ಗುಲ್ಬರ್ಗಾ

ಬಟ್ಟೆ ಅಂಗಡಿಗೆ ಬೆಂಕಿ

Published On :

ಗುಲ್ಬರ್ಗ: ನಗರದ ಬ್ರಹ್ಮಪುರ ಬಡಾವಣೆಯ ಯಂಕಮ್ಮ ಮಾರ್ಕೆಟ್ ಹತ್ತಿರದ ಶಾಸ್ತ್ರೀ ಚೌಕ್ನಲ್ಲಿರುವ ಬಟ್ಟೆ ಅಂಗಡಿಗೆ ಬೆಂಕಿ ತಗುಲಿ ಬಟ್ಟೆಗಳು ಸುಟ್ಟು ಲಕ್ಷಾಂತರ ರು. ಹಾನಿಯಾದ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ. ಮಂಜುನಾಥ ಮೇತ್ರೆ ಎಂಬುವರ ಬಟ್ಟೆ ಅಂಗಡಿಗೆ ಬೆಂಕಿಗೆ ಹೊತ್ತಿದ ಸುದ್ದಿ ತಿಳಿದ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ರಾಘವೇಂದ್ರ ನಗರ ಠಾಣೆಯ ಎಎಸ್ಐ ಮಹಾರುದ್ರಪ್ಪ, ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೈಕ್ ಕಳ್ಳತನ
ಗುಲ್ಬರ್ಗ: ಸೇಡಂ ನಗರದ ರಹೆಮತ್ ನಗರದ ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ ಕಳವು ಮಾಡಲಾಗಿದೆ. ಇಮ್ತಿಯಾಜ್ ಗೋರೆಮಿಯಾ ಎಂಬವರ ಮನೆ ಮುಂದೆ ನಿಲ್ಲಿಸಿದ್ದ ಬಜಾಜ್ ಪಲ್ಸರ್ ವಾಹನ ಕಳ್ಳತನವಾಗಿದೆ. ಈ ಕುರಿತು ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಕ್ತಿ ಸಾವು
ಗುಲ್ಬರ್ಗ: ಮನ್ನಾಖ್ಖೆಳ್ಳಿ- ಚಿಂಚೋಳಿ ಮುಖ್ಯರಸ್ತೆಯ ಪರಪಳ್ಳಿ- ಫತ್ತೆಪುರ ಕ್ರಾಸ್ನಲ್ಲಿ ಆಟೋ ಉರುಳಿ ಬಿದ್ದ ಪರಿಣಾಮ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡ ಘಟನೆ ನಡೆದಿದೆ. ಮೃತ ವ್ಯಕ್ತಿ ಯಾರೆಂದು ತಿಳಿದು ಬಂದಿಲ್ಲ. ಚಿಂಚೋಳಿ ತಾಲೂಕಿನ ಐನೋಳ್ಳಿಯ ತುಳಜಪ್ಪ ಚಿಂತಪಳ್ಳಿ ಮತ್ತು ಕಲ್ಲಪ್ಪ ಗಾಯಗೊಂಡಿದ್ದಾರೆ. ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ ಸವಾರ ಸಾವು
ಚಿಂಚೋಳಿ: ತಾಲೂಕಿನ ಕಲ್ಲೂರ ರೋಡ್ ಬಳಿ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ  ಘಟನೆ ನಡೆದಿದೆ. ತಾಲೂಕಿನ ಬಂಟನಳ್ಳಿ ಗ್ರಾಮದಿಂದ ಕಲ್ಲೂರ ರೋಡ್ ಗ್ರಾಮಕ್ಕೆ ಬರುತ್ತಿದ್ದಾಗ ಚಿಂಚೋಳಿ- ತಾಂಡೂರ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಬೈಕ್ ಬಿದ್ದಿದೆ. ಹಿಂಬದಿ ಸಾವರ ಸಂತೋಷ ಭಂಟನಳ್ಳಿ (21) ತಲೆಗೆ ಪೆಟ್ಟಾಗಿ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಆತನ ಜೊತೆಯಲ್ಲಿದ್ದ ಆನಂದ ಗುಂಡಪ್ಪ ಕಲ್ಲೂರ ಎಂಬಾತನ ತಲೆಗೆ ಪಟ್ಟಾಗಿದೆ. ಮಿರಿಯಾಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.