ಗುಲ್ಬರ್ಗಾ

ಯಲ್ಲಮ್ಮದೇವಿ ಪಲ್ಲಕ್ಕಿ ಉತ್ಸವ

Published On :

ಆಳಂದ: ತಾಲೂಕಿನ ಹೊನ್ನಳ್ಳಿಯಲ್ಲಿ ಫೆ.13ರಿಂದ ಆರಂಭಗೊಂಡ ಯಲ್ಲಮ್ಮದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಪಟ್ಟಣದ ಹನುಮಾನ ಮಂದಿರದಿಂದ ಗುರುವಾರ ಸಾಂಪ್ರದಾಯಿಕವಾಗಿ ಸಂಜೆ ಪಲ್ಲಕ್ಕಿ ಉತ್ಸವಕ್ಕೆ ದೇವಸ್ಥಾನ ಕಮಿಟಿ ಅಧ್ಯಕ್ಷ ಪರಮೇಶ್ವರ ಕೆ.ಸ್ವಾಮಿ ಅವರು ಪಲ್ಲಕ್ಕಿಗೆ ವಿಶೇಷ ಪೂಜೆ ಸಲ್ಲಿಸಿ ಪಲ್ಲಕ್ಕಿ ಹೊತ್ತು ಉತ್ಸವಕ್ಕೆ ಚಾಲನೆ ನೀಡಿದರು.
ಚೌಡಕಿ ಮೇಳ, ಬ್ಯಾಂಡ್ ಭಜಂತ್ರಿ ಸೇರಿದಂತೆ ಜನಪದ ನೃತ್ಯಗಳೊಂದಿಗೆ ಸಾಗಿದ ಉತ್ಸವ ರಾತ್ರಿ ಹೊನ್ನಳ್ಳಿ ಗ್ರಾಮಕ್ಕೆ ತಲುಪಿತು.
ಕಂದಾಯ ನಿರೀಕ್ಷಕ ಅಬ್ದುಲ ವಾಹಬ, ಗ್ರಾಮದ ದಳಪತಿ, ಬಸವರಾಜ ಪೊಲೀಸ್ ಪಾಟೀಲ, ಮುಖಂಡ ಬಾಬುರಾವ್ ಹದರಿ, ಫುಲಚಂದ ರಾಠೋಡ ಮಲ್ಲೇಶಪ್ಪ ಬಿರಾದಾರ, ವಿ.ಐ. ಲಕ್ಷ್ಮರಾವ ತೇಲಾಕುಣಿ, ಮಲ್ಲಣ್ಣಾ ತಲಾಟಿ, ದತ್ತಪ್ಪ ಅಟ್ಟೂರ, ಗ್ರಾಪಂ ಸದಸ್ಯ ಮಹಾಂತೇಶ ಮಾನೆ, ಕಲ್ಯಾಣಿ ಕೋರೆ, ಪ್ರಭುಲಿಂಗ ಪಾಟೀಲ, ಮುಖಂಡರಾದ ದಯಾನಂದ ಸೇರಿಕಾರ, ಬಸವರಾಜ ಫುಲಾರ, ಸೂರ್ಯಕಾಂತ ಭೋಸಲೆ, ಭೀಮಾಶಂಕರ ಕುಂಬಾರ, ಗ್ರಾಮ ಲೆಕ್ಕಿಗ ಶರಣಬಸಪ್ಪ, ಹಕ್ಕಿ, ಅನೇಕರು ಉತ್ಸವ ಚಾಲನೆಯಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮ: 14 ರಂದು ಬೆಳಗ್ಗೆ 5ಕ್ಕೆ ಯಲ್ಲಮ್ಮದೇವಿಗೆ ಅಭಿಷೇಕ, ಮಧ್ಯಾಹ್ನ 12ಕ್ಕೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ, ರಾತ್ರಿ 10ಕ್ಕೆ ಪೌರಾಣಿಕ ನಾಟಕ ಜರುಗಲಿದೆ. ಫೆ.15ರಂದು ಬೆಳಗ್ಗೆ 10ಕ್ಕೆ ಮನೋರಂಜನೆ ಮತ್ತು ಮಧ್ಯಾಹ್ನ 4ಕ್ಕೆ ಜಂಗಿ ಪೈಲ್ವಾನರ ಕುಸ್ತಿಗಳು ನಡೆಯಲಿದೆ. ನಂತರ ಪ್ರಸಾದ ವಿತರಣೆ, ಸಂಜೆ 7ಕ್ಕೆ ಮದ್ದು ಸುಡುವ ಕಾರ್ಯಕ್ರಮ ಬಳಿಕ 10ಕ್ಕೆ ಧಾರ್ಮಿಕ ಕಾರ್ಯಕ್ರಮ ನಡೆಯುವುದು. 16 ರಂದು ಸಂಜೆ 7ಕ್ಕೆ ದೀಪೋತ್ಸವ ಜರುಗಲಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.