ಗುಲ್ಬರ್ಗಾ

ಪೊಲೀಸರ ಮೇಲೆ ಕಲ್ಲು ತೂರಾಟ

Published On :

ಕನ್ನಡಪ್ರಭ ವಾರ್ತೆ ್ಣ ಗುರುಮಠಕಲ್ ್ಣ ಏ.17
ಗುಲ್ಬರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಯಾದಗಿರಿ ತಾಲೂಕಿನ ಕೊಂಕಲ್ ಗ್ರಾಮದ ಮತಗಟ್ಟೆಯಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಪೊಲೀಸ್ ಮತ್ತು ಗ್ರಾಮಸ್ಥರ ನಡುವಿನ ಮಾತಿನ ಚಕಮಕಿ ತಾರಕಕ್ಕೇರಿ ಸುಮಾರು 4 ಗಂಟೆಗಳ ಕಾಲ ಮತದಾನ ಸ್ಥಗಿತಗೊಂಡ ಘಟನೆ ಗುರುವಾರ ನಡೆಯಿತು.
ಕೊಂಕಲ್ ಗ್ರಾಮದ 147 ಮತಗಟ್ಟೆಗೆ ಗ್ರಾಮಸ್ಥರು ಮತಚಲಾಯಿಸಲು ಬರುತ್ತಿರುವಾಗ ಅತಿ ಸೂಕ್ಷ್ಮ ಕೇಂದ್ರವಾದ ಹಿನ್ನೆಲೆ 200 ಮೀ. ಸುತ್ತಮುತ್ತ ನಿಷೇಧ ಹೇರಲಾಗಿತ್ತು. ಮತದಾರರು ಇದನ್ನು ಗಮನಿಸದೆ ಮತಗಟ್ಟೆ ಮುಂದೆ ತಮ್ಮ ಖಾಸಗಿ ವಾಹನ ನಿಲ್ಲಿಸಿದ್ದಕ್ಕೆ ಆಂಧ್ರಪ್ರದೇಶದ ಹೋಂಗಾರ್ಡ್ ವಾಹನ ತೆಗೆಯಲು ಹೇಳಿದ್ದಾರೆ. ಇದರಿಂದ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಸುವ ಮಟ್ಟಕ್ಕೆ ತಲುಪಿದೆ.
ಥಳಿತ, ಕಲ್ಲು ತೂರಾಟ: ಆಗ ಹೋಂ ಗಾರ್ಡ್ ಮತ್ತು ಕೆಲ ಸಿಐಎಸ್‌ಎಫ್ ಯೋಧರು ಸೇರಿ ಸ್ಥಳೀಯ ಶರಣಪ್ಪ ಪಡಶೆಟ್ಟಿ, ರಾಜಪ್ಪ, ಲೋಕೇಶ ಎಂಬುವವರನ್ನು ಹೊಡೆದ ಪರಿಣಾಮ ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾಯಿತು. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಕುಪಿತಗೊಂಡ ಪೊಲೀಸರು ಸಹ ಲಘು ಲಾಠಿ ಪ್ರಹಾರ ಮಾಡಿದ್ದಾರೆ. ಸ್ಥಳೀಯ ರಾಚಪ್ಪ ಕಡದಳ್ಳಿ ಎಂಬುವವರ ತಲೆಗೆ ತೀವ್ರ ಗಾಯವಾಗಿದೆ.
ಪರಿಸ್ಥಿತಿ ತೀರಾ ವಿಕೋಪಕ್ಕೆ ತೆರಳಿ ಜನರ ನಿಯಂತ್ರಣ ಸಾಧ್ಯವಾಗದ ಹಿನ್ನೆಲೆ ಸ್ಥಳದಲ್ಲಿದ್ದ ಅಧಿಕಾರಿಗಳು ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ ಅವರಿಗೆ ವಿಷಯ ಮುಟ್ಟಿಸಿದರು. ಕೆಲ ಹೊತ್ತಿನಲ್ಲಿ ಸ್ಥಳಕ್ಕೆ ಆಗಮಿಸಿದ ಎಸ್ಪಿ ಪರಿಸ್ಥಿತಿಯನ್ನು ತಿಳಿಗೊಳಿಸಿ ಸರಳ ಮತದಾನಕ್ಕೆ ಅನುಕೂಲ ಮಾಡಿಕೊಟ್ಟರು.
ಸಮಜಾಯಿಷಿ: ಘಟನೆಯಿಂದ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡು ಸುಮಾರು 4 ತಾಸಿಗೂ ಹೆಚ್ಚು ಮತದಾನವನ್ನು ಸ್ಥಳಿಯರು ಬಹಿಷ್ಕರಿಸಿದ್ದರು. ಪುನಃ ಮ.2 ಗಂಟೆ ಸುಮಾರಿಗೆ ಸಹಾಯಕ ಚುನಾವಣಾಧಿಕಾರಿ ಮತ್ತು ಇನ್ನಿತರರು ಜನರನ್ನು ಸಮಜಾಯಿಷಿ ನೀಡಿ ಮರುಮತದಾನಕ್ಕೆ ಅವಕಾಶ ಮಾಡಿಕೊಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.