ಶೋಷಿತರ ಧ್ವನಿಯಾಗಿ ದಸಂಸ
ಜೇವರ್ಗಿ: ಬುದ್ಧ, ಬಸವ, ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಶೋಷಿತರ ಧ್ವನಿಯಾಗಿ ದಲಿತ ಸಂಘರ್ಷ ಸಮಿತಿ ಕೆಲಸ ಮಾಡುತ್ತಿದೆ ಎಂದು ಜಿಲ್ಲಾ ಸಂಚಾಲಕ ಪುಂಡಲಿಕ ಗಾಯಕವಾಡ ಹೇಳಿದರು.
ತಾಲೂಕಿನ ಸುಂಬಡ ಗ್ರಾಮ ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ತಾಲೂಕು ಸಂಚಾಲಕ ಸಿದ್ದರಾಮ ಕಟ್ಟಿ, ಶ್ರೀಶೈಲ್ ಬುಟ್ನಾಳ, ಮೌನೇಶ ಜಳಕಿ, ಲಕ್ಷ್ಮಣ ಜಮಖಂಡಿ, ಗುಂಡಪ್ಪ ಜಡಗಿ, ಶಿವಲಿಂಗ ರಾಸಣಗಿ, ಮರೇಪ್ಪ ಯತ್ನಾಳ, ಮರೇಪ್ಪ ಗುಡೂರ, ಸುಂಬಡ ಗ್ರಾಪಂ ಸದಸ್ಯರಾದ ಮುತ್ತಪ್ಪ ಸಂದಿಮನಿ, ಶಂಕರಪ್ಪ ನಗನೂರ, ಶರಣಪ್ಪ ಯಾಳಗಿ, ಮಲ್ಲಪ್ಪ ನಾಟಿಕಾರ ಇದ್ದರು.
ಪದಾಧಿಕಾರಿಗಳ ಆಯ್ಕೆ: ತಾಲೂಕಿನ ಸುಂಬಡ ಗ್ರಾಮದಲ್ಲಿ ದಲಿತ ಸಂಘರ್ಷ ಸಮಿತಿ ಮತ್ತು ದಲಿತ ವಿದ್ಯಾರ್ಥಿಗಳ ಒಕ್ಕೂಟಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ಸಂಚಾಲಕರಾಗಿ ನಿಂಗಪ್ಪ ಯಾಳಗಿ, ಸಂಘಟನಾ ಸಂಚಾಲಕರಾಗಿ ಬಾಗಪ್ಪ ಎಂಟ್ಮನ್, ಪರಶುರಾಮ ಕೋಳಿ, ಬಾಬು ನಗನೂರ, ರಾಜು ನಾಟಿಕಾರ್, ಖಜಾಂಚಿಯಾಗಿ ವೀರಪ್ಪ ಎಂಟ್ಮನ್, ವಿದ್ಯಾರ್ಥಿ ಒಕ್ಕೂಟದ ಸಂಚಾಲಕರಾಗಿ ಅಯ್ಯಪ್ಪ ನಾಟಿಕಾರ, ಸಂಘಟನಾ ಸಂಚಾಲಕರಾಗಿ ಭೀಮರಾಯ ಗುಡಿಮನಿ, ಸಂಜುಕುಮಾರ್ ನಾಟಿಕಾರ, ಶಿವುಕುಮಾರ್ ಡಂಬಳ, ಮಲ್ಲಪ್ಪ ಮುತ್ತಕೋಡ, ಮಡಿವಾಳಪ್ಪ ಮಲ್ಲಾ, ಖಜಾಂಚಿಯಾಗಿ ರಾಘವೇಂದ್ರ ಯಾಳಗಿ ಆಯ್ಕೆಯಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

