ಬಸ್ ತಡೆದು ಪ್ರತಿಭಟನೆ
ಗುರುಮಠಕಲ್: ತಮ್ಮ ಗ್ರಾಮದಿಂದ ಸುಮಾರು ಬಸ್ಗಳು ಹಾದು ಹೋದರೂ ಯಾವ ಒಂದು ಬಸ್ ನಮ್ಮ ಗ್ರಾಮದಲ್ಲಿ ನಿಲ್ಲುವುದಿಲ್ಲ ಎಂದು ಆರೋಪಿಸಿ ಬೋರಬಂಡ ಗ್ರಾಮದ ವಿದ್ಯಾರ್ಥಿಗಳು ರಸ್ತೆಗೆ ಅಡ್ಡಲಾಗಿ ಕಲ್ಲುಗಳನ್ನು ಹಚ್ಚಿ ಪ್ರತಿಭಟನೆ ನಡೆಸಿದರು.
8- 15 ರಿಂದ 9 ಗಂಟೆವರೆಗೆ ಯಾದಗಿರಿ ಸೇರಿದಂತೆ ವಿವಿಧ ಗ್ರಾಮಗಳಿಂದ ಬರುವ ಬಸ್ಗಳು ಎಲ್ಲಾವೂ ಬೋರಬಂಡ ಗ್ರಾಮದಿಂದ ಹಾದು ಹೋದರು ಯಾವುದೇ ಬಸ್ ನಿಲುಗಡೆ ಮಾಡುತ್ತಿಲ್ಲ. ಇದರಿಂದ ಶಾಲ ಕಾಲೇಜುಗಳಿಗೆ ಹೊಗಬೇಕಾದರೆ ಸಮಸ್ಯೆಯಾಗುತ್ತಿದೆ. ಒಂದು ವೇಳೆ ಬಸ್ನ್ನು ಬಿಟ್ಟು ಖಾಸಗಿ ವಾಹನಗಳಿಗೆ ಹೊಗಬೇಕಾದರೆ ಮುಂಗಡವಾಗಿ ಎಲ್ಲಾರೂ ಬಸ್ಪಾಸ್ ಪಡೆದಿರುವ ಹಿನ್ನೆಲೆಯಲ್ಲಿ ಬಸ್ಸಿಗಾಗಿ ಕಾಯುವುದು ಅನಿವಾರ್ಯ ಎಂದು ಆರೋಪಿಸಿ ರಸ್ತರೋಕೊ ನಡೆಸಿದರು. ವಿದ್ಯಾರ್ಥಿಗಳ ಪ್ರತಿಭಟನೆಯಿಂದ ಸುಮಾರು ಒಂದು ಗಂಟೆಗೂ ಅಧಿಕ ಕಾಲ ಹೆದ್ದಾರಿ ಬಂದ್ ಆಗಿ ಬಸ್ ಸಂಚಾರ ಸ್ಥಗಿತವಾಗಿತ್ತು. ನಂತರ ಗ್ರಾಮದ ಪ್ರಮುಖರು ಹಾಗೂ ಪೊಲೀಸ್, ಸಾರಿಗೆ ಇಲಾಖೆಯ ಅಧಿಕಾರಗಳ ಮಧ್ಯಸ್ಥಿಕೆಯಿಂದ ಮಕ್ಕಳು ಪ್ರತಿಭಟನೆ ಹಿಂದಕ್ಕೆ ಪಡೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

