ಗುಲ್ಬರ್ಗಾ

ಅಣಬಿಯಲ್ಲಿ ಬಿಜೆಪಿ ಮತಯಾಚನೆ

Published On :

ಶಹಾಪುರ: ದೇಶದ ಸಮಗ್ರ ಅಭಿವೃದ್ಧಿಗಾಗಿ ಈ ಬಾರಿ ಬಿಜೆಪಿಗೆ ಮತ ನೀಡಿ ಎಂದು ತಾಲೂಕಿನ ಅಣಬಿ ಗ್ರಾಮದಲ್ಲಿ ಜಿಲ್ಲಾ ಬಿಜೆಪಿ ಎಸ್‌ಟಿ ಮೋರ್ಚಾದ ಕಾರ್ಯಕರ್ತರು ಭಾನುವಾರ ಮನೆ ಮನೆ ತೆರಳಿ ಮತ ಯಾಚಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಎಸ್‌ಟಿ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತ್ರಿಶೂಲ ಹವಾಲ್ದಾರ, ರಾಯಚೂರು ಲೋಕಸಭೆ ಬಿಜೆಪಿ ಅಭ್ಯರ್ಥಿ ಮಾಜಿ ಸಚಿವ ಶಿವನಗೌಡ ನಾಯಕ ಉತ್ತಮ ರಾಜಕಾರಣಿಯಾಗಿದ್ದಾರೆ. ಕ್ಷೇತ್ರದ ಪರ ಕಾಳಜಿಯುಳ್ಳವರಾಗಿದ್ದಾರೆ. ದೇಶದ ಸದೃಢತೆಗೆ ನರೇಂದ್ರ ಮೋದಿ ಪ್ರಧಾನಿ ಆಗಲೇಬೇಕು. ಗುಜರಾತ್ ಅಭಿವೃದ್ಧಿ ದೇಶದಲ್ಲಿಯೇ ಪ್ರಥಮ ಸ್ಥಾನ ಗಳಿಸಿದೆ. ಮೋದಿ ಅವರ ದೂರದೃಷ್ಟಿ ಮತ್ತು ಅವರ ಅಭಿವೃದ್ಧಿ ಮಂತ್ರ ಇಂದು ಅವರನ್ನು ಪ್ರಧಾನಿ ಮಟ್ಟಕ್ಕೆ ತಂದು ನಿಲ್ಲಿಸಿದೆ ಎಂದರು. ಅದಕ್ಕೆ ಪೂರಕವಾಗುವಂತೆ ನಾಯಕರನ್ನು ಆಯ್ಕೆ ಮಾಡಬೇಕು ಎಂದರು. ದೇವಿಂದ್ರಪ್ಪ ಕಾಡಂಗೇರಾ, ಹಣಮಂತ ಬಾಲಪ್ಪ, ಶಾಂತಕುಮಾರ ಹೋತಪೇಠ, ಭೀಮಣ್ಣ ನಾಯ್ಕೋಡಿ, ನಿಂಗಣ್ಣ ಸಾಹು , ಗೌರೀಶ ಮುಡಬೂಳ ಇತರರು ಇದ್ದರು.
ಶಾಸಕ ಜಾಧವ ಹೇಳಿಕೆಗೆ ರಾಠೋಡ್ ಆಕ್ಷೇಪ
ಯಾದಗಿರಿ: ಗುಲ್ಬರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರೇವುನಾಯಕ ಬೆಳಮಗಿ ಅವರು ಜಾತಿಯ ಹೆಸರಿನ ಮೇಲೆ ಮತ ಕೇಳುತ್ತಿದ್ದಾರೆ ಎಂದು ಶಾಸಕ ಡಾ. ಉಮೇಶ ಜಾಧವ್ ಶನಿವಾರ ಗುರುಮಠಕಲ್‌ನಲ್ಲಿ ಪ್ರಚಾರ ಭಾಷಣದಲ್ಲಿ ಹೇಳಿರುವುದಕ್ಕೆ ಅಖಿಲ ಭಾರತ ಬಂಜಾರಾ ಸೇವಾ ಸಂಘದ ಮುಖಂಡ ಬಸವರಾಜ ಬಿ. ರಾಠೋಡ್ ಆಕ್ಷೇಪಿಸಿದ್ದಾರೆ. ರೇವುನಾಯಕ್ ಬೆಳಮಗಿ ಯಾವತ್ತೂ ಜಾತಿ ಹೆಸರಿನಲ್ಲಿ ರಾಜಕಿಯ ಮಾಡಿದ ವ್ಯಕ್ತಿಯಲ್ಲ. ಇಂತಹ ತಪ್ಪು ಕಲ್ಪಿತ ಹೇಳಿಕೆ ನೀಡಿ, ಬಂಜಾರ ಸಮಾಜದ ಮುಖಂಡರಿಗೆ ತಪ್ಪು ಸಂದೇಶ ರವಾನಿಸಿದ್ದಾರೆ ಎಂದು ರಾಠೋಡ್  ಆಕ್ರೋಶ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.