ಶರಣಬಸವೇಶ್ವರ ರಥೋತ್ಸವ
ಚಿತ್ತಾಪುರ: ತಾಲೂಕಿನ ತೆಂಗಳಿಯಲ್ಲಿ ಅಪಾರ ಭಕ್ತರ ಸಮೂಹ ಮಧ್ಯೆ ಇಲ್ಲಿಯ ಆರಾಧ್ಯ ದೈವ ಭೀಮೇಶ್ವರ ಹೆಸರಲ್ಲಿ ಶರಣಬಸವೇಶ್ವರ ರಥೋತ್ಸವ ಅದ್ಧೂರಿಯಾಗಿ ಭಾನುವಾರ ಜರುಗಿತು.
ಶಾಂತೇಶ್ವರ ಹಿರೇಮಠದ ಪೀಠಾಧಿಪತಿ ಡಾ. ಶಾಂತಸೋಮನಾಥ ಶಿವಾಚಾರ್ಯರ ನೇತೃತ್ವದಲ್ಲಿ ರಥೋತ್ಸವ ಜರುಗಿತು. ಭಕ್ತರು ಉತ್ತತ್ತಿ, ಖಾರಿಕ್ ಮತ್ತು ಬಾಳೆಹಣ್ಣು ರಥಕ್ಕೆ ಎಸೆದು ಆರ್ಶೀವಾದ ಪಡೆದರು. ನಂತರ ವರ್ಣರಂಜಿತ ಸಿಡಿಮದ್ದು ಸಿಡಿಸಲಾಯಿತು. ಶನಿವಾರ ರಾತ್ರಿ ಕುಂಭ, ಕಳಸ, ಕೋಲು, ಪುರವಂತರ ಸೇವೆ, ವಿವಿಧ ಮಂಗಳ ವಾಧ್ಯ ವೃಂದಗಳೊಂದಿಗೆ ಭೀಮೇಶ್ವರ ಪಲ್ಲಕ್ಕಿಯು ಗ್ರಾಮದ ಪ್ರಮುಖ ಬೀದಿಗಳ ಮೂಲಕ ಭೀಮೇಶ್ವರ ದೇವಾಲಯ ತಲುಪಿತು. ನಂತರ ಬೆಳಗ್ಗೆ ಪುರವಂತರ ಅಗ್ನಿ ಪ್ರವೇಶ ನಡೆಯಿತು. ಭಕ್ತ ಸಮೂಹ ಅಗ್ನಿ ಪ್ರವೇಶ ಮಾಡಿದರು.
ಭೀಮೇಶ್ವರ ಜೀರ್ಣೊದ್ಧಾರ ಸಮಿತಿ ಅಧ್ಯಕ್ಷ ಸೋಮಶೇಖರ ಪಟ್ಟೆದ್, ಜಿಪಂ ಮಾಜಿ ಸದಸ್ಯ ಶಿವಶರಣಪ್ಪ ಅಂಡಗಿ, ತಾಪಂ ಮಾಜಿ ಅಧ್ಯಕ್ಷ ಪಂಡಿತರಾವ ಭೇರನ್, ಸುರೇಖಾ ಬಾಳದೆ, ಗ್ರಾಪಂ ಸದಸ್ಯರಾದ ಬಸವರಾಜ ತುಪ್ಪದ್, ಬಸವರಾಜ ಬಸ್ತೆ, ಮಲ್ಲಿಕಾರ್ಜುನ ನಂದೂರ, ಗುರಪ್ಪ ಹಡಪದ್, ಚಂದ್ರಶೇಖರ ಮಂಗಾ, ವೀರಭದ್ರಯ್ಯ ಸಾಲಿ, ನಾಗಣ್ಣ ಚೇಂಗಟಿ, ಭೀಮರಾವ ಭೇರನ್, ಬಸವರಾಜ ಬಾಳದೆ, ನೀಲಕಂಟ್ಟೆಪ್ಪ ನೀಲಿ, ಶಂಕರರಾವ ಬೆಟಗೇರಿ ತೊನಸನಳ್ಳಿ, ಡಾ. ಓಂಪ್ರಕಾಶ ಹೆಬ್ಬಾಳ ಹಾಗೂ ಸಂಗಾವಿ, ತೊಟ್ನಳ್ಳಿ, ತೋನಸಳ್ಳಿ, ಅರಜಂಬಗಾ, ಸಾಲಹಳ್ಳಿ, ಕೊಡದೂರ, ಕಲಗುರ್ತಿ, ಮಲಕೂಡ ಮತ್ತು ಕಾಳಗಿ ಗ್ರಾಮಸ್ಥರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

