ಎಸ್‌ಟಿ: ಬೇಡಿಕೆ ಜಾರಿಯಾಗಲಿ
ಚಿತ್ತಾಪುರ: ರಾಜ್ಯದ 3ನೇ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಕುರುಬ ಸಮಾಜದವರು ಸೌಮ್ಯ ಸ್ವಭಾವದವರಿದ್ದು, ಆರ್ಥಿಕವಾಗಿ, ಸಮಾಜಿಕವಾಗಿ, ಶೈಕ್ಷಣಿಕವಾಗಿ ತೀರ ಹಿಂದುಳಿದಿದ್ದು, ಕುರುಬ ಸಮಾಜವನ್ನು ಎಸ್‌ಟಿಗೆ ಸೇರ್ಪಡೆ ಮಾಡಿದಲ್ಲಿ ನಾವು ಇನ್ನೂ ಹೆಚ್ಚು ಸದೃಢರಾಗಿ, ಬಲಿಷ್ಟರಾಗಲು ಸಹಕಾರಿ ಎಂದು ಡಾ. ಪದ್ಮರಾಜ ರಾಸಣಗಿ ಹೇಳಿದರು.
1.28 ಎಕರೆ ಭೂಮಿ: ಸ್ವಾಗತ ಭಾಷಣ ಮಾಡಿದ ತಹಸೀಲ್ದಾರ್ ಮಲ್ಲೇಶ ತಂಗಾ ಶಾಸಕರ ಅನುಪಸ್ಥಿತಿಯಲ್ಲಿ ಅವರ ಸಂದೇಶವನ್ನು ತಿಳಿಸಿದ ಅವರು, ಪಟ್ಟಣದ ಬೀರಲಿಂಗೇಶ್ವರ ಭವನ ನಿರ್ಮಾಣಕ್ಕೆ 1.28 ಎಕರೆ ಭೂಮಿ ಹಾಗೂ 20 ಲಕ್ಷ ಅನುದಾನ ಒದಗಿಸಲಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ತಾಪಂ ಅಧ್ಯಕ್ಷ ಶರಣಬಸಪ್ಪ ಪಾಟೀಲ್ ಭಾಗೋಡಿ, ಪುರಸಭೆ ಅಧ್ಯಕ್ಷ ಶಿವಕಾಂತ ಬೆಣ್ಣೂರಕರ್, ಉಪಾಧ್ಯಕ್ಷ ನಾಗರಾಜ ಕಡಬೂರ, ಕುರುಬ ಸಮಾಜದ ತಾಲುಕು ಅಧ್ಯಕ್ಷ ಜುಮ್ಮಣ್ಣ ಪೂಜಾರಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶ್ರೀಮಂತ ಹೊಸ್ಮನಿ, ಪುರಸಭೆ ಸದಸ್ಯ ಮಲ್ಲಿಕಾರ್ಜುನ ಪೂಜಾರಿ, ಅರ್ಜುನ ಗಂಗಾಣಿ, ಸೂಯಾಕಾಂತ ಪೂಜಾರಿ, ತಿಪ್ಪಣ್ಣ ವಗ್ಗರ, ಕರವೇ ಅಧ್ಯಕ್ಷ ನರಹರಿ ಕುಲ್ಕರ್ಣಿ, ರಾಜಣ್ಣ ಕರದಾಳ ವೇದಿಕೆಯಲ್ಲಿದ್ದರು. ಅಧಿಕಾರಿಗಳಾದ ಎಚ್.ಕೆ. ರಾಜಣ್ಣ, ರವೀಂದ್ರ ರತ್ನಾಕರ, ಶಿವಶರಣಪ್ಪ ಬನ್ನಿಕಟ್ಟೆ, ನಂದಕುಮಾರ ಕುಲ್ಕರ್ಣಿ, ಶಿವಶಂಕರ ನನ್ನಾ, ಸಿದ್ದವೀರಯ್ಯ ಉಪಸ್ಥಿತರಿದ್ದರು. ಮುಖಂಡರಾದ ಪ್ರಭು ಗಂಗಾಣಿ, ಭೀಮರಾಯ ಕರದಾಳ, ನಿಂಗಪ್ಪ ಸೇರಿದಂತೆ ಸಮಾಜದ ಮುಖಂಡರು ಇದ್ದರು.
ಶ್ರೀದೇವಿ ಸಂಗಡಿಗರು ಸ್ವಾಗತ ಹಾಡಿದರು. ಶ್ರೀನಿವಾಸ ಚಾಪೆಲ್ ನಿರೂಪಿಸಿದರು. ಗಂಗಾಧರ ಹಾಲು ವಂದಿಸಿದರು. ಕಸ್ತೂರಬಾ ಗಾಂಧಿ ಶಾಲೆಯ ಮಕ್ಕಳಿಂದ ಕನಕದಾಸ ವೇಷದಾರಿಯಾಗಿ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

