ಗುಲ್ಬರ್ಗಾ

ಇಂದು ಉಪನ್ಯಾಸ ಕಾರ್ಯಕ್ರಮ

Published On :

ಗುರುಮಠಕಲ್: ಸಗರನಾಡು ಸೇವಾ ಪ್ರತಿಷ್ಠಾನ ಸುರಪುರ ಇವರ ವತಿಯಿಂದ ಗುರುಮಠಕಲ್‌ನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಾಹಿತಿ-ಮಾಹಿತಿ ಕನ್ನಡ ಜಾಗೃತಿ ಸಾಪ್ತಾಹಿಕ ಸರಣಿ ಮಾಲಿಕೆಯ ಉದ್ಘಾಟನೆ ಹಾಗೂ ಕನ್ನಡದ ಕಣ್ವ ಬಿ.ಎಂ.ಶ್ರೀ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನ.29ರಂದು ಬೆಳ್ಳಿಗೆ 10 ಗಂಟೆಗೆ ನಡೆಯಲ್ಲಿದೆ. ಕಾರ್ಯಕ್ರಮವನ್ನು ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಶಂಕರ ಬಿದರಿ ಉದ್ಘಾಟಿಸುವರು. ಸಾಹಿತಿಗಳಾದ ವೆಂಕಟರಾವ್ ಕುಲಕರ್ಣಿಯವರು ಉಪನ್ಯಾಸ ನಿಡಲ್ಲಿದ್ದಾರೆ. ಗುರುಮಠಕಲ್ ಖಾಸಮಠದ ಪೀಠಾಧಿಪತಿ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸುವರು ಕಾಲೇಜಿನ ಪ್ರಾಂಶುಪಾಲ ಎಂ.ಎಸ್. ಯಾಳಗಿಯವರು ಅಧ್ಯಕ್ಷತೆ ವಹಿಸುವರು ಎಂದು ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನಳ್ಳಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ದೇಶಪಾಂಡೆಗೆ ಷರೀಫ್ ಪ್ರಶಸ್ತಿ
ಹುಣಸಗಿ: ಬೆಂಗಳೂರಿನ ಶಿವಾಜಿ ನಗರದ ಸಮೀಪವಿರುವ ಸಂತ ಶಿಶುವಿನಾಳ ಷರೀಫರ ವೇದಿಕೆಯಲ್ಲಿ ಇಂದು ಕರವೇ ವತಿಯಿಂದ ನಡೆಯಲಿರುವ ರಾಜ್ಯ ಮಟ್ಟದ ರಾಜ್ಯೋತ್ಸವ ಸಮಾರಂಭದಲ್ಲಿ ಸಂತ ಶಿಶುವಿನಾಳ ಷರೀಫ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಹುಣಸಗಿಯ ವರದಿಗಾರ ವೆಂಕಟಗಿರಿ ದೇಶಪಾಂಡೆ ಇಂದು ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ ಎಂದು ಕರವೇಯ ಬಸವರಾಜ ಪಡಕೋಟೆ ತಿಳಿಸಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ವಹಿಸಿಕೊಳ್ಳುವರು. ಉದ್ಘಾಟನೆಯನ್ನು ಕೇಂದ್ರ ಮಾಜಿ ಸಚಿವ ಜಾಫರ್ ಷರೀಫ್ ಮಾಡಲಿದ್ದಾರೆ. ಪ್ರಶಸ್ತಿಯನ್ನು ಬೆಂಗಳೂರು ದೂರದರ್ಶನ ಕೇಂದ್ರದ ಹೆಚ್ಚುವರಿ ನಿರ್ದೇಶಕ ಮಹೇಶ ಜೋಷಿ ನೀಡಲಿದ್ದಾರೆ ಎಂದು ಪಡಕೋಟೆ ತಿಳಿಸದ್ದಾರೆ.
ಎಂಇಎಸ್ ಶಾಸಕರ ಗಡಿಪಾರಿಗೆ ಆಗ್ರಹ
ಗುರುಮಠಕಲ್; ಬೆಳಗಾವಿಯ ಸುವರ್ಣ ಸೌಧದಲ್ಲಿ ನಿನ್ನೆಯಿಂದ ಆರಂಭವಾದ ಚಳಿಗಾಲದ ಅಧಿವೇಶನದ ಮೊದಲ ದಿನ ಮರಾಠಿಯಲ್ಲಿ ಭಾಷಣ ಮಾಡಿದ ಎಂ.ಇ.ಎಸ್ಶಾಸಕರಾದ ಸಂಬಾಜಿ ಪಾಟೀಲಲ್ಮತ್ತು ಅರವಿಂದ ಪಾಟೀಲ್ ಅವರ ಶಾಸಕತ್ವವನ್ನು ಕೂಡಲೇ ರದ್ದುಗೊಳಿಸಿ ಅವರನ್ನು ಗಡಿಪಾರು ಮಾಡಬೇಕೆಂದು ರಾಜ್ಯ ಸರಕಾರವನ್ನು ಹೈದ್ರಾಬಾದ್ಕ್‌ನರಾಟಕ ಹೋರಾಟ ಸಮಿತಿ ಯಾದಗಿರಿ ಜಿಲ್ಲಾ ಯುವಘಟಕದ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನಳ್ಳಿ ಸರಕಾರವನ್ನು ಆಗ್ರಹಿಸಿದ್ದಾರೆ. ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗುವ ದಿನವೇ ಎಂಇಎಸ್ ಮುಖಂಡರು ಮಹಾಮೇಳವನ್ನು ನಡೆಸುವುದರ ಮೂಲಕ ಕನ್ನಡದ ಮನಸ್ಸುಗಳನ್ನು ಕೆರಳಿಸಿದೆ. ಮಹಾಮೇಳವನ್ನು ನಡೆಸಲು ಅವಕಾಶವನ್ನು ಕೊಟ್ಟಿರುವ ರಾಜ್ಯ ಸರಕಾರದ ಕ್ರಮ ಖಂಡನಾರ್ಹ. ಹಾಗೆಯೇ ಕನ್ನಡಿಗರನ್ನು ಕುರಿತು ಅವಹೇಳನವಾಗಿ ಮತ್ತು ಅವಾಚ್ಯವಾಗಿ ನಿಂದಿಸಿರುವ ಶಾಸಕ ಸಂಬಾಜಿ ಪಾಟೀಲ್ ಅವರ ಶಾಸಕತ್ವವನ್ನು ಕೂಡಲೇ ಸರಕಾರ ರದ್ದುಗೊಳಿಸಬೇಕು  ಹಾಗೂ ರಾಜ್ಯದಲ್ಲಿ ಎಂ.ಇ.ಎಸ್.ಸಂಘಟನೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಆಗ್ರಹಿಸಿದ್ದಾರೆ.

ಆತ್ಮವಿಶ್ವಾಸದಿಂದ ವ್ಯಕ್ತಿತ್ವ ರೂಪಿಸಿಕೊಳ್ಳಿ: ಗದ್ದುಗೆ
ಶಹಾಪುರ: ವಿದ್ಯಾರ್ಥಿ ಜೀವನದಲ್ಲಿ ಆತ್ಮವಿಶ್ವಾಸದ ಮೂಲಕ ಯಶಸ್ಸು ಸಾಧಿಸಿ ತನ್ಮೂಲಕ ಕುಟುಂಬ, ಸಮಾಜ, ರಾಜ್ಯದ ಕೀತರ್ ಹೆಚ್ಚಿಸುವಂತಹ ವ್ಯೆಕ್ತಿತ್ವ ಪಡಿಸಿಕೊಳ್ಳುವುದು ಬಹು ಮುಖ್ಯವಾಗಿದೆ ಎಂದು ಸ್ವಯಂ ನಿವೃತ್ತಿ ಪಡೆದ ಪ್ರಧಾನ ಅಧ್ಯಾಪಕ ಗುರುಬಸ್ಸಯ್ಯ ಗದ್ದುಗೆ ತಿಳಿಸಿದರು. ಶ್ರೀಚರಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಮತ್ತು ಆತ್ಮೀಯ ಬಳಗದ ವತಿಯಿಂದ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಅಭಿಪ್ರಾಯ ಹಂಚಿಕೊಂಡ ಅವರು, ಸತತ ಅಧ್ಯಯನ ಮೂಲಕ ವಿದ್ಯಾರ್ಥಿಗಳು ಮುಂಬರುವ ದಿನಗಳಲ್ಲಿ ಸಮಾಜದ ಯಾವುದೇ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಿದರೂ ಅದರಲ್ಲಿ ಸರ್ವಹಿತ ಅಡಗಿರಬೇಕು.
ಪ್ರೀತಿ, ವಿಶ್ವಾಸ ಮುಖ್ಯ: ಗುರುವಿನ ಮಾರ್ಗದರ್ಶನದಲ್ಲಿ ವಿದ್ಯೆಯ ಜೊತೆ ಸದ್ಗುಣಗಳು ರೂಪಿತವಾಗಲಿ. ಸ್ಥಳೀಯ ಚರಬಸವೇಶ್ವರ ಸಂಸ್ಥೆಯಲ್ಲಿ 33ವರ್ಷ ಸೇವೆ ಸಲ್ಲಿಸುವ ಸದಾವಾಕಾಶ ನೀಡಿದ್ದು ಮರೆಯುವಂತಿಲ್ಲ. ಆತ್ಮೀಯ ಶಿಕ್ಷಕ ವೃಂದ  ವಿದ್ಯಾರ್ಥಿಗಳ ಪ್ರೀತಿ, ವಿಶ್ವಾಸ ಸೇವೆಯ ದಿನದಲ್ಲಿ ಸ್ಮರಣೀಯವಾದಂಥವು ಎಂದರು.  ಇದೇ ಸಂದರ್ಭದಲ್ಲಿ ಶ್ರೀಚರಬಸವೇಶ್ವರ ವಿದ್ಯಾವರ್ಧಕ ಸಂಸ್ಥೆ ಯು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾಗಿದ್ದ ನಿವೃತ್ತಿ ಪಡೆದ ವಿಶ್ವನಾಥ ರೆಡ್ಡಿ ದರ್ಶನಾಪುರ ಅವರನ್ನು ಸನ್ಮಾನಿಸಲಾಯಿತು. ವೇದಿಕೆ ಮೇಲೆ ಪಿಎಸ್‌ಐ ದೊಡ್ಡಪ್ಪಗೌಡ, ನೌಕರರ ಸಂಘದ ಅಧ್ಯಕ್ಷ ಸುಧಾಕರ ಗುಡಿ, ದೈಹಿಕ ಶಿಕ್ಷಣಾಧಿಕಾರಿ ಅಣ್ಣಪ್ಪ ಸನದಿ, ಪ್ರಭಾರಿ ಮುಖ್ಯಗುರು ಬಾಪುಗೌಡ ಉಪಸ್ಥಿತರಿದ್ದರು. ಶಿಕ್ಷಕ ಅರುಣ ಸ್ವಾಗತಿಸಿದರು. ಶರಣಯ್ಯ ಶಿಕ್ಷಕರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹ್ಮದ ಹುಸೇನ ಆಸ್ಕರಿ ನಿರ್ವಹಿಸಿದರು. ಶೃತಿ ಸಂಗಡಿಗರು ಪ್ರಾರ್ಥಿಸಿದರು, ಶ್ರೀಚರಬಸವೇಶ್ವರ ವಿದ್ಯಾವರ್ಧಕ ಸಂಸ್ಥೆ ಅಡಿ ನಡೆಯುತ್ತಿರುವ ಐಟಿಐ ಕಾಲೇಜಿನ, ಸಂಸ್ಕೃತ ಪಾಠಶಾಲೆ ಪದವಿ ಕಾಲೇಜ, ಪಿಯುಸಿ ಕಾಲೇಜು, ಉರ್ದು ಮಾಧ್ಯಮ ಗ್ರಾಮೀಣ ಬಾಲಕಿಯರ ವಸತಿನಿಲಯ, ಸಗರದ ಹಿ.ಪ್ರಾ, ಶಾಲೆಯ ಮತ್ತು ದೈಹಿಕ ಶಿಕ್ಷಕರ ಬಳಗ ಆತ್ಮೀಯ ಗುರುವೃಂದ ಪಾಲ್ಗೊಂಡಿದ್ದು, ಗದ್ದುಗೆ ಸರ್ ಅವರಿಗೆ ಸನ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.