12ನೇ ಶರಣ ಸಮ್ಮೇಳನ ಇಂದಿನಿಂದ
ಗುರುಮಠಕಲ್: ಯಾದಗಿರಿ ತಾಲೂಕಿನ ಅರಿಕೇರಿ ಕೆ. ಗ್ರಾಮದ ಸಿದ್ದರೂಢ ಮಹಾಸ್ವಾಮಿ ಬ್ರಹ್ಮವಿದ್ಯಾಶ್ರಮದಲ್ಲಿ ಏ. 8ರಿಂದ 10ರವರೆಗೆ 12ನೇ ಶರಣ ಸಮ್ಮೇಳನ ಜರುಗಲಿದೆ. ಗದಗ್‌ನ ಬೆನಕೂಡೇಶ್ವರ ಮಠದ ಶಿವಾನಂದ ಸ್ವಾಮಿ ಸಾನ್ನಿಧ್ಯ ವಹಿಸುವರು. ಅರಿಕೇರಾ ಕೆ.ಸಿದ್ದಲಿಂಗ ಸ್ವಾಮಿ ಅಧ್ಯಕ್ಷತೆ ವಹಿಸಿದರೆ, ಇಳಕಲ್‌ನ ಗುರು ಕೃಪಾಶ್ರಮದ ಸಿದ್ದಬಸವ ಚನ್ನವೀರ ಮಹಾಸ್ವಾಮಿ ನೇತೃತ್ವ ವಹಿಸುವರು.
ಮೊದಲ ದಿನ: ಏ.8ರಂದು ಬೆ.9ಕ್ಕೆ ಸಿದ್ದಾರೂಢ ಸಿದ್ದಿವಿನಾಯಕ ದ್ವಾದಶ ಜ್ಯೋತಿರ್ಲಿಂಗ ನವಗ್ರಹಗಳಿಗೆ ಸಹಸ್ರ ಬಿಲ್ವಾರ್ಚನೆ. ಬೆ.10ಕ್ಕೆ ಮುಧೋಳದ ಅಡವಿ ಸಿದ್ದೇಶ್ವರ ಮಠದ ನಿತ್ಯಾನಂದ ಸ್ವಾಮೀಜಿ ಪ್ರಣವ ಧ್ವಜಾರೋಹಣ ನೆರವೇರಿಸುವರು. ಗುರುಮಠಕಲ್‌ನ ಖಾಸಾಮಠದ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮಿ ವತಿಯಿಂದ ಕೈಲಾಸ ಮಂಟಪ ಉದ್ಘಾಟಿಸುವರು. ಯಾದಗಿರಿ ನಗರ ಸಭೆ ಸದಸ್ಯೆ ಡಾ. ಶೀತಲ್ ಸಿದ್ದಾರೂಢರ ಜಯಂತ್ಯುತ್ಸವ ತೊಟ್ಟಿಲು ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಬೆ.11.30ಕ್ಕೆ ಯಲ್ಲಾಲಿಂಗ ಸ್ವಾಮಿ ವೇದಾಂತ ವೇದಿಕೆ ಉದ್ಘಾಟಿಸಿ, ಸಂಭವಾಮಿ ಯುಗೇ ಯುಗೇ ಕುರಿತು ಉಪನ್ಯಾಸ ನೀಡುವರು.
2ನೇ ದಿನ: 9ರ ಬೆ.10.30ಗಂಟೆಗೆ ದಿಗ್ಗಾಂವ್ ಪಂಚಲಿಂಗೇಶ್ವರ ಹಿರೇಮಠದ ಸಿದ್ದವೀರ ಶಿವಾಚಾರ್ಯ, ಸಿದ್ದಲಿಂಗ ಸ್ವಾಮೀಜಿ ಕಥಾಮೃತ ಧಾರೆ ಗ್ರಂಥ ಲೋಕರ್ಪಾಣೆ ಮಾಡುವರು. ಗುರು ವಚನವೇ ಶೃತಿ, ವರಗುಣವಾವುದು ಕುರಿತು ಉಪನ್ಯಾಸ ನಡೆಯಲಿದೆ.
3ನೇ ದಿನ: 10ರಂದು ಮರಣದಿಂ (ದ) ಮುನ್ನೇನು ಗ್ರಂಥವನ್ನು ಲಿಂಗಾರೆಡ್ಡಿ ಗೌಡ ಬಿಡುಗಡೆ ಮಾಡುವರು. ನ್ಯಾ. ಬಿರಾದಾರ ಮತ್ತು ಲಿಂಗಣ್ಣಗೌಡ ಮಲ್ಲಾರ್ ಅವರಿಗೆ ಆರೋಢ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸುವರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

