ಇಂದು ಜಿಲ್ಲಾ ಘಟಕ ಉದ್ಘಾಟನೆ
ಗುಲ್ಬರ್ಗ: ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ಗುಲ್ಬರ್ಗ ಜಿಲ್ಲಾ ಘಟಕ ಉದ್ಘಾಟನಾ ಸಮಾರಂಭ ನ.23ರಂದು ಸಂಜೆ 5.45 ಗಂಟೆಗೆ ನಗರದ ಎನ್.ವಿ. ಕಾಲೇಜು ಆವರಣದ ಸತ್ಯಪ್ರಮೋದತೀರ್ಥ ಬಯಲು ರಂಗಮಂದಿರದಲ್ಲಿ ನಡೆಯಲಿದೆ. ಗುಲ್ಬರ್ಗ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜಿಲ್ಲಾ ಘಟಕದ ಅಧ್ಯಕ್ಷ ಡಾ. ಪಿ.ಎಸ್. ಶಂಕರ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯಸಭಾ ಸದಸ್ಯ ಡಾ.ಬಸವರಾಜ ಪಾಟೀಲ್ ಸೇಡಂ, ಶಾಸಕ ದತ್ತಾತ್ರೇಯ ಪಾಟೀಲ್ ರೇವುರ, ಜಿಪಂ ಅಧ್ಯಕ್ಷ ರಮೇಶ ಮರಗೋಳ, ಆರ್.ಎನ್.ರಾವ್, ಬಿ.ನರಸಿಂಹ ಮೆಂಡೆನ್, ವಿದ್ಯಾರಾಣಿ ಭಟ್ ಆಗಮಿಸಲಿದ್ದಾರೆ. ಡಾ.ಶರಣಬಸವಪ್ಪ ಅಪ್ಪ ಸಾನ್ನಿಧ್ಯ ವಹಿಸಲಿದ್ದಾರೆ.
29ರಿಂದ ಪುಸ್ತಕ ಸಂತೆ: ಆಹ್ವಾನ
ಗುಲ್ಬರ್ಗ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನ.29, 30ರಂದು ಎರಡು ದಿನಗಳ ಕಾಲ ಪುಸ್ತಕ ಸಂತೆ ಕನ್ನಡ ಭವನದಲ್ಲಿ ಆಯೋಜಿಸಲಾಗಿದೆ. ಜಿಲ್ಲೆಯ ಮತ್ತು ಹೊರ ಜಿಲ್ಲೆಯ ಪುಸ್ತಕ ಪ್ರಕಾಶಕರು ಹಾಗೂ ಲೇಖಕರು ಈ ಪುಸ್ತಕ ಸಂತೆಯಲ್ಲಿ ತಮ್ಮ ಪುಸ್ತಕಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕೆ ಅನುಕೂಲ ಮಾಡಿಕೊಡಲಾಗುವುದು. ಆಸಕ್ತ ಪ್ರಕಾಶಕರು ನ. 27 ರೊಳಗಾಗಿ ಹೆಸರು ನೋಂದಾಯಿಸುವಂತೆ ಗೌರವ ಕಾರ್ಯದರ್ಶಿ ಸುರೇಶ ಬಡಿಗೇರ (9945570234) ತಿಳಿಸಿದ್ದಾರೆ.
ಬಸ್ ದರೋಡೆಗೆ ಯತ್ನ: ಇಬ್ಬರ ಸೆರೆ
ಗುಲ್ಬರ್ಗ: ನಗರದ ಹೊರವಲಯದ ಕೋಟನೂರ ಮಠದ ಹತ್ತಿರ ರಾತ್ರಿ ಹೊತ್ತಿನಲ್ಲಿ ವೋಲ್ವೋ ಬಸ್ನ್ನು ತಡೆದು ಮಾರಕಾಸ್ತ್ರಗನ್ನು ತೋರಿಸಿ ದರೋಡೆಗೆ ಯತ್ನಿಸಿದ ಇಬ್ಬರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಜೇವರ್ಗಿ ಕಾಲೋನಿಯ ರಾಜು ತಂದೆ ಬಸರವಾಜ ಮತ್ತು ತಾರಫೈಲ್ ಬುದ್ಧ ನಗರದ ಪ್ರದೀಪ ತಂದೆ ಶಂಕರ ದೊಡ್ಮನಿ ಎಂಬುವರನ್ನು ಬಂಧಿಸಿ ಅವರಿಂದ ಮಾರಕಾಸ್ತ್ರ ಜಪ್ತಿ ಮಾಡಿಕೊಳ್ಳಲಾಗಿದೆ. ಎಂ.ಬಿ. ನಗರ ಸಿಪಿಐ ಬಸವರಾಜ ತೆಲಿ ಮಾರ್ಗದರ್ಶನದಲ್ಲಿ ಫರತಬಾಬಾದ್ ಪಿಎಸ್ಐ ವಿಜಯಕುಮಾರ್ ಹಾಗೂ ಸಿಬ್ಬಂದಿ ರಾತ್ರಿ ಗಸ್ತಿನಲ್ಲಿದಾಗ ಆರೋಪಿಗಳನ್ನು ಗುರುವಾರ ಬಂಧಿಸಿದ್ದು, ಈ ಕುರಿತು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ನಿಂದ ಬಿದ್ದು ಬಾಲಕ ಸಾವು
ಗುಲ್ಬರ್ಗ: ಸಹೋದರನ ನಿಶ್ವಿತಾರ್ಥಕ್ಕೆ ಬೈಕ್ ಮೇಲೆ ಹೊರಟಿದ್ದಾಗ ಅಫಜಲ್ಪುರ ತಾಲೂಕಿನ ಮಾದಬಾಳ ತಾಂಡಾ ಹತ್ತಿರ ಬೈಕ್ ಸ್ಕಿಡ್ ಆದ ಪರಿಣಾಮ ಬಾಲಕನೊಬ್ಬ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿರುವ ಘಟನೆ ನಡೆದಿದೆ. ಚನ್ನಪ್ಪ ತಂದೆ ಪ್ರಧಾನಿ ಪ್ಯಾಟಿ (12) ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಬಲವಂತ ತಳವಾರ ಹಾಗೂ ಇನ್ನೊಬ್ಬ ಗಾಯಗೊಂಡಿದ್ದು, ಈ ಕುರಿತು ಅಫಜಲ್ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

