12ನೇ ಶತಮಾನದ ಶಿಲಾಶಾಸನ ಪತ್ತೆ
ಯಾದಗಿರಿ: ಪಟ್ಟಣದ ರಾಮಗಿರಿ ಮಠದ ಹಿಂದೆ ಪಾಳುಬಿದ್ದ ಜಮೀನಿನಲ್ಲಿ ಕ್ರಿ.ಶ. ಸುಮಾರು 12ನೇ ಶತಮಾನದ ಶಿಲಾಶಾಸನ ಇತ್ತೀಚೆಗೆ ಪತ್ತೆಯಾಗಿದ್ದು, ಶೈವ ಧರ್ಮಕ್ಕೆ ಸಂಬಂಧಿಸಿದ ದಾನ ಶಾಸನ ಇದಾಗಿದೆ ಎಂದು ಶಾಸನವನ್ನು ಪತ್ತೆ ಹಚ್ಚಿದ ರಾಜಗೋಪಾಲ ವಿಭೂತಿ ಅಭಿಪ್ರಾಯಪಟ್ಟಿದ್ದಾರೆ. ಪತ್ತೆಯಾದ ಶಿಲಾಶಾಸನವನ್ನು 46 ಇಂಚು ಉದ್ದ, 17 ಇಂಚು ಅಗಲ, 7 ಇಂಚು ದಪ್ಪ ಇರುವ ಬಿಳಿ ಗ್ರಾನೈಟ್ ಶಿಲೆ ಮೇಲೆ ಬರೆಯಲಾಗಿದೆ. 22 ಸಾಲಿನ ಶಾಸನ ಇದಾಗಿದೆ. ಶಾಸನದ ಮೇಲ್ಭಾಗದ ಮಧ್ಯದಲ್ಲಿ ಶಿವಲಿಂಗ, ಬಲಕ್ಕೆ ಸೂರ್ಯಚಂದ್ರ, ಎಡಕ್ಕೆ ಕಠಾರಿ ಮತ್ತು ಆಕಳು ಚಿತ್ರವನ್ನು ಕೊರೆಯಲಾಗಿದ್ದು, ಸಾಮಾನ್ಯವಾಗಿ ಮಠಕ್ಕೆ ದಾನವಾಗಿ ನೀಡಿದ ದತ್ತಿ ಶಾಸನ ಇದಾಗಿರಬಹುದು ಎಂದು ತಿಳಿಸಿದ್ದಾರೆ. ಸಂಶೋಧನೆ ನಡೆಸಿದರೆ ಇತಿಹಾಸದ ಅಂಶಗಳು ಹಲವಾರು ಬೆಳಕಿಗೆ ಬರಲು ಸಾಧ್ಯ. ಅಲ್ಲದೆ ಇಂತಹ ಶಾಸನಗಳ ರಕ್ಷಣೆ ಅಗತ್ಯವೆಂದು ಶಿಲಾ ಶಾಸನಗಳ ಸಂಶೋಧಕ ಡಿ.ಎನ್.ಅಕ್ಕಿ ತಿಳಿಸಿದ್ದಾರೆ.
'ಮುತ್ತು ಬಂದಿದೆ ಕೇರಿಗೆ' ಕಾರ್ಯಕ್ರಮ
ಯಾದಗಿರಿ: ಇಲ್ಲಿಯ ಸರ್ಕಾರಿ ಪದವಿ ಕಾಲೇಜಿನಲ್ಲಿ ಏ.25 ರಂದು ಬೆಳಗ್ಗೆ 10ಕ್ಕೆ ಮುತ್ತು ಬಂದಿದೆ ಕೇರಿಗೆ ಕಾರ್ಯಕ್ರಮ ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಸುಭಾಶ್ಚಂದ್ರ ಕೌಲಗಿ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಸಂತ ಕವಿ ಕನಕದಾಸರ ತತ್ವಗಳನ್ನು ಕುರಿತು ಗುಲ್ಬರ್ಗ ವಿ.ಜಿ. ಮಹಿಳಾ ಕಾಲೇಜಿನ ಕನ್ನಡ ಪ್ರಾಧ್ಯಾಪಕರು ಡಾ. ಈಶ್ವರಯ್ಯ ಮಠ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಚಂದ್ರಶೇಖರ ಗೋಗಿ ಮತ್ತು ತಂಡದವರಿಂದ ಕನಕದಾಸರ ಹಾಡುಗಳ ಗಾಯನ. ಕನಕದಾಸರನ್ನು ಕುರಿತ ಉಪನ್ಯಾಸ, ವಾಚನ, ಗಾಯನ, ರಸಗ್ರಹಣದ ಈ ಶಿಬಿರವು ರಾಷ್ಟ್ರೀಯ ಸಂತ ಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಬೆಂಗಳೂರು ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಬೆಂಗಳೂರು ಇವರ ಆಶ್ರಯದಲ್ಲಿ ನಡೆಯಲಿದೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

