ಜಾನುವಾರುಗಳ ಮಾರಾಟ ಬಲು ಜೋರು
ಕನ್ನಡಪ್ರಭ ವಾರ್ತೆ ್ಣ ಯಾದಗಿರಿ ್ಣ ಏ.19
ಕಾಲಜ್ಞಾನಿ ಬಸವಣ್ಣನವರ ಜೋಡು ಪಲ್ಲಕ್ಕಿ ಉತ್ಸವದ ನಿಮಿತ್ತ ಜಾನುವಾರುಗಳ ಜಾತ್ರೆ ಭರದಿಂದ ನಡೆಯಿತು. ಸುತ್ತಮುತ್ತಲಿನ ಗ್ರಾಮಗಳ ರೈತಾಪಿ ಜನ ತಮ್ಮ ರಾಸುಗಳನ್ನು ಮಾರಾಟಮಾಡಿ, ಹೊಸ ಜಾನುವಾರುಗಳನ್ನು ಖರೀದಿಸಿದರು.
ಜಿಲ್ಲೆಯ ಪ್ರಮುಖ ಜಾತ್ರೆಗಳ ಪೂಕಿ ಕೊಡೇಕಲ್ ಬಸವಣ್ಣ ಜಾತ್ರೆ ಕೂಡಾ ಒಂದಾಗಿದ್ದು, ಪಟ್ಟಣ ಸೇರಿದಂತೆ ರಾಯನಪಾಳೆ, ಹಗರಟಗಿ, ಕರೇಕಲ್, ತಾಳಿಕೋಟೆ, ಮುದ್ದೇಬಿಹಾಳ್, ಸುರಪುರ, ಎಣ್ಣಿ, ವಡಗೇರಿ, ಹಣಮಸಾಗರ, ಬೊಮ್ಮನ ಗುಡ್ಡ, ಗೆದ್ದಲಮತಿ, ಕುಪ್ಪಿ, ರಾಜನಕೊಳ್ಳುವ ಮತ್ತಿತರ ಗ್ರಾಮಗಳ ರೈತರು ತಮ್ಮ ಎತ್ತು, ಆಕಳು, ಎಮ್ಮೆ, ಕರುಗಳ ಮಾರಾಟದಲ್ಲಿ ತೊಡಗಿದ್ದಾರೆ.
ಗ್ರಾಮೀಣ ಪ್ರದೇಶದ ಜಾತ್ರೆಯಲ್ಲಿ ಜಾನುವಾರುಗಳ ಸಂತೆ ವಿಶೇಷವಾಗಿ ಗಮನ ಸೆಳಯತ್ತದೆ. ರೈತರು ಕೃಷಿ ಚಟುವಟಿಕೆಗಳಿಗೆ ಬೇಕಾಗುವ ಸಾಮಗ್ರಿ ಹಾಗೂ ರಾಸುಗಳನ್ನು ಇಂತಹ ಸಂದರ್ಭದಲ್ಲಿ ಹೆಚ್ಚಾಗಿ ಖರೀದಿಸುವುದಕ್ಕೆ ಮುಂದಾಗುತ್ತಾರೆ.
ನಾನಾ ತಳಿಯ ಜಾನುವಾರುಗಳು:ಕಿಲಾರಿ, ಜವಾರಿ, ಡವಣಿ, ಮೈಸೂರು, ಹೀಗೆ ನಾನಾ ತಳಿಯ ಜಾನುವಾರುಗಳನ್ನು ಜಾತ್ರೆಯಲ್ಲಿ ಮಾರಾಟಕ್ಕೆ ಲಭ್ಯ. ರೈತ ಮಾಲೀಕರು ತಮ್ಮ ಎತ್ತುಗಳ ಮೈತೊಳೆದು ವಿಭೂತಿ ಕುಂಕುಮದ ತಿಲಕವಿಟ್ಟು ಹಣೆಗೆ, ಗೆಜ್ಜೆ ಕಟ್ಟಿ ಶೃಂಗರಿಸಿ ಜಬರ್ದಸ್ತಾಗಿ ಕಾಣುವಂತೆ ಮಾಡಿಕೊಂಡು ದೂರದ ಊರುಗಳಿಂದ ಕರೆ ತರುತ್ತಾರೆ. ಜಾತ್ರೆ ಜರುಗುವ ಸ್ಥಳದಲ್ಲಿ ಬಿಡಾರ ಹೂಡುತ್ತಾರೆ. ವಿಶಾಲವಾದ ಸ್ಥಳಗಳಲ್ಲಿ ರಾಸುಗಳನ್ನು ಗೂಟಕ್ಕೆ ಕಟ್ಟಿ ಬಿಳಿಜೋಳ ಹಾಗೂ ಸಜ್ಜೆ ಮೇವು, ಸೇಂಗಾ ಮತ್ತು ಗೋಧಿ ಹೊಟ್ಟು ಹಾಕಿ ಮೇಯಿಸುತ್ತಾರೆ.
ಬೆಲೆ ಗಗನಕ್ಕೆ: ಇತ್ತೀಚೆಗೆ ಎತ್ತುಗಳ ಮೂಲಕ ಕೃಷಿ ಕಾರ್ಯಗಳನ್ನು ಮಾಡುವವರ ಸಂಖ್ಯೆ, ಬಹುತೇಕ ಇಳಿಮುಖವಾಗಿದೆ. ಹೆಚ್ಚಾಗಿ ಟ್ರಾಕ್ಟರ್ ಮೂಲಕ ಬಿತ್ತನೆ ಸೇರಿದಂತೆ ಎಲ್ಲ ಕಾರ್ಯಗಳನ್ನು ಮಾಡುತ್ತಾರೆ. ಪ್ರತಿಷ್ಠೆಗಾಗಿ ಎತ್ತುಗಳನ್ನು ಸಾಕುವ ಖಯಾಲಿ ಹೆಚ್ಚಾಗಿದೆ.
ವಿಶೇಷವಾಗಿ ಮುಂಗಾರು ಸಂಭ್ರಮದ ವೇಳೆ ರಾಯಚೂರು ಜಿಲ್ಲೆಯ ಮುನ್ನೂರು ಕಾಪು ಸಮಾಜದವರು ಸೇರಿದಂತೆ ಉಳಿದ ಸಮಾಜದಿಂದ ಸಾಂಸ್ಕೃತಿಕ ಹಬ್ಬ ಆಯೋಜಿಸುತ್ತಾರೆ. ಅಲ್ಲಿ ಮಣಭಾರದ ಕಲ್ಲುಗಳನ್ನು ಎಳೆಸುವ ಸ್ಪರ್ಧೆಗೆ ಅರ್ಹವಾದ ಗಜಗಾತ್ರದ ಎತ್ತುಗಳನ್ನು ಮಾರುತ್ತಾರೆ. ನಾಲ್ಕು ದಿನಗಳ ಕಾಲ ನಡೆಯುವ ಜಾನುವಾರು ಜಾತ್ರೆಯ ಅಂತಿಮ ದಿನದಂದು ಉತ್ತಮವಾದ ತಳಿಗಳನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಿ ಕಳುಹಿಸಿಕೊಡುವ ಸಂಪ್ರದಾಯ ರೂಢಿಯಲ್ಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

