ಪ್ರಮುಖ ನಾಯಕರಿಂದ ಮತದಾನ
ಗುಲ್ಬರ್ಗ: ಗುರುವಾರ (ಏ. 17)ಉರಿ ಬಿಸಿಲಿನ ಪ್ರತಾಪದಿಂದಾಗಿ ಮತದಾರ ಪರಿತಪಿಸುತ್ತ ಮನೆಯಲ್ಲೇ ಕುಳಿತ. ಹೊರಗೇ ಬರಲೇ ಇಲ್ಲ. ನಿರೀಕ್ಷೆಯಂತೆ ಜಿಲ್ಲೆಯ ಎಲ್ಲ ಕಡೆ ಬಿಸಿಲಿನಿಂದಾಗಿ ಮತದಾನದ ಪ್ರಮಾಣ ಅಷ್ಟಾಗಿ ಹೆಚ್ಚಾಗಿರಲಿಲ್ಲ. ಅದರಲ್ಲೂ ಪ್ರತಿ ಚುನಾವಣೆಯಲ್ಲಿ ಅಧಿಕ ಮತದಾನದಿಂದ ಗಮನ ಸೆಳೆಯುತ್ತಿದ್ದ ಗುಲ್ಬರ್ಗ ಉತ್ತರ ಅಸೆಂಬ್ಲಿ ಕ್ಷೇತ್ರದ ಅದೆಷ್ಟ್ಟೋ ಮತಗಟ್ಟೆಗಳಲ್ಲಿಯೂ ಮತದಾನ ನೀರಸವಾಗಿತ್ತು. ಬಿಸಿಲಿನ ತಾಪದ ಜೊತೆಗೇ ಸ್ಥಳೀಯ ಅನೇಕ ಕಾರಣಗಳೂ ಈ ರೀತಿಯ ನೀರಸ ಮತದಾನಕ್ಕೆ ಕಾರಣ ಎಂಬ ಮಾತುಗಳು ಅಲ್ಲಿ ಕೇಳಿಬಂದವು.
ದಂಪತಿಗಳ ಮತದಾನ: ಗುಲ್ಬರ್ಗದಲ್ಲಿ ಪುನರಾಯ್ಕೆ ಬಯಸಿ ಕಣದಲ್ಲಿರುವ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಪತ್ನಿ ರಾಧಾಬಾಯಿಯವರೊಂದಿಗೆ, ಬಿಜೆಪಿ ಎಂಎಲ್ಸಿ ಅಮರನಾಥ ಪಾಟೀಲ್ ಪತ್ನಿ ಕವಿತಾ ಪಾಟೀಲರೊಂದಿಗೆ, ಜವಳಿ ಸಚಿವ ಬಾಬೂರಾವ ಚಿಂಚನಸೂರ್ ಪತ್ನಿ ಭುವನೇಶ್ವರಿ ದೇವಿ ಜತೆಗೆ ಹಾಗೂ ಬಿಜೆಪಿ ಅಭ್ಯರ್ಥಿ ರೇವುನಾಯಕ ಬೆಳಮಗಿ ಬೆಳಮಗಿ ತಾಂಡಾದಲ್ಲಿ ಪತ್ನಿ ಜೀಮಾಬಾಯಿ ಜತೆ ಮತದಾನ ಮಾಡಿ ಗಮನ ಸೆಳೆದರು.
ಗುಲ್ಬರ್ಗ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ದಂಪತಿ ಸಮೇತ ಮತಗಟ್ಟೆಗೆ ಬಂದರಾದರೂ ತಾಯಿ ಅರುಣಾ ಅವರೊಂದಿಗೆ ತಮ್ಮ ಪತ್ನಿಯನ್ನು ನೆರವಿಗೆ ಬಿಟ್ಟು ತಾವೊಬ್ಬರೇ ಮತದಾನ ಮಾಡಿದರು. ಮತದಾನಕ್ಕೆಂದು ದತ್ತಾತ್ರೇಯ ಪಾಟೀಲ್ ಎಲ್ಲರಂತೆ ಸರತಿಯಲ್ಲಿ ನಿಂತರು. ದತ್ತಾತ್ರೇಯ ಪಾಟೀಲರ ಜತೆಗೆ ವಿಜಯ ಸೇವಲಾನಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

