ್ಯರ ಕಡೆಯಿಂದ ಸರ್ವ ರೋಗ ಚಿಕಿತ್ಸೆ ಜರುಗಲಿದೆ. ಬೆಳಗ್ಗೆ 8.30ರಿಂದ 10.30ರವರೆಗೆ ಅಕ್ಕಲಕೋಟದ ಜನತೆ ಇದರ ಲಾಭ ಪಡೆಯಬೇಕೆಂದು ಕೋರಲಾಗಿದೆ.
ಉದ್ಯೋಗ ಮೇಳ
ಗುಲ್ಬರ್ಗ: ಮೈರಾಡ ಸಂಸ್ಥೆ ಗುಲ್ಬರ್ಗ ಇಯು ಕಾರ್ಯಕ್ರಮದ ಅಡಿಯಲ್ಲಿ ಜಿಲ್ಲೆಯ ನಿರುದ್ಯೋಗ ಯುವಕ-ಯುವತಿಯರಿಗೆ ಉದ್ಯೋಗ ದೊರಕಿಸುವ ಉದ್ದೇಶದಿಂದ ಉದ್ಯೋಗ ವಿನಿಮಯ ಕಚೇರಿ ಹಾಗೂ ಮೈರಾಡ್ ಸಂಸ್ಥೆ ಜಂಟಿ ಸಹಯೋಗದಲ್ಲಿ ನ.14 ರಂದು ನಗರದ ಕರ್ನಾಟಕ ಹಿಂದಿ ಪ್ರಚಾರ ಸಭಾ ಆವರಣದಲ್ಲಿ ಉದ್ಯೋಗ ಮೇಳ ಬೆಳಗ್ಗೆ 11 ರಿಂದ ಸಂಜೆ 4.30 ರವರೆಗೆ ಉದ್ಯೋಗ ಮೇಳ ಆಯೋಜಿಸಲಾಗಿದೆ.ಇದರಲ್ಲಿ ಸುಮಾರು 25 ವಿವಿಧ ಕಂಪನಿಗಳು ಭಾಗವಹಿಸಲಿವೆ. ಎಸ್ಎಸ್ಎಲ್ಸಿ, ಪಿಯುಸಿ ಹಾಗೂ ಪದವೀಧರರಿಗೆ ಸಂದರ್ಶನದ ಮೂಲಕ ಅರ್ಹ ಅಭ್ಯರ್ಥಿಗಳಿಗೆ ಆಯ್ಕೆ ಮಾಡಿಕೊಳ್ಳಲಾಗುವುದು.ಎಸ್ಎಸ್ಎಲ್ಸಿ, ಪಿಯುಸಿ ಫಾಸ್ಪೇಲ್ ಹಾಗೂ ಡಿಪ್ಲೊಮಾ, ಕಂಪ್ಯೂಟರ್ ಕೌಶಲ್ಯ ಹೊಂದಿದ ಅಭ್ಯರ್ಥಿಗಳಿಗೆ ಉದ್ಯೋಗ ದೊರಕಿಸಿ ಸಾಮಾಜಿಕ ಹಾಗೂ ಆರ್ಥಿಕವಾಗಿ ಬಲವರ್ಧನೆ ಆಗಬೇಕೆಂಬುದು ಕಾರ್ಯಕ್ರಮದ ಉದ್ಯೇಶ. ಹೆಚ್ಚಿನ ಮಾಹಿತಿಗೆ 9741460629 ಗೆ ಸಂಪರ್ಕಿಸಬಹುದು ಎಂದು ಸಮಾಲೋಚನಾ ಅಧಿಕಾರಿ ತಾಜೋದ್ದೀನ್ ಕೋಡ್ಲಿ ತಿಳಿಸಿದ್ದಾರೆ.
ಮಕ್ಕಳಿಗೆ ನೈತಿಕ ಶಿಕ್ಷಣ ಅವಶ್ಯ
ಗುಲ್ಬರ್ಗ/ಶಹಾಬಾದ್: ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಪಠ್ಯೇತರ ಚಟುವಟಿಕೆ, ನೈತಿಕ ಶಿಕ್ಷಣ ಅಗತ್ಯವಿದೆ ಎಂದು ಇಂಗಿನಶೆಟ್ಟಿ ಕಾಲೇಜು ಪ್ರಾಚಾರ್ಯ ರಾಜಕುಮಾರ್ ಬಾಸೂತ್ಕರ್ ಹೇಳಿದರು. ದಿ. ಬಸವಲಿಂಗಪ್ಪ ರೇಷ್ಮಿ ಸ್ಮರಣಾರ್ಥ ರೇಷ್ಮಿ ಶಿಕ್ಷಣ ಸಂಸ್ಥೆಯ ಸುಭದ್ರಮ್ಮ ಬಿ.ರೇಷ್ಮಿ ಪದವಿ ಕಾಲೇಜಲ್ಲಿ ರಾಷ್ಟ್ರೀಯ ಶಿಕ್ಷಣ ದಿನದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಂಜುಮನ್ ಪಪೂ ಕಾಲೇಜು ಪ್ರಾಚಾರ್ಯ ಪೀರ್ಪಾಶಾ, ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ಕಾಲೇಜಿನ ಪ್ರಾಚಾರ್ಯ ಬಸವರಾಜ ಗುಡ್ನಾಳ, ಕಾಲೇಜು ಪ್ರಾಚಾರ್ಯರಾದ ಜ್ಯೋತಿ ಮೇಂಗಜಿ, ಸಾಹಿತಿ ಪ್ರಸನ್ನ ಮಂಡಲಗಿರಿ, ಪತ್ರಕರ್ತ ರಮೇಶ ಭಟ್ಟ ಮಾತನಾಡಿದರು. ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕಾಶಿನಾಥ ಜೋಗಿ ಉದ್ಘಾಟಿಸಿದರು. ಸಂಸ್ಥೆಯ ಸದಸ್ಯ ಸುಭಾಷ ರೇಷ್ಮಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

