ಮಾದರಿ ಕ್ಷೇತ್ರ ಮಾಡುವೆ
ಸುರಪುರ: ನನ್ನನ್ನು ಚುನಾಯಿಸಿದರೆ ರಾಯಚೂರು ಮತಕ್ಷೇತ್ರವನ್ನು ಒಂದು ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ. ಈ ಭಾಗವನ್ನು ಅಭಿವೃದ್ಧಿಪಡಿಸುತ್ತೇನೆ ಎಂದು ರಾಯಚೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕ ಹೇಳಿದರು.
ಸಮೀಪದ ರಂಗಂಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕರ ಪರ ಮತಯಾಚನೆ ನಡೆಸಿ, ನಂತರ ಕನ್ನಡ ಸಾಹಿತ್ಯ ಸಂಘದ ಆವರಣದಲ್ಲಿ ನಡೆದ ಮುಖಂಡರ ಸಮಾಲೋಚನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. 5 ವರ್ಷಗಳಲ್ಲಿ ಕೇಂದ್ರದ ಯುಪಿಎ ಸರ್ಕಾರದಿಂದ ದೇಶದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗದೆ, ಭ್ರಷ್ಟಾಚಾರ, ಹಗರಣಗಳೇ ಆಗಿವೆ ಎಂದು ಟೀಕಿಸಿದರು.
ಮೋದಿ ಪ್ರಧಾನಿಯಾಗಬೇಕಾದರೆ: ನಂತರ ಮಾತನಾಡಿದ ಮಾಜಿ ಸಚಿವ ರಾಜೂಗೌಡ, ಲೋಕಸಭೆ ಚುನಾವಣೆಯಲ್ಲಿ ಶಿವನಗೌಡ ನಾಯಕ ಅವರನ್ನು ಗೆಲ್ಲಿಸಬೇಕು ಎಂದು ಕರೆ ನೀಡಿದರು. ನರೇಂದ್ರ ಮೋದಿ ಅವರನ್ನು ದೇಶದ ಪ್ರಧಾನಿಯನ್ನಾಗಿ ಮಾಡಲು ಶಿವನಗೌಡ ನಾಯಕರನ್ನು ಗೆಲ್ಲಿಸಲೇಬೇಕು. ಪ್ರತಿ ವಾರ್ಡ್ಗಳಲ್ಲಿ ಮುಖಂಡರು ಒಟ್ಟಾಗಿ ಸೇರಿ ಕೆಲಸ ಮಾಡಬೇಕು. ಬಿಜೆಪಿ ಸರಕಾರದ ಸಾಧನೆಯನ್ನು ಮತದಾರರಿಗೆ ಮನವರಿಕೆ ಮಾಡಿ ಕೊಡಬೇಕು. ಶಿವನಗೌಡ ನಾಯಕರ ಪರವಾಗಿ ಮತ ಚಲಾಯಿಸುವಂತೆ ಮತದಾರರನ್ನು ಪ್ರೇರೇಪಿಸಬೇಕು. ಮತದಾನದ ದಿನ ಮತದಾರರನ್ನು ಕರೆ ತಂದು ಹೆಚ್ಚು ಮತದಾನ ಮಾಡಿಸಬೇಕು ಎಂದು ಮುಖಂಡರಲ್ಲಿ ಮನವಿ ಮಾಡಿದರು.
ಮುಖಂಡರಾದ ಎಚ್.ಸಿ. ಪಾಟೀಲ, ರಾಜಾ ಹನುಮಪ್ಪ ನಾಯಕ ತಾತಾ, ಸಂಗನಗೌಡ ವಜ್ಜಲ್, ಚಂದ್ರಶೇಖರ ಜಡಿಮರಳ, ಚಂದ್ರಕಾಂತ ಕಡೇಚೂರ, ಏಜಾಜಹುಸೇನ ಚಿದ್ರಿ, ಸಿದ್ರಾಮ ಎಲಿಗಾರ, ಸೋಮರಾಯ ಶಖಾಪೂರ, ಇಸ್ಮಾಯಿಲ್ ಬಳಿಚಕ್ರ, ಭೀಮಾಶಂಕರ ಬಿಲ್ಲವ್, ಗೋವಿಂದರಾಜ ಶಹಾಪುರಕರ್, ಶ್ರೀರಂಗ ಮಿರಿಯಾಲ, ಮಹ್ಮದ್ ಉಸ್ಮಾನ್ ಅಲ್ಹಾತೆ, ವೆಂಕಟೇಶ ಗದ್ವಾಲ, ಭೀಮಣ್ಣ ಬೇವಿನಾಳ, ವೀರಭದ್ರ ಕುಂಬಾರ, ಹಣ್ಮಂತ ಚಂದನಕೇರಿ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

