ಗುಲ್ಬರ್ಗಾ

ಶ್ರದ್ಧೆಯಿಂದ ಮೊಹರಂ ಆಚರಣೆ

Published On :

ಹುಣಸಗಿ: ಹುಣಸಗಿ ಸೇರಿದಂತೆ ವಜ್ಜಲ್, ಚನ್ನೂರ ಕಲ್ಲದೇವನಹಳ್ಳಿ, ಅರಕೇರಾ ಮತ್ತು ಇತರ ಗ್ರಾಮಗಳಲ್ಲಿ ಹಿಂದು- ಮುಸ್ಲಿಮರು ಶ್ರದ್ಧಾ ಭಕ್ತಿಯಿಂದ ಮೊಹರಂ ಹಬ್ಬವನ್ನು ಆಚರಿಸಿದರು. ಬುಧವಾರ ಖತಲ್ ರಾತ್ರಿ ಪ್ರಯುಕ್ತ ಬೆಳಗ್ಗೆಯಿಂದ ಸಂಜೆವರಗೆ ಉಪವಾಸ ವೃತ ಆಚರಿಸಿ ಸಂಜೆ ಪೀರ್ ದೇವರಿಗೆ ನೈವೇದ್ಯ ಅರ್ಪಿಸಿದ ನಂತರ ಉಪವಾಸ ಸಮಾಪ್ತಿಗೊಳಿಸಿದರು. ಅಲ್ಲದೇ ಬಹುತೇಕ ಮನೆಗಳಲ್ಲಿ ಫಕೀರರಿಗೆ ಊಟ ಮಾಡಿಸುವ ಕಾರ್ಯಕ್ರಮ ನಡೆಯಿತು. ಗುರುವಾರ ಬೆಳಗ್ಗೆ ಹಸೇನ್ ಹುಸೇನ, ಸೈಯದ್ ಕಾಸಿಂ, ಮೌಲಾಲಿ ಅಬ್ಬಾಸ್ ಅಲಿ ಪೀರ್ ದೇವರ ಪಂಜಾಗಳ ಮೆರವಣಿಗೆ ನಡೆಯಿತು. ಗುರುವಾರ ಸಂಜೆ ಧಫನ್ ಕಾರ್ಯಕ್ರಮದೊಂದಿಗೆ ಮೊಹರಂ ಹಬ್ಬ ಮುಕ್ತಾಯವಾಯಿತು. ಖತಲ್ ರಾತ್ರಿ ಸವಾರಿ ಮೆರವಣಿಗೆಯಲ್ಲಿ ನಾವದಗಿಯ ಸಂಗನಗೌಡ ಪಾಟೀಲ, ರಾಜಶೇಖರಗೌಡ ವಜ್ಜಲ, ಭೀಮನಗೌಡ ಪೊಲೀಸ್ ಪಾಟೀಲ, ಸಿದ್ರಾಮಪ್ಪ ಪೂಜಾರಿ, ಕಿಶನ್ ರಾವ ಕುಲಕರ್ಣಿ, ರಾಮನಗೌಡ ಪಾಟೀಲ, ಮಲ್ಲನಗೌಡ ಮೇಟಿ, ಶಿವಲಿಂಗಪ್ಪ ಭಜನಿ, ಮಲ್ಲಣ್ಣ ನಾಗರಾಳ, ಮಲ್ಲನಗೌಡ ಅಮಲಿಹಾಳ, ತಮ್ಮನಗೌಡ ಬಸನಗೌಡ್ರ, ಚಂದಾಸಾಬ ರೂಢಗಿ, ಉಸ್ಮಾನಸಾಬ, ದಸ್ತಗಿರಸಾಬ, ಹಸೇನಸಾಬ ಮಾಸ್ತರ, ರಾಜೇಸಾಬ ಐಬಿ, ಖಾದರಸಾಬ ಸುಗಂಧಿ, ಬುಡ್ಡೇಸಾಬ, ಯಲ್ಲಪ್ಪ ಮಾಳನೂರ, ಭೀಮಣ್ಣ ನಿಡ್ಲಿ, ತಿಮ್ಮಪ್ಪ ಮರಾಠಿ, ಸಂಗಣ್ಣ ಹೊಸಮನಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.